Advertisement

ದಾವೋಸ್‌ನಲ್ಲಿ ವಿಶೇಷ ಯೋಗ ಶಿಬಿರ

11:04 AM Jan 21, 2018 | |

ಹೊಸದಿಲ್ಲಿ: ಸ್ವಿಜರ್ಲೆಂಡ್‌ನ‌ ದಾವೋಸ್‌ನಲ್ಲಿ ಇದೇ ತಿಂಗಳ 23ರಿಂದ 26ರವರೆಗೆ ನಡೆಯಲಿರುವ ವಿಶ್ವ ಆರ್ಥಿಕ ಒಕ್ಕೂಟದ ಮಹಾ ಸಮ್ಮೇಳನದ ವೇಳೆ, ವಿಶೇಷ ಯೋಗ ತರಗತಿಗಳನ್ನು ನಡೆಸಲಾಗುವುದು ಎಂದು ಭಾರತದ ವಿದೇಶಾಂಗ ಇಲಾಖೆ ಹೇಳಿದೆ.

Advertisement

ಸಮ್ಮೇಳನಕ್ಕೆ ತೆರಳಲಿರುವ ಪ್ರಧಾನಿ ಮೋದಿ ನೇತೃತ್ವದ ಭಾರತೀಯ ನಿಯೋಗದಲ್ಲಿ ಇಬ್ಬರು ಯೋಗ ಶಿಕ್ಷಕರೂ ತೆರಳಲಿದ್ದು, ಸಮ್ಮೇಳನ ನಡೆಯುವ ಸ್ಥಳದ ಸುತ್ತಲಿನ ಹಿಮಚ್ಛಾದಿತ ಇಳಿಜಾರು ಪ್ರದೇಶಗಳಲ್ಲಿ ಸಮ್ಮೇಳನದ ಪ್ರತಿನಿಧಿಗಳಿಗಾಗಿ ಈ ಯೋಗ ತರಗತಿಗಳನ್ನು ನಡೆಸಲಿದ್ದಾರೆ ಎಂದು ಇಲಾಖೆ ಹೇಳಿದೆ.  ಮಹಾ ಸಮ್ಮೇಳನದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ ಸೇರಿ 70 ರಾಷ್ಟ್ರಗಳ ವಿವಿಧ ಗಣ್ಯರು ಭಾಗಿಯಾಗಲಿದ್ದು, ಪ್ರಧಾನಿ ಮೋದಿ ಮೊದಲು ಭಾಷಣ ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next