Advertisement
ನಗರದ ಹರ್ಷೋದಯ ಕನ್ವೆಂಷನ್‌ನಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ,ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಮತ್ತುಸಹಕಾರ ಇಲಾಖೆ ಸಂಯುಕ್ತಾಶ್ರಯ ದಲ್ಲಿ ಜಿಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು,ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ವಿಸಾಫ್ಟ್ ಸಿಬ್ಬಂದಿಗೆ ನಡೆದ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಸಾಲ ಪಡೆಯಲು ರೈತರು ಮತ್ತು ಮಹಿಳೆಯರುಅಲೆದಾಡುವ ಕೆಲಸ ಮಾಡಬಾರದು. ಪ್ರತಿಯೊಂದುಗ್ರಾಮಗಳಿಗೆ ಭೇಟಿ ನೀಡಿ ರೈತರು, ಬಡವರು ಮತ್ತುಮಹಿಳೆಯರಿಗೆ ಸಾಲ ಸೌಲಭ್ಯ ನೀಡುವ ಕೆಲಸವನ್ನು ಆದ್ಯತೆ ಮೇರೆಗೆ ಮಾಡಬೇಕೆಂದು ಸೂಚಿಸಿದರು.
ಇತಿಹಾಸ ಬರೆದಿದೆ: ದೇಶದಲ್ಲಿ ಎಲ್ಲಾ ಪ್ಯಾಕ್ಸ್‌ಗಳು ಗಣಕೀಕರಣವಾಗಬೇಕೆಂಬುದು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಆಶಯ. ಅವರ ಆಶಯಕ್ಕೂ ಮುನ್ನವೇ ಡಿಸಿಸಿ ಬ್ಯಾಂಕ್ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ 194 ಪ್ಯಾಕ್ಸ್‌ಗಳ ಗಣಕೀಕರಣನಡೆಸುವ ಮೂಲಕ ಹೊಸ ಇತಿಹಾಸ ಬರೆದಿದೆ ಎಂದು ಹೇಳಿದರು.
ಅವಳಿ ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗಿದ್ದು ಸಣ್ಣ ರೈತರಿಗೆ ಬೆಳೆ ಸಾಲ ನೀಡುವ ವ್ಯವಸ್ಥೆ ಮಾಡಬೇಕು, ಸಹಕಾರ ವ್ಯವಸ್ಥೆ ಕಟ್ಟಕಡೆ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಆಗಬೇಕು, ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ. ನಾಗರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಸಹಕಾರ ಭವನಕ್ಕೆ ಸಹಕಾರ ಸಂಘಗಳಿಂದ ಮತ್ತು ಡಿಸಿಸಿ ಬ್ಯಾಂಕಿನ ದೇಣಿಗೆನೀಡಬೇಕೆಂದು ಮನವಿ ಮಾಡಿದರು. ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಡಾಲ್ಫಿನ್ ನಾಗರಾಜ್, ನಿರ್ದೇಶಕರಾದಮರಳೂರು ಹನುಮಂತರೆಡ್ಡಿ, ಎಚ್.ಎಸ್.ಮೋಹನ್ ರೆಡ್ಡಿ, ನಾಗನಾಳ ಸೋಮಣ್ಣ, ಸಿ.ಕೆ.ವೇದ, ಎನ್.ನಾಗಿರೆಡ್ಡಿ ಮಾತನಾಡಿದರು.
ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ಶಿವಕುಮಾರ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎನ್.ಕೆ.ಲಕ್ಷ್ಮೀಪತಿ, ಕೆಂಪಣ್ಣ, ಸಹಕಾರ ಸಂಘಗಳ ಸಹಾಯಕ ನಿಬಂಧಕಎಂ.ವಿ.ವೆಂಕಟೇಶ್‌ಮೂರ್ತಿ, ಜಿಲ್ಲಾ ಸಹಕಾರಿ ಯೂನಿ ಯನ್ ಸಿಇಒ ನಾಗಭೂಷಣ್, ಶಿಡ್ಲಘಟ್ಟ ಎಸ್‌ಎಫ್‌ಸಿಎಸ್ ಅಧ್ಯಕ್ಷ ಶೆಟ್ಟಹಳ್ಳಿ ರಾಮಚಂದ್ರಪ್ಪ, ಜಿಲ್ಲೆಯಲ್ಲಿವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ವಿಸಾಫ್ಟ್ ಸಿಬ್ಬಂದಿ ಇದ್ದರು.
ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆಗೆ ನನ್ನ ಅಭ್ಯಂತರವಿಲ್ಲ :
ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪಿಸಲು ತಮ್ಮ ಅಭ್ಯಂತರವಿಲ್ಲ. ನನ್ನ ದೃಷ್ಟಿಯಲ್ಲಿ ಎರಡು ಜಿಲ್ಲೆಗಳು ಒಂದೇ ಆಗಿದ್ದು ಸಹಕಾರ ವ್ಯವಸ್ಥೆಗೆ ಧಕ್ಕೆಯಾಗದಂತೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತೇಕ ಬ್ಯಾಂಕ್ ಸ್ಥಾಪನೆ ಮಾಡಲಿ. ಅದನ್ನು ಮೊಟ್ಟ ಮೊದಲಿಗೆ ಸ್ವಾಗತಿಸುತ್ತೇನೆ. ಅವಳಿ ಜಿಲ್ಲೆಯ ರೈತರು, ಮಹಿಳೆಯರು ಮತ್ತು ಬಡಜನರ ಆರ್ಥಿಕ ಕಲ್ಯಾಣವೇ ನನ್ನ ಮುಖ್ಯಗುರಿ ಎಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸ್ಪಷ್ಟಪಡಿಸಿದರು.