Advertisement
2004ರಲ್ಲಿ ಬಿಜೆಪಿ ಪ್ರವೇಶಿಸಿದಾಕ್ಷಣ ಕೆ.ಪಿ. ಜಗದೀಶ ಅಧಿಕಾರಿ ಅವರಿಗೆ ಲಭಿಸಿದ್ದು ಮಂಡಲಾಧ್ಯಕ್ಷತೆ. ಅವಧಿ ಮುಗಿದ ಕೂಡಲೇ ಜಿಲ್ಲಾ ಉಪಾಧ್ಯಕ್ಷತೆ ಪ್ರಾಪ್ತಿ. ಈ ಹುದ್ದೆಯಲ್ಲಿ ನಿರಂತರ ಮೂರನೇ ಅವಧಿಯಲ್ಲಿ ಮುಂದುವರಿಕೆ. 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಕೆ. ಅಭಯಚಂದ್ರ ಅವರಿಗೆ ತೀವ್ರ ಸ್ಪರ್ಧೆ ನೀಡಿದರು. ಕಾಂಗ್ರೆಸ್ ಮೂಲದವರಾದರೂ ಬಿಜೆಪಿಗೆ ಪ್ರವೇಶವಾದ ಬಳಿಕ ಪಕ್ಷಕ್ಕೆ ಬಲತಂದು ಕೊಟ್ಟವರು.
ಪಕ್ಷದಲ್ಲಿ ಹಿರಿಯರೊಂದಿಗೆ, ಒಡನಾಡಿಗಳೊಂದಿಗೆ ಶ್ರದ್ಧಾ ಪೂರ್ವಕ ದುಡಿದವನು ನಾನು. ಸಹಜವಾಗಿ ನಾನೂ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿ. ನೀವು ಬರುವ ಮೊದಲು ಬಿಜೆಪಿ ಹೇಗಿತ್ತು? ಮತ್ತೆ ಏನೇನಾಗಿದೆ?
2004ರ ಮೊದಲಿಗೂ ಈಗಿನ ಸ್ಥಿತಿಗೂ ಅಜಗಜಾಂತರವಿದೆ. ಬಹುತೇಕ ಪಂಚಾಯತ್‌ಗಳಲ್ಲಿ ಆಡಳಿತ ಹಿಡಿದಿದ್ದೇವೆ, ಎಲ್ಲ 5 ಜಿ.ಪಂ. ಕ್ಷೇತ್ರಗಳೂ ಬಿಜೆಪಿ ಪಾಲಾಗಿವೆ. ಮೂಡಬಿದಿರೆ ಪುರಸಭೆಯಲ್ಲಿ ಶೂನ್ಯದಿಂದ 4 ಸೀಟು ಬರುವಂತಾಯಿತು. ಮೂಲ್ಕಿ ನ.ಪಂ.ನಲ್ಲಿ ಒಂದೇ ಸ್ಥಾನ ಇತ್ತು. ಈಗ ಬಿಜೆಪಿಯದೇ ಆಡಳಿತ. ವಿಧಾನಸಭಾ ಚುನಾವಣೆಗಳಲ್ಲಿ ಮೂರನೇ ಸ್ಥಾನದಲ್ಲಿದ್ದ ಬಿಜೆಪಿ 2008ರಲ್ಲಿ ಕಾಂಗ್ರೆಸ್‌ನೆದುರು 6,000 ಮತಗಳಿಂದ, ಮತ್ತು 2013ರಲ್ಲಿ ಉಮಾನಾಥ ಕೋಟ್ಯಾನ್ ಸ್ಪರ್ಧಿಸಿದಾಗ 4,000 ಮತಗಳ ಅಂತರದಿಂದ ಎರಡನೇ ಸ್ಥಾನಕ್ಕೆ ಬಂದಿದೆ. ಸಂಸತ್ ಚುನಾವಣೆಯಲ್ಲಿ ವಿಜೇತ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್‌ಗೆ 76,000 ಮತ ಬಿದ್ದದ್ದು ಮೂಡಬಿದಿರೆ ಕ್ಷೇತ್ರದಲ್ಲಿ. ಹೀಗೆ ಪಕ್ಷದ ಮಂಡಲಾಧ್ಯಕ್ಷ, ಜಿಲ್ಲಾ ಉಪಾಧ್ಯಕ್ಷನಾಗಿ ಚೆನ್ನಾಗಿ ಕೆಲಸ ಮಾಡಿರುವ ತೃಪ್ತಿ ಇದೆ.
Related Articles
ಕ್ಷೇತ್ರದ ಒಳಗಿನ ಅಭ್ಯರ್ಥಿ, ಓಡಾಟ, ಒಡನಾಟ ಇರುವ, ಜಾತಿಮತ ಭೇದವಿಲ್ಲದ ಅಭ್ಯರ್ಥಿ ನಿಲ್ಲುವಂತಾದರೆ ಹಿಂದುತ್ವದ ಆಧಾರದಲ್ಲಿ, ಅಭಿವೃದ್ಧಿಯ ನೆಲೆಯಲ್ಲಿ ಶೇ. 100 ಗೆಲುವು ನಮ್ಮದೇ. ಕೇಂದ್ರದ ಬಿಜೆಪಿ ಸರಕಾರದ ಬಗ್ಗೆ ಜನರ ಒಲವು ಇದೆ. ರಾಜ್ಯ ಸರಕಾರದ ಆಡಳಿತದ ಬಗ್ಗೆ ವಿರೋಧವಿದೆ.
Advertisement
ಕಾಂಗ್ರೆಸ್‌ಗೆ ಮತ ಹಾಕಿದರೆ ಬಿಜೆಪಿ ಗೆಲ್ಲುತ್ತದೆ ಎಂದು ಜೆಡಿಎಸ್ ನಾಯಕ ಅಮರನಾಥ ಶೆಟ್ಟಿ ಹೇಳಿದ್ದಾರಲ್ಲ?ಸ್ಪಷ್ಟ ಹೇಳ್ತೇನೆ. ಅಂಥ ಬೆಳವಣಿಗೆ ಖಂಡಿತ ಇಲ್ಲ. ಬಿಜೆಪಿಯದೇ ಓಟ್ ಬ್ಯಾಂಕ್ ನಿರ್ಮಾಣ ಆಗಿದೆ. ಬಿಜೆಪಿ ಸ್ವಂತ ಬಲದಲ್ಲಿ ಗೆಲ್ಲುತ್ತದೆ. ಜನ ಭ್ರಷ್ಟಾಚಾರ ನೋಡಿ ನೋಡಿ ಬೇಸತ್ತು ಹೋಗಿದ್ದಾರೆ. ನೆಮ್ಮದಿಯ, ಅಭಿವೃದ್ಧಿ ಪರವಾದ ಸರಕಾರ ಬೇಕಾದರೆ ಬಿಜೆಪಿ ಬೇಕು ಎಂದು
ಎಲ್ಲರೂ ಬಯಸಿದ್ದಾರೆ. ಧನಂಜಯ ಮೂಡಬಿದಿರೆ