Advertisement

Special Train: ಎ. 8: ಮಂಗಳೂರು ಜಂಕ್ಷನ್‌ನಿಂದ ಮುಂಬಯಿಗೆ ವಿಶೇಷ ರೈಲು

12:52 AM Apr 06, 2023 | Team Udayavani |

ಮಂಗಳೂರು: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡುವುದಕ್ಕಾಗಿ ಮಂಗಳೂರು ಜಂಕ್ಷನ್‌ನಿಂದ ಮುಂಬಯಿ ಲೋಕಮಾನ್ಯ ತಿಲಕ್‌ ಟರ್ಮಿನಸ್‌ಗೆ ಏಕಮುಖ ರೈಲು ಸಂಚರಿಸಲಿದೆ.

Advertisement

ನಂ. 06007 ಮಂಗಳೂರು ಜಂಕ್ಷನ್‌ ಮುಂಬಯಿ ಲೋಕಮಾನ್ಯ ತಿಲಕ್‌ ಟರ್ಮಿನಸ್‌ ವಿಶೇಷ ರೈಲು ಮಂಗಳೂರಿನಿಂದ ಎ. 8ರಂದು ಸಂಜೆ 6.10ಕ್ಕೆ ಹೊರಟು ಮುಂಬಯಿಗೆ ಎ.9ರಂದು ಮಧ್ಯಾಹ್ನ 1.15ಕ್ಕೆ ತಲುಪಲಿದೆ.

ಸುರತ್ಕಲ್‌, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್‌ ಬೈಂದೂರು, ಭಟ್ಕಳ, ಮುರುಡೇಶ್ವರ, ಕುಮಟಾ, ಕಾರವಾರ, ಕಾಣಕೋಣ, ಮಡಗಾಂವ್‌, ಕರ್ಮಾಲಿ, ಕುಡಾಳ್‌, ಕಂಕಾವಿÛ, ರತ್ನಾಗಿರಿ, ಸಂಗಮೇಶ್ವರ ರೋಡ್‌, ಸಾವರ್ದ, ಚಿಪ್ಳೂಣ್‌, ಖೇಡ್‌, ವೀರ್‌, ರೋಹ, ಪನ್ವೇಲ್‌, ಥಾಣೆಯಲ್ಲಿ ನಿಲುಗಡೆ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next