Advertisement

ಮಾಸ್ತಮ್ಮ ದೇವಿಗೆ ಧನುರ್ಮಾಸ ವಿಶೇಷ ಪೂಜೆ

01:41 PM Jan 17, 2021 | Team Udayavani |

ಚಿತ್ರದುರ್ಗ: ನಗರದ ಜೋಗಿಮಟ್ಟಿ ರಸ್ತೆಯ‌ಲ್ಲಿರುವ ಶ್ರೀ ಮಾಸ್ತಮ್ಮ ದೇವಿಯ ಎಂಟನೇ ವರ್ಷದ ಧನುರ್ಮಾಸ ಪೂಜೆ ಮತ್ತು ಸಂಕ್ರಾಂತಿ ಉತ್ಸವದ ಅಂಗವಾಗಿ ಶುಕ್ರವಾರ ಮಹಿಳೆಯರಿಂದ ಕುಂಭ ಮೆರವಣಿಗೆ ನಡೆಯಿತು.

Advertisement

ಶ್ರೀ ಮಾಸ್ತಮ್ಮ ದೇವಿಯ ದೇವಸ್ಥಾನದ ಜೀಣೋದ್ಧಾರ ಮತ್ತು ಅಭಿವೃದ್ಧಿ ಸೇವಾ ಸಮಿತಿ ವತಿಯಿಂದ ಕಳೆದ ಜ. 13 ರಿಂದ ವಿವಿಧ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ ನಗರದ ಉಚ್ಚಂಗಿ ಯಲ್ಲಮ್ಮ ದೇವಾಲಯದಿಂದ ಮಾಸ್ತಮ್ಮ ದೇವಿಯ ದೇವಾಲಯದವರೆಗೂ ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆ, ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ, ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ:ಕಾಡಿನಿಂದ ಹಿಡಿದ ಮೊಲವನ್ನು ಮತ್ತೆ ಕಾಡಿಗೆ ಬಿಟ್ಟು ಸಂಕ್ರಾಂತಿ ಹಬ್ಬ ಆಚರಿಸಿದ ಗ್ರಾಮಸ್ಥರು

Advertisement

Udayavani is now on Telegram. Click here to join our channel and stay updated with the latest news.

Next