ದೋಟಿಹಾಳ: ಪರೀಕ್ಷೆಗಾಗಿ ಮಗನನ್ನು ಹೊತ್ತುಕೊಂಡು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ,ಪರೀಕ್ಷೆ ಬರೆಸುತ್ತಿರುವ ಪಾಲಕರ ದುಸ್ಥಿತಿ ಇದು.
ಹೌದು ಇದು ನಂಬುವ ವಿಷಯ.. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮೂದೇನೂರು ಗ್ರಾಮದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯಾದ ಅಕ್ಬುಲ್ ಕರಿಂ ವಿದ್ಯಾರ್ಥಿಯ ಪರಿಸ್ಥಿತಿ ಇದು. ಸದ್ಯ ಆರಂಭವಾದ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಬರೆಯಲು ಕೇಂದ್ರಕ್ಕೆ ಬರಲು ಪಾಲಕರ ಆಸರೆಯೇಬೇಕು. ಇಂತ ಪರಿಸ್ಥಿತಿ ಯಾವ ಪಾಲಕರಿಗೂ ಬರುವುದು ಬೇಡ.
ಮುದೇನೂರ ಗ್ರಾಮದ ನಫೀಸಾ ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡಿದ್ದು, ಇದ್ದ ಒಬ್ಬ ಮಗ ವಿಕಲಚೇತನನಾಗಿದ್ದು ಜೀವನ ನಡೆಸುವುದೇ ಇವರಿಗೆ ಕಷ್ಟವಾಗಿದೆ.
ಚಿಕ್ಕ ವಯಸ್ಸಿನಲ್ಲಿಯೇ ಇವಳ ಪಾಲಕರು ಸಂಬಂಧಿಕರಲ್ಲಿಯೇ ಇವಳನ್ನು ಮದುವೆ ಮಾಡಿಕೊಟ್ಟರು ಮಗ ಹುಟ್ಟಿದ ಒಂಬತ್ತು ತಿಂಗಳಲ್ಲಿಯೇ ಇವಳ ಗಂಡ ಅಪಘಾತದಿಂದ ಮರಣ ಹೊಂದಿದ್ದಾರೆ. ಇದ್ದ ಒಬ್ಬ ಮಗನ್ನ ಕಟ್ಟಿಕೊಂಡು ಜೀವನ ನಡೆಸಲು ತವರಮನೆ ಆಶ್ರಯ ಪಡೆದಿದ್ದಾರೆ. ಇದ್ದ ಒಬ್ಬ ಮಗನನ್ನು ಚೆನ್ನಾಗಿ ಓದಿಸಿ ಜೀವನ ನಡೆಸಬೇಕೆಂಬ ಇವಳ ಕನಸಿಗೆ ಆ ವಿಧಿ ಆಟವೇ ಬೇರೆ ಆಯಿತು. ಮಗ ಆರನೇ ತರಗತಿ ಓದುತ್ತಿರುವಾಗ ಕಾಲಿನ ಹೆಬ್ಬಳ್ಳಿನಿಂದ ನರ ದೌರ್ಬಲ್ಯ ಕಾಣಿಸಿಕೊಂಡು ಇಂದು ಎದ್ದು ನಿಲ್ಲಲು ಬರದಂತಾಗಿದೆ. ಆರಂಭದಲ್ಲಿ ಅಲ್ಪ ಸ್ವಲ್ಪ ಜೂಲಿ ಹೊಡೆಯುತ್ತಾ ನಡೆಯುತ್ತಿದ್ದನು ಕೊನೆಗೆ ಸಂಪೂರ್ಣವಾಗಿ ಎದ್ದು ನಿಲ್ಲುವುದು ಮತ್ತು ನಡೆದಾಡಲು ಬರದಂತಾಯಿತು ಇವನ ಪರಿಸ್ಥಿತಿ. ಸದ್ಯ ಎರಡು ಕಾಲುಗಳನ್ನು ಮಡಚಲು ಬರದಂತೆ ಕುಂತಲ್ಲಿ ಕೂರುವಂತಾಗಿದೆ.
