ಉಡುಪಿ: ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕೇಂದ್ರ ರೈಲ್ವೇ ಇಲಾಖೆಯ ಸಂಯೋಜನೆಯೊಂದಿಗೆ ಕೊಂಕಣ ರೈಲ್ವೇ ವೀಕ್ಲಿ ಸ್ಪೇಷಲ್ ರೈಲು ಬಿಡಲಿದೆ.
ರೈಲು ಸಂಖ್ಯೆ 01165/01166 ಲೋಕಮಾನ್ಯ ತಿಲಕ್- ಮಂಗಳೂರು ಜಂಕ್ಷನ್-ಲೋಕಮಾನ್ಯ ತಿಲಕ್ ವಿಶೇಷ (ವೀಕ್ಲಿ) ರೈಲು ಮಾ. 7ರ ರಾತ್ರಿ 10.15ಕ್ಕೆ ಲೋಕಮಾನ್ಯ ತಿಲಕ್ ಟರ್ಮಿನಲ್‌ನಿಂದ ಹೊರಟು, ಮಾರನೇ ದಿನ ಮಂಗಳೂರು ತಲುಪಲಿದೆ. ಹಾಗೆಯೇ ಮಾ. 8ರಂದು ಮಂಗಳೂರಿನಿಂದ ಸಂಜೆ 6.45ಕ್ಕೆ ಹೊರಟು, ಮಾರನೇ ದಿನ ಲೋಕಮಾನ್ಯ ತಿಲಕ್ ಟರ್ಮಿನಲ್ ತಲುಪಲಿದೆ.
ಈ ರೈಲು ಥಾಣೆ, ಪನ್ವೆಲ್, ರೋಹಾ, ಚಿಪ್ಕುನ್, ಸಂಗಮೇಶ್ವರ್ ರೋಡ್, ರತ್ನಗಿರಿ, ಕನ್ಕವಲ್ಲಿ, ಸಿಂಧುದುರ್ಗ, ಸಾವಂತ್ವಾಡಿ ರೋಡ್, ಥಿವಿಮ್, ಕರ್ಮಾಲಿ, ಮಡಗಾಂವ್ ಜಂಕ್ಷನ್, ಕಾರವಾರ, ಗೋಕರ್ಣ ರೋಡ್, ಕುಮಟಾ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್(ಬೈಂದೂರ್), ಕುಂದಾಪುರ, ಉಡುಪಿ, ಮೂಲ್ಕಿ, ಸುರತ್ಕಲ್‌ನಲ್ಲಿ ನಿಲ್ಲಲಿದೆ ಎಂದು ಪ್ರಕಟನೆ ತಿಳಿಸಿದೆ.