Advertisement
ಮೂಳೂರು ಜುಮ್ಮಾ ಮಸೀದಿಯ ಧರ್ಮಗುರು ಅಬ್ದುಲ್ ರೆಹಮಾನ್ ಮದನಿ ಅಧ್ಯಕ್ಷತೆ ವಹಿಸಿದ್ದರು. ಎಲ್ಲೂರು ದಾರುಲ್ ಅಮಾನ್ ವಿದ್ಯಾ ಸಂಸ್ಥೆಯ ಸ್ಥಾಪಕಾಧ್ಯಕ್ಷ ಸಲೀಮ್ ಮದನಿ ಕುತ್ತಾರ್ ದುವಾ ಆಶೀರ್ವಚನಗೆ„ದರು. ಶೆ„ಖುನಾ ಕುಂಜಾಲಕಟ್ಟೆ ಉಸ್ತಾದ್ ದುವಾದೊಂದಿಗೆ ಶುಭ ಹಾರೈಸಿದರು.
ಅಂತಾರಾಜ್ಯ ಮಟ್ಟದ ದಫ್ ಸ್ಪರ್ಧೆಯಲ್ಲಿ ಸುಮಾರು 25 ತಂಡಗಳು ಭಾಗವಹಿಸಿದ್ದವು. ಸ್ಪರ್ಧೆಯಲ್ಲಿ ಕಟಪಾಡಿ – ಮಣಿಪುರ ಕಲಂದರ್ ಷಾ ದಫ್ ಕಮಿಟಿಯು ಪ್ರಥಮ ಸ್ಥಾನ ಹಾಗೂ ಬಿ.ಸಿ.ರೋಡ್ ರಿಫಾಯಿ ದಫ್ ಕಮಿಟಿ ದ್ವಿತೀಯ ಹಾಗೂ ಪಂಜಿಮೊಗರು ರಫಾಯಿ ದಫ್ ಕಮಿಟಿ ತೃತೀಯ ಸ್ಥಾನ ಗಳಿಸಿದೆ. ದಫ್ ಹಾಡುಗಾರಿಕೆಯಲ್ಲಿ ಬಶೀರ್ ಉಸ್ತಾದ್ ಮಜೂರು, ಹಂಝ ಉಸ್ತಾದ್ ಮಣಿಪುರ ಹಾಗೂ ಬದ್ರಿಯಾ ಮಲ್ಲಾರ್ ಇವರು ವೈಯಕ್ತಿಕ ಪ್ರಶಸ್ತಿ ಗಳಿಸಿದ್ದಾರೆ. ಸಮಾರೋಪ ಸಮಾರಂಭವು ಮನ್ಶರ್
ಮಹಿಳಾ ಶರಿಯತ್ ಕಾಲೇಜಿನ ಪ್ರಾಂಶುಪಾಲ ನಝೀರ್ ಅಹ್ಸಾನಿ ಪರಪ್ಪು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು.
Related Articles
Advertisement
ಸಂಘಟನೆಯ ಕಾರ್ಯದರ್ಶಿ ಜುನೇದ್ ಉಚ್ಚಿಲ ಸ್ವಾಗತಿಸಿದರು. ಎರ್ಮಾಳು ಜುಮ್ಮಾ ಮಸೀದಿಯ ಖತೀಬ ಶಬ್ಬೀರ್ ಫೆ„ಝೀ ಪ್ರಸ್ತಾವನೆಗೈದರು. ತನ್ವೀರ್ ಪೊಲ್ಯ ವಂದಿಸಿದರು. ಸದಸ್ಯ ಅತೀಫ್ ಕಾರ್ಯಕ್ರಮ ನಿರೂಪಿಸಿದರು.