ಗಂಡನನ್ನು ಕಳೆದುಕೊಂಡು ಇದ್ದ ಒಬ್ಬ ಮಗನು ವಿಕಲಚೇತನಾಗಿದ್ದರಿಂದ ಈ ತಾಯಿ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಸದ್ಯ ಗ್ರಾಮದಲ್ಲಿರುವ ಹಿಂದುಳಿದ ವರ್ಗದ ಹಾಸ್ಟೆಲ್ ನಲ್ಲಿ ಮಕ್ಕಳಿಗೆ ದಿನಗೂಲಿ ಕೆಲಸದ ಮೇಲೆ ಅಡುಗೆ ಕೆಲಸಕ್ಕೆ ಸೇರಿಕೊಂಡಿದ್ದಾಳೆ ನಫೀನಾ. ಇದರಿಂದ ಬಂದ ಅಲ್ಪಸ್ವಲ್ಪ ಹಣದಿಂದಲೇ ತಮ್ಮ ಜೀವನ ನಡೆಸುತ್ತಿದ್ದಾಳೆ.
ಮಗನ ಚಿಕಿತ್ಸೆಗಾಗಿ ಇವರ ತಮ್ಮಂದಿರು ತಾಯಿಯವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಮಗ ಗುಣಮುಖನಾಗುತ್ತಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ. ಏನು ಮಾಡುವುದು ನನ್ನ ಬಾಳಿನಲ್ಲಿ ವಿಧಿಯಾಟ ಎಷ್ಟು ಎಷ್ಟು ಕ್ರೂರಿಯಾಗಿದ್ದಾನೆ ಎಂದು ಗಳಗಳೇ ಅತ್ತು ಕಣ್ಣೀರು ಹಾಕಿದಳು.
ನನ್ನ ಪಾಲಿಗೆ ನನ್ನ ತಮ್ಮಂದಿರೇ ದೇವರಾಗಿದ್ದಾರೆ ಇವರು ಇಲ್ಲದಿದ್ದರೆ ಇಂಥ ಮಗಳನ್ನು ಕಟ್ಟಿಕೊಂಡು ಜೀವನ ನಡೆಸುವುದು ಕಷ್ಟ ಏಕೆಂದರೆ ಇವನ ದೈನಂದಿನ ಕೆಲಸಗಳು ಮಾಡಬೇಕಾದರೆ ಇಬ್ಬರು ಆಸರೆಯೇಬೇಕು ಹೀಗಿರುವಾಗ ಇವನನ್ನು ಸಾಕುವುದೇ ನನಗೆ ಕಷ್ಟವಾಗಿದೆ ನನ್ನ ತಮ್ಮಂದಿರು ಇವನನ್ನು ಹೂವಿನ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ. ಆದರೆ ಸರ್ಕಾರದಿಂದ ಇದುವರೆಗೂ ನಮಗೆ ಯಾವುದೇ ಸೌಲಭ್ಯಗಳು ಸಿಕ್ಕಿಲ್ಲ. ಮನೆಯಲ್ಲಿ ಒಂದು ವೀಲ್ ಚೇರು ಕೂಡ ಇಲ್ಲ. ಮನೆಯಿಂದ ಹೊರಗೆ ಹೋಗಬೇಕಾದರೆ ಹೊತ್ತುಕೊಂಡೆ ಹೋಗಬೇಕು. ನನ್ನ ಮಗನಿಗೆ ಚಿಕಿತ್ಸೆ ನೀಡಿ ಅವನು ನಡೆದಾಡಲು ಬಂದರೆ ಸಾಕು ಎಂಬುವುದು ಇವಳ ಆಸೆ ಆಸೆಯಾಗಿದೆ. ಇವಳ ನೆರವಿಗೆ ಸರ್ಕಾರ ಅಥವಾ ಜನಪ್ರತಿನಿಧಿಗಳಾಗಲಿ ಸಹಕಾರ ನೀಡಿದರೆ ಒಂದು ಬಾಳು ಬೆಳಗಿದಂತಾಗುತ್ತದೆ ಎಂಬುವುದು ಸಾರ್ವಜನಿಕರ ಕಳಕಳಿಯಾಗಿದೆ.
