Advertisement

Odisha ಜನರು ನಿಂದನೀಯ ಭಾಷೆ ಮೆಚ್ಚಿಕೊಳ್ಳುವುದಿಲ್ಲ:ಬಿಜೆಪಿಗೆ ಪಟ್ನಾಯಕ್ ತಿರುಗೇಟು

05:02 PM May 17, 2024 | Team Udayavani |

ಭುವನೇಶ್ವರ: “ಕೆಲವು ಮುಖ್ಯಮಂತ್ರಿಗಳು ಮತ್ತು ಕೇಂದ್ರ ಮಂತ್ರಿಗಳು ಒಡಿಶಾದಲ್ಲಿ ಚುನಾವಣ ಸಮಯದಲ್ಲಿ ರಾಜಕೀಯ ಪ್ರವಾಸಿಗಳಾಗಿ ಬಂದು ನಂತರ ಕಣ್ಮರೆಯಾಗುತ್ತಾರೆ” ಎಂದು ಸಿಎಂ ಮತ್ತು ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

Advertisement

ಪಿಟಿಐನೊಂದಿಗೆ ಮಾತನಾಡಿದ ಪಟ್ನಾಯಕ್,’ ಭಾಷಣಗಳು ಒಡಿಶಾದ ಜನರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮತ್ತು ಅವರಲ್ಲಿ ಅನೇಕರು ಅವಹೇಳನಕಾರಿ ಮತ್ತು ಅವಹೇಳನಕಾರಿಯಾಗಿ ಬಳಸುತ್ತಿರುವುದು ಅತ್ಯಂತ ದುರದೃಷ್ಟಕರವಾಗಿದೆ. ನಿಂದನೀಯ ಭಾಷೆಯನ್ನು ನಾನು ಎಂದಿಗೂ ನಂಬುವುದಿಲ್ಲ ಮತ್ತು ನಮ್ಮ ರಾಜ್ಯದ ಜನರು ಅಂತಹ ಭಾಷೆಯನ್ನು ಮೆಚ್ಚುವುದಿಲ್ಲ” ಎಂದು ನಿರಂತರ ಟೀಕೆಗಳ ಕುರಿತು ಆಕ್ರೋಶ ಹೊರ ಹಾಕಿದ್ದಾರೆ.

ಒಡಿಶಾದಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಜತೆಯಾಗಿ ಚುನಾವಣೆ ನಡೆಯುತ್ತಿದೆ. ಬಿಜೆಪಿ ಅಧಿಕಾರಕ್ಕೆ ಏರಲು ಮತ್ತು ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಭರ್ಜರಿ ಪ್ರಚಾರ ನಡೆಸುತ್ತಿದೆ. ಸಿಎಂ ಪಟ್ನಾಯಕ್ ವಿರುದ್ಧ ಪ್ರಮುಖ ನಾಯಕರು ಟೀಕಾ ಪ್ರಹಾರಗಳನ್ನು ನಡೆಸುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ಬಾರಿ ಜನರು ಪಟ್ನಾಯಕ್ ಅವರಿಗೆ ಬೀಳ್ಕೊಡುಗೆ ನೀಡಲು ಸಿದ್ಧರಾಗಿದ್ದಾರೆ ಎಂದಿದ್ದರು.

24 ವರ್ಷದಿಂದ ನವೀನ್ ಪಟ್ನಾಯಕ್ ಅವರು ಮುಖ್ಯಮಂತ್ರಿಯಾಗಿ ರಾಜ್ಯವನ್ನು ಮುನ್ನಡೆಸುತ್ತಿರುವುದು ವಿಶೇಷ. ಬಿಜೆಡಿ ಭದ್ರ ಕೋಟೆ ಭೇದಿಸಲು ಬಿಜೆಪಿ ಹೊಸ ರೀತಿಯ ರಣತಂತ್ರಗಳನ್ನೂ ನಡೆಸುತ್ತಿದೆ. ಈ ನಡುವೆ ಕಾಂಗ್ರೆಸ್ ಕೂಡ ಪ್ರಚಾರ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next