Advertisement
ಸೋಮವಾರ ತಮ್ಮ ಕುಟುಂಬದೊಂದಿಗೆ ಶ್ರೀ ಶಾರದಾ ಪೀಠಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮಂಡ್ಯ ಕ್ಷೇತ್ರದಲ್ಲಿ ಪುತ್ರ ನಿಖೀಲ್ ಗೆಲುವಿಗೆ ಪ್ರಾರ್ಥಿಸಲಷ್ಟೇ ಇಲ್ಲಿಗೆ ಬಂದಿಲ್ಲ.ರಾಜ್ಯದ 28 ಕ್ಷೇತ್ರದಲ್ಲಿ ಹೋರಾಟ ಮಾಡಬೇಕಿದೆ.ಮೈತ್ರಿಕೂಟದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಪಡೆಯಬೇಕೆಂಬ ಉದ್ದೇಶದಿಂದ ನಮ್ಮ ಕುಟುಂಬದ ನಂಬಿಕೆ ಆಧಾರದ ಮೇಲೆ ಶಾರದಾಂಬೆ ಹಾಗೂ ಜಗದ್ಗುರುಗಳ ಆಶೀರ್ವಾದ ಪಡೆಯಲು ಬಂದಿದ್ದೇನೆ. ಎಲ್ಲಾ ನಮ್ಮ ಅಭ್ಯರ್ಥಿಗಳ ಪರ ಶಾರದಾಂಬೆಗೆ ಪೂಜೆ ಸಲ್ಲಿಸಿದ್ದೇವೆ ಎಂದರು.
Related Articles
Advertisement
ಪಕ್ಷವೂ ನನ್ನನ್ನು ಅಭ್ಯರ್ಥಿ ಮಾಡಿದೆ. ಅದರಂತೆ ಸ್ಪರ್ಧೆ ಮಾಡುತ್ತಿದ್ದೇನೆ. ನಮ್ಮ ರಾಷ್ಟ್ರಾಧ್ಯಕ್ಷರು ಎಲ್ಲಾ ಅಭ್ಯರ್ಥಿಗಳಿಗೂ ಬಿ ಫಾರಂ ನೀಡಿದ್ದಾರೆ. ಬಿ ಫಾರಂ ಅನ್ನು ದೇವರ ಹಾಗೂ ಜಗದ್ಗುರುಗಳ ಬಳಿ ಇರಿಸಿ ಪೂಜೆ ಸಲ್ಲಿಸಲಾಗಿದೆ ಎಂದರು.
ಮಂಡ್ಯ ಕ್ಷೇತ್ರದಿಂದಾಗಿ ಎಲ್ಲಾ ಸಿನಿಮಾದವರು ಈಗ ರಾಜ್ಯದ ಜನತೆಯ ಕಾಳಜಿ ವಹಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬರಲಿ ಬಿಡಿ,ಅವರು ಜನರ ಪರ ಏನೇನು ಮಾಡುತ್ತಾರೋ ನೋಡೋಣ ಎಂದರು.
15 ದಿನದಲ್ಲಿ ಎರಡು ಬಾರಿ ಸಿಎಂ ಭೇಟಿಶೃಂಗೇರಿ: ಕಳೆದ 15 ದಿನದಲ್ಲಿ ಸಿಎಂ ಕುಮಾರಸ್ವಾಮಿ ಕುಟುಂಬ ಸಹಿತರಾಗಿ ಎರಡನೇ ಬಾರಿಗೆ ಶ್ರೀ ಶಾರದಾ ಪೀಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ದ್ದಾರೆ. ಚುನಾವಣೆ ಘೋಷಣೆ ಸಂದರ್ಭದಲ್ಲೇ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಹಾಗೂ ಸಿಎಂ ಕುಮಾರಸ್ವಾಮಿ ತಮ್ಮ ಕುಟುಂಬದೊಂದಿಗೆಶಾರದಾ ಪೀಠಕ್ಕೆ ಆಗಮಿಸಿ ಚಂಡಿಕಾಯಾಗದಲ್ಲಿ ಪಾಲ್ಗೊಂಡಿದ್ದರು. ಈಗ ಮಂಡ್ಯ ಕ್ಷೇತ್ರದಲ್ಲಿ ನಿಖೀಲ್ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಶಾರದಾಪೀಠಕ್ಕೆಆಗಮಿಸಿ ಪಕ್ಷದ ಬಿ ಫಾರಂ ಅನ್ನು ಶಾರದಾಂಬೆ
ಸನ್ನಿಧಿಯಲ್ಲಿಟ್ಟು ಪೂಜೆ ಸಲ್ಲಿಸಿದ್ದಾರೆ. ಒಡೆಯದ ಒಂದು ಈಡುಗಾಯಿ
ಶಾರದಾ ಪೀಠದಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಶ್ರೀ ತೋರಣ ಗಣಪತಿಗೆ ವಿಶೇಷ ಪೂಜೆ ಹಾಗೂ ಈಡುಗಾಯಿ ಸಲ್ಲಿಸುವ ವಾಡಿಕೆ ಇದೆ. ಸೋಮವಾರ ತೋರಣ ಗಣಪತಿ ದರ್ಶನ ಪಡೆದ ನಿಖೀಲ್ ಕುಮಾರಸ್ವಾಮಿ ಈಡುಗಾಯಿ ಸಲ್ಲಿಸಿದರು. ಈಡುಗಾಯಿ ಹರಕೆಯ ಐದು ತೆಂಗಿನಕಾಯಿ ಒಡೆಯಲು ನಿಖೀಲ್ ಮುಂದಾದರು. ಇದರಲ್ಲಿ ನಾಲ್ಕು ಕಾಯಿಗಳು ಒಡೆದವಾದರೂ, ಒಂದು ಕಾಯಿ ಮಾತ್ರ ಒಡೆಯಲಿಲ್ಲ.