Advertisement

Holi: ಬಣ್ಣಗಳ ಹಬ್ಬ ಹೋಳಿ ಹಬ್ಬ, ಉಲ್ಲಾಸ ತರುವ ಬಣ್ಣಗಳ ಹಬ್ಬ

08:58 AM Apr 18, 2024 | Team Udayavani |

ಎರಚಾಟದಿಂದ ಮನರಂಜನೆ ನೀಡುವ ಹಬ್ಬ, ಹೋಳಿ ಇದು ಹಿಂದೂಗಳ ಪ್ರಸಿದ್ಧ ಹಬ್ಬವಾಗಿದೆ. ಹೋಳಿ ಹಬ್ಬ ಎನ್ನುವುದು ಭಾರತದ ಸಂಸ್ಕೃತಿಯ ಸಂಕೇತವಾಗಿ. ಮನರಂಜನೆಯಿಂದ ಸ್ನಾನ ಮಾಡಿ ದೇವರ ಪೂಜೆ ನೆರವೇರಿಸುವುದು ಈ ಬಣ್ಣಗಳ ಹಬ್ಬದ ವಿಶೇಷತೆ. ವಿವಿಧ ಬಣ್ಣಗಳ ಓಕಳಿಯನ್ನು ಹರಿಸಿವ ಇಡೀ ವರ್ಷ ಸಂತೋಷದ ಕೊನೆಯ ಹರಿಯಲಿ ಎಂದು ಹಾರೈಸುವ ರಂಗಿನ ಬಣ್ಣದ ಹಬ್ಬ ಈ ಹೋಳಿ ಹಬ್ಬ. ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಮಾತ್ರ ಆಚರಣೆಯಲ್ಲಿತ್ತು.

Advertisement

ಈ ಪ್ರಸ್ತುತ ದಿನಗಳಲ್ಲಿ ಇಡೀ ಭಾರತ ಮತ್ತು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ಬಣ್ಣಗಳ ಹಬ್ಬದಿಂದ ಯುವಕ ಯುವತಿಯರಿಗೆ ಹರ್ಷ ತರುವ ಹಬ್ಬವಾಗಿದೆ. ಆದ್ದರಿಂದ ಪ್ರಪಂಚದೇಲೆಡೆ, ಪಸರಿಸಿದೆ. ಈ ಹಬ್ಬವನ್ನು ಪಾಲ್ಗುಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ಕಾಮನ ಹಬ್ಬ,ಕಾಮನ ದಹನ ಹಬ್ಬ, ಹೋಳಿಕ ದಾಹನ ಎಂದು ಕೂಡ ಕರೆಯಲಾಗುತ್ತದೆ.

ಈ ಹಬ್ಬಕ್ಕೆ ಒಂದು ಪೌರಾಣಿಕ ಹಿನ್ನೆಲೆ ಕೂಡ ಇದೆ. ಅದು ಏನೆಂದರೆ ತಾರಕಾಸುರಎಂಬ ಮಹಾ ರಾಕ್ಷಸ ಇದ್ದನು, ಆತ ಬಲು ದುರಹಂಕಾರಿ ಅತಿ ಕ್ರೂರಿ ಆಗಿದ್ದ ಮತ್ತು ಅತ್ತ ದಿನದಿಂದ ದಿನಕ್ಕೆ ಲೋಕಕಂಟಕವಾಗಿ ಕೂಡ ಮೆರೆಯುತ್ತಿದ್ದ, ನನಗೆ ಮರಣ ಬರಬಾರದು ಎಂದು ಬ್ರಹ್ಮನಿಂದ ವರವನ್ನು ಬೇಡಿದ್ದ , ಭೋಗ ಸಮಾಧಿಯಲ್ಲಿ ಇದ್ದ ಶಿವನು, ಸಮಾಗಮ ಹೊಂದಲು ಸಾಧ್ಯವಿಲ್ಲ ವಾದ್ದರಿಂದ, ಆಗ ದೇವತೆಗಳು ಬೇರೆ ಉಪಾಯವಿಲ್ಲದೆ, ಶಿವನಿಗೆ ಪಾರ್ವತಿ ಮೇಲೆ ಮೋಹ ಉಂಟುಮಾಡಲು ಕಾಮನದೇವನ ಹತ್ತಿರ ಬೇಡಿಕೊಳ್ಳುತ್ತಾರೆ.

ಕಾಮನ ದೇವವಾದ ಮನ್ಮಥ ,ಭೋಗ ಸಮಾಧಿಯಲ್ಲಿ ಇದ್ದ ಶಿವನನ್ನು ಹೂ ಬಾಣಗಳಿಂದ ಹೊಡೆದು ಸಮಾಧಿಯಿಂದ ಎಚ್ಚರಿಸಿದನು. ಶಿವನು ಭೋಗ ಸಮಾಧಿ ಅರ್ಧಕ್ಕೆ ನಿಂತಿದರಿಂದ ಕೋಪಗೊಂಡ ಶಿವನು, ತನ್ನ ಮೂರನೇ ಕಣ್ಣಿನಿಂದ ಕಾಮನನ್ನು ಸುಟ್ಟು ಬಸ್ಮ ಮಾಡಿದನ್ನು. ಕಾಮನ ದೇವನ ಪತ್ನಿ ರತಿದೇವಿ ದುಃಖದಿಂದ ಶಿವನನ್ನಲ್ಲಿ ಪತಿ ಭಿಕ್ಷೆಯನ್ನು ಬೇಡಿದಳು.

