Advertisement

ಕನ್ನಡಕ ಇದ್ದುದಕ್ಕೆ ವರನ ತಿರಸ್ಕರಿಸಿದ ವಧು!

03:47 AM Jun 26, 2021 | Team Udayavani |

ಜಾಜ್‌ಪುರ್‌/ಲಕ್ನೋ: ನಿಶ್ಚಿತವಾಗಿರುವ ಎಲ್ಲ ವಿವಾಹಗಳು ನಡೆಯುವುದಿಲ್ಲ ಎನ್ನುವುದು ಉತ್ತರಪ್ರದೇಶ ಮತ್ತು ಒಡಿಶಾದ ಎರಡು ಉದಾಹರಣೆಗಳಿಂದ ದೃಢಪಟ್ಟಿದೆ. ಉತ್ತರ ಪ್ರದೇಶದ ಔರಿಯಾದಲ್ಲಿ ಮದುಮಗನಿಗೆ ಕನ್ನಡಕದ ಸಹಾಯವಿಲ್ಲದೆ ಓದಲು ಸಾಧ್ಯವಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆಯೇ ಮದುವೆ ರದ್ದಾಗಿದೆ. ಜೂ.20ರಂದು ಮದುವೆ ದಿನ ಮದುಮಗ ಸದಾಕಾಲ ಕನ್ನಡಕ ಧರಿಸಿಯೇ ಇರುತ್ತಿದ್ದದ್ದು ಗೊತ್ತಾಯಿತು.

Advertisement

ವಧು ಸೇರಿ ಆಕೆಯ ಕುಟುಂಬದ ಹಲವರು ಮದುಮಗನ ಮೇಲೆ ಕೊಂಚ ಕಾಲ ನಿಗಾ ಇರಿಸಿ, ಆತನಿಗೆ ದೃಷ್ಟಿ ಸಹಜವಾಗಿಲ್ಲ ಎಂದು ತಿಳಿದುಕೊಂಡರು. ತಮ್ಮ ಊಹೆ ಖಚಿತಪಡಿಸಿಕೊಳ್ಳಲು ಮದುಮಗನ ಬಳಿ, ಕನ್ನಡಕ ಇಲ್ಲದೆಯೇ ಪತ್ರಿಕೆ ಓದಲು ಹೇಳಿದರು. ಆತ ತಡಬಡಾಯಿಸಿದ್ದರಿಂದ ವಧು ಆತನನ್ನು ಮದುವೆಯಾಗಲು ಒಲ್ಲೆ ಎಂದಳು. ಆಕೆಯ ನಿರ್ಧಾರಕ್ಕೆ ಕುಟುಂಬ ಸದಸ್ಯರೂ ಸಮ್ಮತಿ ಸೂಚಿಸಿದ್ದಾರೆ.

ಇನ್ನು, ಒಡಿಶಾದಲ್ಲಿ ವರ ಮದುವೆ ಊಟದಲ್ಲಿ ಮಟನ್‌ ಇಲ್ಲ ಎಂಬ ಕಾರಣಕ್ಕೆ ಮದುವೆ ಬೇಡ ಎಂದು ಹೇಳಿದ್ದಾನೆ. ಜತೆಗೆ ಮತ್ತೂಬ್ಬ ಯುವತಿ ಜತೆಗೆ ವಿವಾಹವಾಗಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next