Advertisement

Uttara Kannada ಕ್ಷೇತ್ರದ ರೈಲ್ವೆ ಯೋಜನೆಗಳ ಶೀಘ್ರ ಅನುಷ್ಠಾನಗೊಳಿಸಿ: ಸಂಸದ ಕಾಗೇರಿ

07:04 PM Aug 02, 2024 | Team Udayavani |

ಶಿರಸಿ (ಉತ್ತರಕನ್ನಡ ಜಿಲ್ಲೆ): ಬಹು ವರ್ಷಗಳಿಂದ ಬೇಡಿಕೆಯಾಗಿರುವ ಅನೇಕ ರೈಲ್ವೆ ಮಾರ್ಗಗಳ ಅನುಷ್ಠಾನ, ಹೊಸ ರೈಲುಗಳ ಆರಂಭ, ವಿಶೇಷ ನಿಲ್ದಾಣಗಳಿಗೆ ಸಂಬಂಧಿಸಿ ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣರಲ್ಲಿ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿ ಮನವಿ ಸಲ್ಲಿಸಿದರು.

Advertisement

ಹೊಸದಿಲ್ಲಿಯಲ್ಲಿ ಶುಕ್ರವಾರ ಕೇಂದ್ರ ಸಚಿವರ ಭೇಟಿಯಾದ ಸಂಸದ ಕಾಗೇರಿ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಹು  ಬೇಡಿಕೆಯಾದ ಹುಬ್ಬಳ್ಳಿ-ಅಂಕೋಲಾ, ತಾಳಗುಪ್ಪ- ಶಿರಸಿ – ಹುಬ್ಬಳ್ಳಿ, ತಾಳಗುಪ್ಪ- ಹೊನ್ನಾವರ, ಬೆಳಗಾವಿ -ಕಿತ್ತೂರು- ಹುಬ್ಬಳ್ಳಿ ರೈಲ್ವೆ ಯೋಜನೆಗಳ  ಶೀಘ್ರವಾಗಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.

ಹೊಸ ರೈಲುಗಳಾದ ವಾಸ್ಕೋ- ಬೆಳಗಾವಿ- ಮೀರಜ್ ಪ್ಯಾಸೆಂಜರ್ ರೈಲ್ವೆ, ಕ್ಯಾಸಲ್ ರಾಕ್- ಮೀರಜ್- ಕ್ಯಾಸಲ್ ರಾಕ್ ಮಾರ್ಗದಲ್ಲಿ ಪ್ರಾರಂಭಿಸಲು ವಿನಂತಿಸಿದ ಕಾಗೇರಿ, ಇತರ ಬೇಡಿಕೆಗಳಾದ ಕುಮಟಾ ಮತ್ತು ಗೋಕರ್ಣ ರೈಲ್ವೆ ನಿಲ್ದಾಣದಲ್ಲಿ ಎರಡನೇ ಪ್ಲಾಟ್‌ಫಾ ರ್ಮ್ ನಿರ್ಮಾಣ, ಕೊಂಕಣ ರೈಲ್ವೆಯಲ್ಲಿ ಸಂಚರಿಸುವ ರೈಲುಗಳಲ್ಲಿ ಉತ್ತರ ಕನ್ನಡದ ಪ್ರಯಾಣಿಕರಿಗೆ ಹೆಚ್ಚಿನ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಗೆ ಅವಕಾಶ ಕಲ್ಪಿಸುವಿಕೆ, ಕೆಲವು ಸ್ಥಳಗಳಲ್ಲಿ ಮೇಲ್ಸೇತುವೆ ಮತ್ತು ಅಂಡರ್ ಪಾಸ್‌ಗಳ ನಿರ್ಮಿಸುವಂತೆ ಸಂಸದರು ಸಚಿವರಲ್ಲಿ ಮನವಿ ಮಾಡಿದರು.

ಸಂಸದರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ರೈಲ್ವೆ ರಾಜ್ಯ  ಸಚಿವ ಸೋಮಣ್ಣ, ಶೀಘ್ರದಲ್ಲಿ ಈ ಎಲ್ಲಾ ಕಾಮಗಾರಿಗಳ ಅನುಷ್ಠಾನಗೊಳಿಸಲು ವಿಶೇಷ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next