ಶಾಂತಗೊಂಡ ಶಿವನು, ಪತ್ನಿನೋಡನೆ ಮಾತ್ರ ಶರೀರವಾಗುವಂತೆ ಕಾಮನನಿಗೆ ವರ ಕೊಟ್ಟನು. ಲೋಕಕಲ್ಯಾಣಕಾಗಿ ಮನ್ಮಥನು ಅಡಂಗನಾದನು. ಈ ಘಟನೆ ನಡೆದಿದ್ದು ಪಾಲ್ಗುಣ ಮಾಸದಲ್ಲಿ , ಹುಣ್ಣಿಮೆಯನ್ನು, ಕಾಮನ ಹುಣ್ಣಿಮೆ ಅಥವಾ ಹೋಳಿ ಹುಣ್ಣಿಮೆ ಎಂದು ಆಚರಿಸಲಾಗುತ್ತದೆ..

Advertisement

ಹೋಳಿ ಹಬ್ಬವನ್ನು ಭಾರತತ ತುಂಬೆಲಾ ಆಚರಿಸಲ್ಪಡುವ ಮನರಂಜನೆ ರಂಗು ರಂಗಿನ ಹೋಳಿ ಹಬ್ಬ, ಬಣ್ಣದ ಹಬ್ಬವನ್ನು ಉಲ್ಲಾಸದಿಂದ ಆಚರಿಸಲಾಗುತ್ತದೆ. ಕರ್ನಾಟಕದ ಒಂದೊಂದು ಜಿಲ್ಲೆಯಲ್ಲಿ ಒಂದೊಂದು ರೀತಿ ವಿಶೇಷವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಈ ದಿನದ ವಿಶೇಷತೆ ಏನೆಂದರೆ ಅಕ್ಕಿ ಹಿಟ್ಟು ಮತ್ತು ಅರಿಶಿನ ಬೆರೆಸಿದ ಗುಲಾಲು ತಯಾರಿಸಿ, ಬಿದಿರಿನಿಂದ ಪಿಚ್ಕಾರಿ ತಯಾರಿಸಿ ಬಣ್ಣದ ಆಟ ಆಡಲಾಗುತ್ತದೆ ಮತ್ತು ಕೃತಕ ಬಣ್ಣಗಳೊಂದಿಗೆ ಓಕಳಿ ಆಡಿ, ಪರಸ್ಪರ ಬಣ್ಣಗಳನ್ನು ಎರಚಿಕೊಂಡು, ಖುಷಿಯಿಂದ ಹಾಗೂ ಉಲ್ಲಾಸದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ರಂಗಿನ ಆಟದ ಅನಂತರ ಸ್ನಾನ ಮಾಡಿ, ದೇವರಲ್ಲಿ ಪ್ರಾರ್ಥಿಸಿ ಮನೆಗಳಲ್ಲಿ ವಿಶೇಷ ಅಡಿಗೆಯನ್ನು ತಯಾರಿಸಲಾಗುತ್ತದೆ.ಈ ಹಬ್ಬದ ಮುಖ್ಯ ವಿಶೇಷತೆ ಆಗಿದೆ. ಈ ಹಬ್ಬವು ವಿವಿಧ ಬಣ್ಣಗಳಿಂದ, ರಂಗ ರಂಗಿನ ಹಬ್ಬ ಮನ ಉಲ್ಲಾಸ ತರುವ ಹಬ್ಬ ಹೋಳಿ ಹಬ್ಬವಾಗಿದೆ.

ಪ್ರಸ್ತುತ ದಿನಗಳಲ್ಲಿ ಹೋಳಿ ಹಬ್ಬ ಹೊಸತನದಿಂದ ಕೂಡಿದೆ. ಹೇಗೆಂದರೆ ಹೊಸ ತಂತ್ರಜ್ಞಾನ ಯುಗದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬಣ್ಣಗಳ ಓಕಳಿ ಹಬ್ಬವನ್ನು, ಡಿಜಿ ಮತ್ತು ವಿವಿಧ ಮ್ಯೂಸಿಕ್‌ ಉಪಕರಣಗಳನ್ನು, ರಂಗ ರಂಗಿನ ಹಬ್ಬವನ್ನು ಯುವಕ ಯುವತಿಯರು ಸೇರಿ, ನವ ಉಲ್ಲಾಸದಿಂದ ಹಾಗೂ ಸಂತೋಷದಿಂದ, ನೃತ್ಯದ ಮೂಲಕ ಬಣ್ಣಗಳ ಓಕಳಿ ಹಬ್ಬವನ್ನು ಮನೋರಂಜನೆ ದಿಂದ ಆಚರಿಸುತ್ತಾರೆ.

-ಸುನಂದಾ ಪಟ್ಟಣಶೆಟ್ಟಿ

ವಿ.ವಿ. ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next