ಮಂಗಳೂರು: ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ಅಧಿಕ ಒತ್ತಡದೊಂದಿಗೆ ರೈಲುಗಳಿಗೆ ತ್ವರಿತ ನೀರು ತುಂಬುವ ವ್ಯವಸ್ಥೆಯನ್ನು ಆರಂಭಿಸಲಾಗಿದ್ದು, ಇದರಿಂದಾಗಿ ಸಮಯದ ಉಳಿತಾಯವಾಗಲಿದೆ.
ಈ ಮೊದಲು ರೈಲುಗಳು ಕೇವಲ 8-10 ನಿಮಿಷದಷ್ಟು ನಿಲುಗಡೆ ಸಮಯ ಹೊಂದಿದ್ದರೂ ನೀರು ತುಂಬಿಸುವುದಕ್ಕೆ 15ರಿಂದ 20 ನಿಮಿಷ ತಗಲುತ್ತಿತ್ತು.
ನೀರು ತುಂಬಲು ಪೋಲಾಗುತ್ತಿದ್ದ ಸಮಯವನ್ನು ಪರಿಗಣಿಸಿದ ಇಲಾಖೆ ಗ್ವಾಲಿಯರ್ ಯುನಿಟ್‌ನ ರಿಸರ್ಚ್ ಆ್ಯಂಡ್ ಡಿಸೈನ್ ಸ್ಟಾಂಡರ್ಡ್ಸ್ ಆರ್ಗನೈಸೇಶನ್‌ನ ಸೆಂಟರ್ ಫಾರ್ ಅಡ್ವಾನ್ಸ್ ಮೈಂಟೆನೆನ್ಸ್ ಟೆಕ್ನಾಲಜಿ ಕ್ಯಾಮ್‌ಟೆಕ್‌ನವರ ಕ್ವಿಕ್ ವಾಟರಿಂಗ್ ಸಿಸ್ಟಂ ಅನ್ನು ಅಳವಡಿಸಿದೆ.
ಇದರಲ್ಲಿ ಸಾಂಪ್ರದಾಯಿಕ 4 ಇಂಚು ಬದಲು 6 ಇಂಚಿನ ಪೈಪ್‌ಲೈನ್, ಅಧಿಕ ಸಾಮರ್ಥ್ಯದ ಮೋಟರ್‌ಗಳು, ನೀರು ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸುವ “ಸೂಪರ್‌ವೈಸರಿ ಕಂಟ್ರೋಲ್ ಆ್ಯಂಡ್ ಡಾಟಾ ಸಿಸ್ಟಂ’ ಎಂಬ ಕಂಪ್ಯೂಟರೈಸ್ಡ್ ವ್ಯವಸ್ಥೆ ಕೂಡ ಇದೆ.
ಹೊಸ ವ್ಯವಸ್ಥೆಯಲ್ಲಿ ಇಡೀ ರೈಲಿನ ಬೋಗಿಗಳಿಗೆ 8ರಿಂದ 10 ನಿಮಿಷದೊಳಗೆ ನೀರು ಭರ್ತಿ ಮಾಡಬಹುದು. ಹಲವು ರೈಲುಗಳಿಗೆ ಏಕಕಾಲದಲ್ಲಿ ನೀರು ತುಂಬುವುದಕ್ಕಿದ್ದರೂ ಪೂರೈಕೆಯ ರಭಸದಲ್ಲಿ ಯಾವುದೇ ಇಳಿಕೆಯಾ ಗದಂತೆ ಭರ್ತಿ ಮಾಡಬಹುದು.