Advertisement
ಏನಿದು ಸಾಮಗ್ರಿ?ಈ ಕಿಟ್‌ನಲ್ಲಿ ಒಂದು ಕ್ಲೀನಿಂಗ್ ಜೆಲ್ ಇರುತ್ತದೆ. ಓರ್ವ ವ್ಯಕ್ತಿಯ ಸ್ನಾನಕ್ಕೆ ಸುಮಾರು 20 ಮಿ.ಲೀ. ಜೆಲ್ ಸಾಕು. ಇದನ್ನು ದೇಹಕ್ಕೆ ಹಚ್ಚಿಕೊಂಡು ಕೆಲ ನಿಮಿಷಗಳವರೆಗೆ ಮಸಾಜ್ ಮಾಡಿಕೊಂಡು ಅನಂತರ ಟವೆಲ್‌ನಿಂದ ಒರೆಸಿ ಕೊಂಡರೆ ಸಾಕು. ಇದರ ಉಪಯೋಗದಿಂದ ದೇಹದ ಮೇಲಿನ ಕ್ರಿಮಿ, ಬ್ಯಾಕ್ಟೀರಿಯಾ ನಾಶವಾಗುತ್ತವೆ. ಜತೆಗೆ, ಚರ್ಮದ ಮೇಲಿರಬಹುದಾದ ಧೂಳು, ಕೊಳೆ, ಎಣ್ಣೆಯ ಅಂಶಗಳೂ ನಿವಾರಣೆಯಾಗುತ್ತವೆ. ಈ ಕಿಟ್‌ನಲ್ಲಿರುವ ಮಾಯಿಶ್ಚರೈಸಿಂಗ್ ಕ್ರೀಂ, ಹೇರ್ ಕ್ರೀಂಗಳು ತ್ವಚೆಯನ್ನು, ಕೂದಲನ್ನು ಸುಸ್ಥಿತಿಯಲ್ಲಿಡಲು ಸಹಕಾರಿಯಾಗುತ್ತವೆ. ಸೈನಿಕರ ಕುಂದುಕೊರತೆ ನಿವಾರಿಸಲೆಂದೇ 2016ರಲ್ಲಿ ಅಸ್ತಿತ್ವಕ್ಕೆ ತರಲಾಗಿರುವ “ಆರ್ಮಿ ಡಿಸೈನ್ ಬ್ಯೂರೋ’ (ಎಡಿಬಿ) ಈ ಪರಿಕರಗಳನ್ನು ತಯಾರಿಸಿದೆ.
ಸಮುದ್ರ ಮಟ್ಟಕ್ಕಿಂತ 27,753 ಅಡಿಗಳ ಎತ್ತರವಿರುವ ಸಿಯಾಚಿನ್‌ನಲ್ಲಿನ ಯೋಧರು ಹಿಮದ ನಡುವೆಯೇ ಇದ್ದರೂ ನೀರಿನ ಅಗಾಧ ಕೊರತೆ ಎದುರಿಸುತ್ತಾರೆ. ಹಿಮವನ್ನು ನೀರಾಗಿ ಕರಗಿಸಲು ಅಧಿಕ ಪ್ರಮಾಣದ ಇಂಧನ ಬೇಕಾಗುವುದರಿಂದ ಇದರ ವೆಚ್ಚವೂ ಅಧಿಕ. ಹಾಗಾಗಿ ಜಲರಹಿತ ಸ್ನಾನದ ಪರಿಕರಗಳ ಆವಶ್ಯಕತೆಯಿದೆ.