ಚಿಕ್ಕ ವಯಸ್ಸಿನಲ್ಲಿ ಇವನು ಶಾಲೆಯಲ್ಲಿ ಚೆನ್ನಾಗಿ ಓದುತ್ತಿದ್ದ. 5ನೇ ತರಗತಿಯಲ್ಲಿ ಉತ್ತಮ ಅಂಕ ಪಡೆದು ಮೊರಾರ್ಜಿ ವಸತಿ ಶಾಲೆಯಲ್ಲಿ ಪರೀಕ್ಷೆ ಬರೆದು, ಬೇವೂರು ವಸತಿ ಶಾಲೆಗೆ ಆಯ್ಕೆಯಾದ. ನಾಲ್ಕೈದು ತಿಂಗಳು ಆ ಶಾಲೆಯಲ್ಲಿ ಕಲಿತ, ನಂತರ ಇವನ ಕಾಲುಗಳಲ್ಲಿ ನರ ದೌರ್ಬಲ್ಯ ಕಾಣಿಸಿಕೊಂಡಿದ್ದರಿಂದ ಅಲ್ಲಿಂದ ಮರಳಿ ಮನೆಗೆ ಬಂದನು. ಗ್ರಾಮದಲ್ಲಿಯೇ ತನ್ನ ಕಲಿಕೆಯನ್ನು ಆರಂಭಿಸಿದ. ಸದ್ಯ ಗ್ರಾಮದಲ್ಲಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.
ಮುದೇನೂರ ಗ್ರಾಮದ ವಿಕಲಚೇತನ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿದ್ದ ಅವನಿಗೆ ಮನೆಯಿಂದ ಹೋಗಿ, ಬರಲು ವೀಲ್ ಚೇರ್ ವ್ಯವಸ್ಥೆ ಇಲ್ಲ, ಕೇಂದ್ರಕ್ಕೆ ವರದಿಗಾರರು ಬಂದ ಮೇಲೆ ಗ್ರಾಮ ಪಂಚಾಯತಿಯಿಂದ ವೀಲ್ ಚೇರ್ ತರಿಸಲಾಯಿತು.
ನಫೀನಾ ಅವಳ ತಾಯಿ ಮಾತನಾಡಿ ನನ್ನ ಮಗಳು ಗಂಡನನ್ನು ಕಳೆದುಕೊಂಡು ವಿಕಲಚೇತನ ಮಗನ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾಳೆ. ಇವಳಿಗೆ ಸರ್ಕಾರದಿಂದ ಯಾವುದಾದರೂ ಒಂದು ಕೆಲಸ ನೀಡಿದರೆ ಮಗನನ್ನು ಸಾಕಿಕೊಂಡು ಜೀವನ ನಡೆಸುತ್ತಾಳೆ ಎಂದು ಬೇಡಿಕೊಂಡರು.
ಸದ್ಯ ಇವನ ಪರೀಕ್ಷೆ ನಡೆಯುತ್ತಿದ್ದು ಪ್ರತಿದಿನ ನನ್ನ ತಮ್ಮಂದಿರು ಬೈಕ್ ನಲ್ಲಿ ಕರೆದುಕೊಂಡು ಹೋಗಿ ಪರೀಕ್ಷೆ ಬರೆಸಿಕೊಂಡು ಬರುತ್ತಿದ್ದಾರೆ. ಶಾಲೆಯಲ್ಲಿ ಚೆನ್ನಾಗಿ ಓದು ಬರೆಯುತ್ತಿದ್ದಾನೆ. ಯಾರಿಗಾದರೂ ಇವನ ಕಾಯಿಲೆಗೆ ಚಿಕಿತ್ಸೆ ನೀಡುವ ವೈದ್ಯರು ಇದ್ದರೆ ತಿಳಿಸಿ. ಸರಕಾರ ಚಿಕಿತ್ಸೆಗೆ ನೆರವಾದರೆ ಒಳ್ಳೆಯದು ಎಂದು ಹೇಳಿದರು.
ವಿಕಲಚೇತನರಿಗೆ ಕೋಟಿಗಟ್ಟಲೆ ಹಣ ಖರ್ಚು ಮಾಡುವ ಸರಕಾರ ಇಂತಹ ಕುಟುಂಬಕ್ಕೆ ಒಂದು ವೀಲ್ ಚೇರು ನೀಡುವ ಕೆಲಸ ಮಾಡದಿರುವುದು ಒಂದು ದುರಂತವೇ ಸರಿ ಎಂದು ಪ್ರಜ್ಞಾವಂತ ನಾಗರಿಕರು ಆರೋಪಿಸುತ್ತಿದ್ದಾರೆ.
-ವರದಿ: ಮಲ್ಲಿಕಾರ್ಜುನ ಮೆದಿಕೇರಿ ದೋಟಿಹಾಳ.