Advertisement

99 ಕ್ಕೆ ಔಟಾಗಿ ಭಾರಿ ನಿರಾಸೆ ಅನುಭವಿಸಿದ್ದ ಸ್ಪಿನ್ ದಿಗ್ಗಜ ಶೇನ್ ವಾರ್ನ್!

12:14 PM Mar 05, 2022 | Team Udayavani |

ಮೆಲ್ಬೋರ್ನ್ : ಕ್ರಿಕೆಟ್ ಲೋಕ ಕಂಡ ಅದ್ಬುತ ಸ್ಪಿನ್ನರ್ ಗಳಲ್ಲಿ ಒಬ್ಬರಾದ ಶೇನ್ ವಾರ್ನ್ ಬ್ಯಾಟಿಂಗ್ ನಲ್ಲೂ ತನ್ನ ಸಾಮರ್ಥ್ಯ ತೋರಿದ್ದರು, ಅವರ ಜೀವನದಲ್ಲಿ ಮರೆಯಲಾರದ ಘಟನೆಯೊಂದು ಬ್ಯಾಟ್ ಹಿಡಿದಾಗ ನಡೆದಿದ್ದು ಕ್ರಿಕೆಟ್ ಪ್ರೇಮಿಗಳಿಗೆಲ್ಲರಿಗೂ ಭಾರಿ ನಿರಾಸೆ ತಂದಿಟ್ಟಿತ್ತು.

Advertisement

2001 ರಲ್ಲಿ ಆಸ್ಟ್ರೇಲಿಯಾ ನ್ಯೂಜಿ ಲ್ಯಾಂಡ್ ಪ್ರವಾಸ ಕೈಗೊಂಡಿದ್ದಾಗ ಪರ್ತ್ ನಲ್ಲಿ ನಡೆಯುತ್ತಿದ್ದ 3ನೇ ಟೆಸ್ಟ್ ಪಂದ್ಯದಲ್ಲಿ ವಾರ್ನ್ ಅವರು ಕೇವಲ ಒಂದು ರನ್ ನಿಂದ ಶತಕ ವಂಚಿತರಾಗಿದ್ದು ಭಾರಿ ಸುದ್ದಿಯಾಗಿತ್ತು. 99ರನ್ ವಾರ್ನ್ ಅವರ ಅಂತರ್ ರಾಷ್ಟ್ರೀಯ ಪಂದ್ಯಗಳಲ್ಲಿನ ಗರಿಷ್ಠ ಸ್ಕೋರ್ ಆಗಿದೆ.

ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಜಿ ಲ್ಯಾಂಡ್ 534 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಗುರಿ ಬೆನ್ನಟ್ಟಿದ ಆಸೀಸ್ ವಿಕೆಟ್ ಗಳನ್ನೂ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆ ವೇಳೆ ನೇರವಾದ ವಾರ್ನ್157 ಎಸೆತಗಳಲ್ಲಿ 99ರನ್ ಗಳಿಸಿ ಔಟಾದರು. 10 ಬೌಂಡರಿಗಳು ಅವರ ಇನ್ನಿಂಗ್ಸ್ ನಲ್ಲಿ ಸೇರಿದ್ದವು.

ಇನ್ನೇನು ಶತಕ ಸಿಡಿಸುತ್ತಾರೆ ಎನ್ನುವ ನಿರೀಕ್ಷೆಯಲ್ಲಿರುವಾಗ ವೆಟ್ಟೋರಿ ಎಸೆದ ಚೆಂಡು ವಾರ್ನ್ ಬ್ಯಾಟ್ ಗೆ ತಗುಲಿ ರಿಚರ್ಡ್ಸನ್ ಅವರ ಕೈ ಸೇರಿತು. ಆ ಕ್ಷಣ ಎಲ್ಲರೂ ಭಾರಿ ಬೇಸರ ಪಡುವ ಕ್ಷಣ ನಿರ್ಮಾಣವಾಯಿತು. ಆ ಪಂದ್ಯ ಡ್ರಾ ದಲ್ಲಿ ಮುಕ್ತಾಯಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next