Advertisement
ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂಬ ಹಠಕ್ಕೆ ಬಿದ್ದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಂಚರತ್ನ ರಥಯಾತ್ರೆ ಮೂಲಕ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದು, ಇದೀಗ ಚುನಾವಣೆ ಹೊಸ್ತಿಲಲ್ಲಿ ದೇವರ ಮೊರೆ ಹೋಗಿದ್ದಾರೆ.
Related Articles
Advertisement
ಸಹೋದರ, ಪುತ್ರ, ಮೊಮ್ಮಗ ಭಾಗಿ: 9 ದಿನ ಕಾಲ ಶತ ಚಂಡಿಕಾ ಯಾಗ, ಕೋಟಿ ಮೃತ್ಯುಂಜಯ ಪೂಜೆಗಳು ಜರುಗಲಿವೆ.
ಹೇಳಿ ಕೇಳಿ ಕೇತುಗಾನಹಳ್ಳಿಯ ತೋಟದ ಮನೆ ಕುಮಾರಸ್ವಾಮಿ ಅವರಿಗೆ ಅಚ್ಚು ಮೆಚ್ಚಿನ ಮನೆಯಾದ ಹಿನ್ನೆಲೆಯಲ್ಲಿ ಕುಟುಂಬದವರ ಆರೋಗ್ಯ ಹಾಗೂ ಪಕ್ಷದ ಯಶಸ್ಸಿಗಾಗಿ ಪೂಜೆ ಮಾಡಿಸಲಾಗುತ್ತಿದೆ. ಯಾಗದಲ್ಲಿ ಎಚ್.ಡಿ.ರೇವಣ್ಣ, ನಿಖೀಲ್ ಕುಮಾರಸ್ವಾಮಿ, ರೇವತಿ ನಿಖೀಲ್ ಜೊತೆಗೆ ಅವ್ಯಾನ್ ದೇವೇಗೌಡ ಪೂಜೆಯಲ್ಲಿ ಭಾಗಿಯಾಗಿದ್ದರು.
ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ
ರಾಮನಗರದ ಬಿಡದಿಯ ಕೇತಗಾನಹಳ್ಳಿಯ ತಮ್ಮ ತೋಟದ ಮನೆಯಲ್ಲಿ ನಡೆಯುತ್ತಿರುವ ಯಾಗದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಬಿಜೆಪಿ ಸರ್ಕಾರದ ಲಂಚಾವತಾರ ಮಿತಿಮೀರಿದೆ. ಇನ್ನೊಂದು ಕಡೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ,ಯಾವ ನೈತಿಕತೆ ಇಟ್ಟುಕೊಂಡು ಭಾಷಣ ಮಾಡುತ್ತಿ ದ್ದಾರೆ ಎಂದು ಎಚ್.ಡಿ.ಕೆ ಕುಟುಕಿದರು. ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಅರಿವಿದ್ದಿದ್ದರೆ ಅವರು ಇಲ್ಲಿಗೆ ಬರುವ ಹಾಗೆ ಇರಲಿಲ್ಲ. ಯಾವ ಮುಖ ಇಟ್ಟುಕೊಂಡು ಬಂದು ಭಾಷಣ ಮಾಡುತ್ತಿದ್ದಾರೆ ಎಂದು ಛೇಡಿಸಿದ ಎಚ್‌ಡಿಕೆ, ಸಾರ್ವಜನಿಕವಾಗಿ ನಾಡಿನ ಜನರ ಹಣವನ್ನು ಲೂಟಿ ಹೊಡೆದು ಹೇಗೆ ರಾಜ್ಯದ ಅಭಿವೃದ್ಧಿ ಮಾಡುತ್ತಾರೆ ಎಂದು ಲೇವಡಿ ಮಾಡಿದರು. ಡಬಲ್ ಎಂಜಿನ್ ಸರ್ಕಾರ ಕೊಟ್ಟು ಜನ ಅಭಿವೃದ್ಧಿ ಆಗೋದನ್ನು ನೋಡುತ್ತಿದ್ದಾರೆ, ಕಾಂಗ್ರೆಸ್ ಕೂಡ ಕಡಿಮೆ ಇಲ್ಲ, ಎರಡು ರಾಷ್ಟ್ರೀಯ ಪಕ್ಷಗಳು ಹೈಕಮಾಂಡ್ ಸಂಸ್ಕೃತಿ ಇಟ್ಟುಕೊಂಡು ಬಂದಿವೆ. ಕಾಂಗ್ರೆಸ್‌ನವರು ಸಹ ರೀಡೂ ಹಗರಣದಲ್ಲಿ ಎಷ್ಟು ಲೂಟಿ ಮಾಡಿದ್ದಾರೆ, ಸಿದ್ದರಾಮಯ್ಯ ಕಾಲದಲ್ಲಿ ಎಲ್ಲರಿಗೂ ಗೊತ್ತಿದೆ ಎಂದು ಮಾಜಿ ಸಿಎಂ ಎಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದರು.
ತೆಲಂಗಾಣದಿಂದ ಪುರೋಹಿತರ ಆಗಮನ
ಎಚ್‌ಡಿಕೆ ಹಮ್ಮಿಕೊಂಡಿರುವ ಯಾಗದಲ್ಲಿ ಪಕ್ಕದ ತೆಲಂಗಾಣ ರಾಜ್ಯದ ನುರಿತ 300ಕ್ಕೂ ಹೆಚ್ಚು ಪುರೋಹಿತರು ಆಗಮಿಸಿದ್ದು, ಯಾಗಗಳನ್ನ ನಡೆಸುತ್ತಿದ್ದಾರೆ. ಗುರುವಾರ ರಾತ್ರಿಯೇ ತೆಲಂಗಾಣ ದಿಂದ ತೋಟದ ಮನೆ ಸೇರಿದ್ದಾರೆ. ಇವರೆಲ್ಲರೂ ಉಳಿದು ಕೊಳ್ಳಲು ತೋಟದಲ್ಲಿ ವ್ಯವಸ್ಥೆ ಮಾಡಲಾಗಿದೆ. ತೆಲಂಗಾಣ ಮುಖ್ಯ ಮಂತ್ರಿ ಕೆ.ಸಿ.ಆರ್.ಚಂದ್ರಶೇಖರ್ ಹಾಗೂ ಕುಮಾರಸ್ವಾಮಿ ಅವರ ನಡುವೆ ಉತ್ತಮ ಸ್ನೇಹ ಬಾಂಧವ್ಯ ವಿರುವ ಕಾರಣ, ಸ್ವತಃ ಚಂದ್ರ ಶೇಖರ್ ಅವರೇ ಪುರೋಹಿತರನ್ನು ಅಲ್ಲಿಂದ ಕಳುಹಿಸಿಕೊಟ್ಟಿದ್ದಾರೆ.