“ಇದು ಸ್ಪಿನ್ ಟ್ರ್ಯಾಕ್ ಆಗಿತ್ತು. ಹೀಗಾಗಿ ವೇಗಿಗಳಿಗೆ ಇಲ್ಲಿ ಸಣ್ಣ ಸ್ಪೆಲ್‌ಗಳಷ್ಟೇ ಲಭಿಸುತ್ತಿತ್ತು. ಇದರಲ್ಲೂ ಅವರು ನೂರು ಪ್ರತಿಶತ ಸಾಧನೆಯೊಂದಿಗೆ ಮಿಂಚಿದರು. ಶಮಿ 5 ವಿಕೆಟಿಗೆ ಕೇವಲ 10 ಚಿಲ್ಲರೆ ಓವರ್‌ಗಳನ್ನಷ್ಟೇ ತೆಗೆದುಕೊಂಡರು’ ಎಂದರು.
Advertisement
“ಸ್ಪಿನ್ನರ್‌ಗಳೇ ವಿಕೆಟ್ ಕೀಳುವುದು ಎಂದಾದರೆ ತಮಗೇನು ಕೆಲಸ ಎಂದು ಪೇಸ್ ಬೌಲರ್ ಭಾವಿಸಿದರೆ ಅವರಿಗೆ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗದು. ಲಭಿ ಸಿದ ಅವಕಾಶವನ್ನೇ ಬಳಸಿಕೊಳ್ಳುವುದು ಜಾಣತನ.
ತಂಡದ ಬ್ಯಾಟಿಂಗ್ ಬಗ್ಗೆ ಪ್ರತಿಕ್ರಿಯಿಸಿದ ಕೊಹ್ಲಿ, “ಈ ಪಂದ್ಯದಲ್ಲಿ ಮಾಯಾಂಕ್ ಮತ್ತು ರೋಹಿತ್ ಅದ್ಭುತ ಪ್ರದರ್ಶನ ನೀಡಿದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಪೂಜಾರ ಉತ್ತಮ ಬ್ಯಾಟಿಂಗ್ ನಡೆಸಿದರು’ ಎಂದರು. ಸೋಲಿಗೆ ಶಮಿಯೇ ಕಾರಣ!
ತಮ್ಮ ಸೋಲಿಗೆ ಮೊಹಮ್ಮದ್ ಶಮಿ ಅವರ ಘಾತಕ ಬೌಲಿಂಗೇ ಕಾರಣ ಎಂದವರು ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾ ಡು ಪ್ಲೆಸಿಸ್.
“ಸೆಕೆಂಡ್ ಇನ್ನಿಂಗ್ಸ್ ಚೇಸಿಂಗ್ ಯಾವತ್ತೂ ಕಠಿನ. 4ನೇ ದಿನದ ತನಕ ನಾವು ಉತ್ತಮ ಪ್ರದರ್ಶನವನ್ನೇ ಕಾಯ್ದುಕೊಂಡು ಬಂದಿ ದ್ದೆವು. ಆದರೆ ಇಂದು ಎಲ್ಲವೂ ತಲೆ ಕೆಳಗಾ ಯಿತು. ಮೊಹಮ್ಮದ್ ಶಮಿ ಘಾತಕವಾಗಿ ಪರಿಣಮಿಸಿ ಪಂದ್ಯದ ವ್ಯತ್ಯಾಸಕ್ಕೆ ಕಾರಣ ರಾದರು’ ಎಂದು ಡು ಪ್ಲೆಸಿಸ್ ಹೇಳಿದರು.