Advertisement

ಚಂದ್ರಯಾನ 2ರಲ್ಲಿ ಗ್ರಾಮೀಣ ಪ್ರತಿಭೆ ಚಂದ್ರಕಾಂತ್ ಶ್ರಮ

09:00 AM Jul 23, 2019 | Hari Prasad |

ಮಣಿಪಾಲ: ‘ಭಾರತದ ಕನಸಿನ ಯೋಜನೆ ಚಂದ್ರಯಾನ 2 ಯಶಸ್ವಿಯಾಗಿ ಉಡ್ಡಯನಗೊಂಡಿದೆ. ಇದಕ್ಕಾಗಿ ಇಡೀ ವಿಶ್ವವೇ ‘ಭಾರತದತ್ತ ನೋಡುತ್ತಿತ್ತು. ಈ ಯೋಜನೆಯ ಹಿಂದೆ ಹಲವಾರು ವಿಜ್ಞಾನಿಗಳು ಕೆಲಸಮಾಡಿದ್ದಾರೆ. ಅವರ ಶ್ರಮ ಪ್ರಾಥಮಿಕವಾಗಿ ಯಶಸ್ವಿಯಾಗಿದೆ. ಆ ತಂಡದಲ್ಲಿ ಕೊಲ್ಕತಾದ ಕೃಷಿಕನ ಮಗನೂ ಸೇರಿದ್ದ ಎಂಬ ಸಂಗತಿ ಬಯಲಾಗಿದೆ.

Advertisement

ಕೊಲ್ಕತಾದ ಹೂಗ್ಲಿಯ ಶಿಬ್‌ಪುರ್ ಗ್ರಾಮದ ಕೃಷಿಕ ಮಧುಸೂದನ್ ಅವರ ಪುತ್ರ ಚಂದ್ರಕಾಂತನ ಪಾತ್ರ ಮಹತ್ವದ್ದಾಗಿತ್ತು. ಬಡ ರೈತ ಕುಟುಂಬ ಅವರದು. ತಮ್ಮ ಮಗನಿಗೆ ಸೂರ್ಯಕಾಂತ್ ಎಂದು ಹೆಸರು ಇಡಲು ಇಚ್ಚೆ ಹೊಂದಿದ್ದರಂತೆ. ಆದರೆ, ಶಿಕ್ಷಕರೊಬ್ಬರು ಚಂದ್ರಕಾಂತ್ ಎಂದು ಹೆಸರು ಇಡಲು ಸೂಚಿಸಿದ್ದರು. ಆ ಪ್ರಕಾರ ಚಂದ್ರಕಾಂತ್ ಎಂದು ಹೆಸರು ಇಟ್ಟಿದ್ದರು.

ಇದೀ ಚಂದ್ರಯಾನ 2ರ ತಂಡದಲ್ಲಿ ಚಂದ್ರಕಾಂತ್ ಎಂಬ ಹೆಸರಿನ ವಿಜ್ಞಾನಿ ಸೇರಿಕೊಂಡಿದ್ದು, ಕಾಕತಾಳೀಯವಾಗಿದೆ. ಚಂದ್ರಕಾಂತ್ ಚಂದ್ರಯಾನದಲ್ಲಿ ಹಿರಿಯ ವಿಜ್ಞಾನಿಯಾಗಿ ಬದಲಾಗಿದ್ದಾರೆ. ಚಂದ್ರಕಾಂತ್ ಅವರು ಉಪಗ್ರಹದ ಅಂಟೇನಾ ಸಿಸ್ಟಮ್ ಅನ್ನು ರೂಪಿಸಿದ್ದಾರೆ. ಚಂದ್ರಯಾನ-1, ಜಿಎಸ್‌ಎಟಿ-12 ಸೇರಿ ಮೊದಲಾದ ಕಾರ್ಯಗಳಲ್ಲಿ ಇವರು ಬಹಳ ಮುಖ್ಯಪಾತ್ರ ವಹಿಸಿದ್ದಾರೆ. ಪ್ರಸ್ತುತ ಚಂದ್ರಕಾಂತ್ ಉಪ ಯೋಜನಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

2001ರಲ್ಲಿ ಇಸ್ರೋ ಸೇರಿದ ಇವರು ತಮ್ಮ ಪರಿಶ್ರಮ ಮತ್ತು ಕಾರ್ಯ ಬದ್ಧತೆಗೆ ಗುರುತಿಸಿಕೊಂಡಿದ್ದರು. ಚಂದ್ರಕಾಂತ್ ಅವರ ಹಿರಿಯ ಸಹೋದರ ಶಶಿಕಾಂತ್ ಅವರೂ ವಿಜ್ಞಾನಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next