Advertisement
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ| ರಿಚರ್ಡ್ ವಿನ್ಸೆಂಟ್ ಡಿಸೋಜ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದರಿಂದ, ಜಿಲ್ಲೆಯ ವಿವಿಧೆಡೆ ರಾತ್ರಿ ವೇಳೆಯಲ್ಲೂ ಲಸಿಕಾಕರಣ ನಡೆಯುತ್ತಿದೆ. ಬಗದಲ್ ಗ್ರಾಮದಲ್ಲಿ 17 ಜನರಿಗೆ ರಾತ್ರಿ ವೇಳೆಯಲ್ಲಿ ಲಸಿಕೆ ನೀಡಲಾಗಿದೆ.
Related Articles
Advertisement
ಆಯಾ ಗ್ರಾಮಗಳಲ್ಲಿನ ಲಸಿಕಾಕರಣ ಉಸ್ತುವಾರಿಯನ್ನು ಗ್ರಾಮ ಪಡೆಗಳಿಗೆ ವಹಿಸಲಾಗಿದೆ. ಲಸಿಕಾ ಪ್ರಗತಿ ಕಡಿಮೆ ಇರುವ ಕಡೆಗೆ ಹೆಚ್ಚಿನ ಗಮನ ನೀಡಲಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಕಾಲೇಜಿನ ಎನ್ನೆಸ್ಸೆಸ್, ಎನ್ಸಿಸಿ ಸ್ವಯಂ ಸೇವಕರು ಬೀದರ್ ತಾಲೂಕಿನ 5 ಗ್ರಾಮಗಳಿಗೆ ರವಿವಾರ ಲಸಿಕಾಕರಣದ ಜನಜಾಗೃತಿಗೆ ತೆರಳಿದರು.
ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿಗಳ ಮನವಿ
ಜಿಲ್ಲೆಗೆ ನಿಗದಿಪಡಿಸಿದ ಕೋವಿಡ್-19 ಲಸಿಕಾಕರಣ ಗುರಿ ತಲುಪಲು ಲಸಿಕಾಕರಣದ ಪ್ರಕ್ರಿಯೆಯನ್ನು ಈಗ ಮತ್ತಷ್ಟು ವೇಗಗೊಳಿಸಲಾಗಿದೆ. ಜಿಲ್ಲಾಡಳಿತದ ಸೂಚನೆಯಂತೆ ಜಿಲ್ಲೆಯ ಎಲ್ಲಾ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯು ಲಸಿಕಾ ನೀಡಿಕೆ ಕಾರ್ಯದಲ್ಲಿ ಸಕ್ರಿಯ ಭಾಗಿಯಾಗಿದ್ದಾರೆ. ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಜನರಲ್ಲಿ ಮನವಿ ಮಾಡಿದ್ದಾರೆ.