Advertisement

ಸ್ಪೈಸ್‌ಜೆಟ್‌ಗೆ ಈ ತ್ತೈಮಾಸಿಕದಲ್ಲಿ ಭರ್ಜರಿ ಆದಾಯ

10:02 AM Aug 10, 2019 | Team Udayavani |

ಗುರುಗ್ರಾಮ(ಹರಿಯಾಣಾ): ಕಡಿಮೆ ಬೆಲೆಗೆ ವಾಯು ಯಾನ ಅವಕಾಶ ಕಲ್ಪಿಸುವ ಸ್ಪೈಸ್‌ ಜೆಟ್‌ ವಿಮಾನಯಾನ ಕಂಪೆನಿ ಈ ತ್ತೈಮಾಸಿಕದಲ್ಲಿ ಭರ್ಜರಿ ಆದಾಯ ಕಂಡಿದೆ.

Advertisement

ಅದರ ಒಟ್ಟು ಆದಾಯ 3145 ಕೋಟಿ ರೂ.ಗಳಿಗೇರಿದ್ದು, ಲಾಭ 261.7 ಕೋಟಿ ರೂ. ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಆದಾಯ 2253 ಕೋಟಿ ರೂ. ಆಗಿದ್ದು, 38.1 ಕೋಟಿ ರೂ. ನಷ್ಟ ಅನುಭವಿಸಿತ್ತು.

ಇನ್ನು, ಕಳೆದ ತ್ತೈಮಾಸಿಕದಲ್ಲಿ ಸ್ಪೈಸ್‌ಜೆಟ್‌ನ ನಿರ್ವಹಣೆ ವೆಚ್ಚ 2220.4 ಕೋಟಿ ರೂ. ಆಗಿದ್ದು ಈ ಬಾರಿ 3002.1ಕೋಟಿ ರೂ. ಆಗಿದೆ. ಆದರೂ ಈ ಬಾರಿ ಉತ್ತಮ ಲಾಭ ಕಂಡಿರುವುದು ಗಮನಾರ್ಹ. ಜೆಟ್‌ ಏರ್‌ವೇಸ್‌ ಮುಚ್ಚಿದ ಬೆನ್ನಲ್ಲೇ ಸ್ಪೈಸ್‌ಜೆಟ್‌ ಲಾಭಾಂಶ ಏರಿಕೆಯಾಗಲು ಕಾರಣ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next