Advertisement

ಗ್ರಹಣ ಕಾಲ ಮಹಾಬಲೇಶ್ವರನಿಗೆ ವಿಶೇಷ ಪೂಜೆ

10:08 AM Jun 22, 2020 | Suhan S |

ಹೊನ್ನಾವರ: ಶ್ರೀಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ರವಿವಾರದ ಚೂಡಾಮಣಿ ಸೂರ್ಯಗ್ರಹಣದ ಸಮಯದಲ್ಲಿ ಗೋಕರ್ಣದ ಊರಿನವರಿಗೆ ನಿಯಮಗಳ ಪ್ರಕಾರ ನಂದಿ ಮಂಟಪದವರೆಗೆ ಹೋಗಿ ದರ್ಶನ ಪಡೆದು ನಮಸ್ಕಾರ ಮಾಡಿ ಬರಲು ಅವಕಾಶ ನೀಡಲಾಗಿತ್ತು. ಬಹಳಷ್ಟು ಜನ ಊರಿನವರು ದೇವರ ದರ್ಶನ ಪಡೆದರು.

Advertisement

ಕ್ಷೇತ್ರದಲ್ಲಿ ಭಕ್ತಾದಿಗಳು ಗ್ರಹಣ ವೇಳೆಯಲ್ಲಿ ಈಶ್ವರನ ದರ್ಶನ ಪಡೆದು ಸಮುದ್ರಕ್ಕೆ ಹೋಗಿ ಸ್ನಾನ ಮಾಡಿ, ಜಪತಪಗಳನ್ನು ಮಾಡುವ ರೂಢಿಗತ ಪರಂಪರೆಗೆ ಅನುಕೂಲವಾಗಲೆಂದು ಅವಕಾಶ ನೀಡಲಾಯಿತು. ಸರಕಾರದ ನಿಯಮಗಳ ಪ್ರಕಾರ ಜನರ ದೇಹದ ಉಷ್ಣಾಂಶ ನೋಡಿ, ಸ್ಯಾನಿಟೈಜರ್‌ ಸಿಂಪಡಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಶ್ರೀದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಈ ವೇಳೆಯಲ್ಲಿ ಆತ್ಮಲಿಂಗಕ್ಕೆ ನಿರಂತರ ಗಂಗಾಜಲಾಭಿಷೇಕ ಏರ್ಪಡಿಸಲಾಗಿತ್ತು. ರಾಷ್ಟ್ರದ ಗಡಿಯಲ್ಲಿ ಹೋರಾಡುತ್ತಿರುವ ಧೀರಯೋಧರಿಗೆ ಜಯ ಸಿಗಲೆಂದು ಮತ್ತು ರಾಷ್ಟ್ರದಲ್ಲಿ ಮಹಾಮಾರಿಯಾಗಿ ವ್ಯಾಪಿಸುತ್ತಿರುವ ಕೋವಿಡ್‌-19 ಸಂಪೂರ್ಣ ನಾಶಹೊಂದುವಂತೆ ಪ್ರಾರ್ಥಿಸಿ ಅಭಿಷೇಕ ಮಾಡಲಾಯಿತು. ಗ್ರಹಣ ಮೋಕ್ಷದ ನಂತರ ಸ್ಥಳಶುದ್ಧಿ ಮಾಡಿ, ಶುದ್ಧಿ ಹೋಮ ಮಾಡಿ ಶ್ರೀದೇವರಿಗೆ ವಿಶೇಷ ಮಹಾಪೂಜೆ ಮಾಡಲಾಯಿತು. ವೇ| ಪರಮೇಶ್ವರ ಮಾರ್ಕಾಂಡೆ ಮಹಾಪೂಜೆ ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next