Advertisement

ಜೇಡ ಬರುವ ಹೊತ್ತಿದು!

01:57 PM Nov 10, 2018 | |

ಜೇಡ ಕೈಗೆ ವಾಚು ಕಟ್ಟಿಕೊಂಡು, ಸಮಯ ನೋಡಿಕೊಂಡು ಬರುತ್ತದೆಯೋ ಗೊತ್ತಿಲ್ಲ. ಆದರೆ, ಇಂಗ್ಲೆಂಡ್‌ನ‌ಲ್ಲಿ ನಡೆದ ಒಂದು ಸಂಶೋಧನೆ ಆ ಅನುಮಾನವನ್ನು ಹುಟ್ಟುಹಾಕಿದ್ದು ಸುಳ್ಳಲ್ಲ. ಸಂಶೋಧಕರು ‘ಸ್ಪೈಡರ್‌ ಇನ್‌ ದ ಹೌಸ್‌’ ಎಂಬ ಮೊಬೈಲ್‌ ಆ್ಯಪ್‌ ಒಂದನ್ನು ರೂಪಿಸಿದರು.

Advertisement

ಬ್ರಿಟನ್‌ನ ಮಂದಿ ಅದನ್ನು ತಮ್ಮ ಮೊಬೈಲುಗಳಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡರು. ಬಳಕೆದಾರರು ಮಾಡಬೇಕಾಗಿದ್ದಿಷ್ಟೆ. ಯಾವಾಗ ತಮ್ಮ ಕಣ್ಣಿಗೆ ಜೇಡ ಕಾಣುತ್ತದೆಯೋ ಆ ಕೂಡಲೆ ಆ್ಯಪ್‌ ನಲ್ಲಿದ್ದ ಗುಂಡಿ ಒತ್ತುವುದು. ಲಕ್ಷಾಂತರ ಮಂದಿ ಈ ಪ್ರಯೋಗದಲ್ಲಿ ಪಾಲ್ಗೊಂಡರು. ಅವರಲ್ಲಿ ಹೆಚ್ಚಿನವರು ಜೇಡವನ್ನು ಕಂಡರೆ ಮಾರು ದೂರ ಓಡುವವರು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ! ಈ ಪ್ರಯೋಗದಿಂದ ಕುತೂಹಲಕರ ಮಾಹಿತಿ ಹೊರಬಿದ್ದಿತ್ತು. ಹೆಚ್ಚಿನವರ ಕಣ್ಣಿಗೆ ಜೇಡ ದರುಶನ ಕೊಟ್ಟಿದ್ದು ರಾತ್ರಿ 7.30ರ ಆಸುಪಾಸಿನಲ್ಲಿ!

ಮನೆಯ ಸಂದುಗೊಂದುಗಳಲ್ಲಿ, ಕತ್ತಲ ಜಾಗಗಳಲ್ಲಿ ಗೂಡುಕಟ್ಟುವ ಜೇಡವನ್ನು ಬಹುತೇಕರು ತಮ್ಮ ಮನೆಯ ಮೇಲೆ ದಂಡೆತ್ತಿ ಬಂದ ಶತ್ರುವಿನಂತೆ ಕಾಣುತ್ತಾರೆ. ಮನುಷ್ಯ ಪೂರ್ವಗ್ರಹ ಪೀಡಿತ ದೃಷ್ಟಿಯಿಂದ ಪ್ರಪಂಚವನ್ನು ನೋಡುತ್ತಾನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಬೆಳಗ್ಗೆ ಎದ್ದಿರುವ, ರಾತ್ರಿ ಮಲಗುವ ನಮಗೆ ಅದೇ ಸಹಜ. ಬೆಳಗ್ಗೆ ಮಲಗಿ ರಾತ್ರಿ ಏಳುವುದೆಂದರೆ ಅದು ಅಸಹಜವೆಂದು ತೋರುತ್ತದೆ.

ಇಂಥ ಹಲವು ಪೂರ್ವಾಗ್ರಹಗಳಿಗೆ, ಅಪನಂಬಿಕೆಗಳಿಗೆ ಬಲಿಯಾದ ಅನೇಕ ಜೀವಿಗಳಲ್ಲಿ ಜೇಡವೂ ಒಂದು. ಇಡೀ ಭೂಮಿಯನ್ನು ತನ್ನದೇ ಸ್ವತ್ತೆಂಬಂತೆ ಅಳತೆಗೋಲಿನಲ್ಲಿ ಅಳೆದಿಟ್ಟುಕೊಂಡಿರುವ ಮನುಷ್ಯನ ಅಪರಾಧಗಳ ಎದುರು, ಮೂಲೆಯಲ್ಲಿ, ಪುಡಿ ಜಾಗದಲ್ಲಿ ಮನೆ ಮಾಡುವ ಜೇಡ ಏನೇನೂ ಅಲ್ಲ. ಇದನ್ನು ಅರಿತವರು ಮೇಜಿನ ಸಂದಿನಲ್ಲೋ, ಟೀಪಾಯಿ ಕೆಳಗೋ ಗೂಡು ಕಟ್ಟುವ ಜೇಡವನ್ನು ಓಡಿಸಲಾರರು.

Advertisement

Udayavani is now on Telegram. Click here to join our channel and stay updated with the latest news.

Next