Advertisement

ಸಬ್ಸಿಡಿಗಾಗಿಯೇ ಮಕ್ಕಳ ಸಿನಿಮಾಗಳನ್ನು ಮಾಡಬೇಡಿ

11:38 AM Feb 06, 2017 | Team Udayavani |

ಬೆಂಗಳೂರು: ಕೇವಲ ಸರ್ಕಾರ ಕೊಡುವ ಸಬ್ಸಿಡಿಗೋಸ್ಕರವೇ ಮಕ್ಕಳ ಸಿನಿಮಾಗಳನ್ನು ತಯಾರು ಮಾಡಬೇಡಿ. ಗುಣಮಟ್ಟ ಇಟ್ಟುಕೊಂಡು, ಒಳ್ಳೆಯ ಕಥೆ ಆಧಾರಿತ ಮಕ್ಕಳ ಸಿನಿಮಾಗಳನ್ನು ತಯಾರಿಸಬೇಕು ಎಂದು ಚಿಲ್ಡ್ರನ್ಸ್‌ ಫಿಲ್ಮ್ ಸೊಸೈಟಿ ಇಂಡಿಯಾ (ಸಿಎಫ್ಎಸ್‌ಐ)ದ ಸಿಇಒ ಶ್ರವಣ್‌ಕುಮಾರ್‌ ಹೇಳಿದರು. ಒರಾಯನ್‌ ಮಾಲ್‌ನಲ್ಲಿ ನಡೆಯು ತ್ತಿರುವ 9ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಆಯೋಜಿಸಿದ್ದ ಸಂವಾದ ದಲ್ಲಿ ಅವರು ಮಾತನಾಡಿದರು. 

Advertisement

ಮಕ್ಕಳ ಸಿನಿಮಾಗಳ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಲೇ ಇದೆ. ಅದರಲ್ಲೂ ಗುಣಮಟ್ಟದ ಚಿತ್ರಗಳೇ ಬರುತ್ತಿರುವುದು ವಿಶೇಷ. ಯಾವುದೇ ನಿರ್ಮಾಪಕ, ನಿರ್ದೇಶಕರಾಗಲಿ, ಸರ್ಕಾರ ಕೊಡುವಂತಹ ಸಬ್ಸಿಡಿ ಆಸೆಗಾಗಿ ಮಕ್ಕಳ ಸಿನಿಮಾಗಳನ್ನು ತಯಾರು ಮಾಡಬಾರದು. ನೈಜತೆಗೆ ಹತ್ತಿರವಾಗಿರುವಂತಹ ಮತ್ತು ಎಲ್ಲಾ ವರ್ಗದವರನ್ನು ಸೆಳೆಯುವಂತಹ ಕಥೆವುಳ್ಳ ಮಕ್ಕಳ ಸಿನಿಮಾಗಳನ್ನು ಮಾಡಬೇಕು ಎಂದು ಕಿವಿಮಾತು ಹೇಳಿದರು. ಪ್ರತಿಯೊಬ್ಬರಲ್ಲೂ ಮಕ್ಕಳ ಗುಣ ಇರುತ್ತದೆ. ಮಕ್ಕಳ ಚಿತ್ರಗಳನ್ನು ಕೇವಲ ಮಕ್ಕಳೇ ನೋಡಬೇಕು ಅಂತೇನೂ ಇಲ್ಲ.

ಯುವಕರು, ಪೋಷಕರು ಕೂಡ ಮಕ್ಕಳ ಚಿತ್ರಗಳನ್ನು ನೋಡಬೇಕು. ಆ ಮೂಲಕ ಮಕ್ಕಳ ಚಿತ್ರಗಳನ್ನು ಇನ್ನಷ್ಟು ಪ್ರೋತ್ಸಾಹಿಸಿ, ಬೆಳೆಸಬೇಕು. ಪ್ರಸ್ತುತ ಈಗ ಬರುತ್ತಿರುವ ಅನಿಮೇಷನ್‌ ಭರಾಟೆಯಲ್ಲಿ ನಮ್ಮಂತಹ ಅನೇಕ ನಿರ್ದೇಶಕರು ಮಾಡುತ್ತಿರುವ ಸಿನಿಮಾಗಳು ಯಾವ ಲೆಕ್ಕವೂ ಇಲ್ಲ. ಈಗಂತೂ ಸಾಕಷ್ಟು ತಂತ್ರಜ್ಞಾನ ಬೆಳೆದಿದೆ. ಅದನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ಉತ್ತಮ ಮಕ್ಕಳ ಸಿನಿಮಾಗಳನ್ನು ಕೊಡಲು ಸಾಧ್ಯವಿದೆ.

ಮಕ್ಕಳ ಸಿನಿಮಾಗಳನ್ನು ತಯಾರು ಮಾಡುವ ಮುನ್ನ, ಪ್ರತಿಯೊಬ್ಬ ನಿರ್ಮಾಪಕ, ನಿರ್ದೇಶಕರು ಆ ಬಗ್ಗೆ ಯೋಚಿಸಬೇಕಾದ ಅಗತ್ಯವಿದೆ ಎಂದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್‌ಬಾಬು, ನಿರ್ದೇಶಕರಾದ ನಂಜುಂಡೇಗೌಡ, “ಆ್ಯಕ್ಟರ್‌’ ಚಿತ್ರದ ನಿರ್ದೇಶಕ ದಯಾಳ್‌ಪದ್ಮನಾಭ್‌, “6 3′ ನಿರ್ದೇಶಕ ಮಹಾಂತೇಶ್‌, “ಇಶಿ¤’ ನಿರ್ದೇಶಕರಾದ ಪ್ರಭಾ, ನರಹರಿರಾವ್‌, ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್‌ ಎಚ್‌.ಬಿ.ದಿನೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next