Advertisement
ದುಬಾೖಯಲ್ಲಿ ಒಮ್ಮೆ ಯಾವುದೋ ಸೈಟ್ ವಿಸಿಟ್‌ಗೆಂದು ತೆರಳುವಾಗ ಅವರಿಗೆ ಮರುಭೂಮಿಯ ನಡುವೆ ಮಾನವ ನಿರ್ಮಿತ ಓಯಸಿಸ್ ಕಣ್ಣಿಗೆ ಬಿದ್ದಿದಂತೆ. ಅದನ್ನು ನೋಡಿದವರಿಗೆ ತಮ್ಮ ತಾಯ್ನಾಡು ಕೇರಳದಲ್ಲೂ ಇದೇ ರೀತಿಯಲ್ಲಿ ಮಾನವ ನಿರ್ಮಿತ ಕಾಡನ್ನು ರಚಿಸಿ, ಪರಿಸರವನ್ನು ಇನ್ನಷ್ಟು ಚಂದಗಾಣಿಸಬಹುದಲ್ಲವೇ ಎನ್ನುವ ಆಲೋಚನೆ ಮೂಡಿತು. 2002ರಲ್ಲಿ ಭಾರತಕ್ಕೆ ಬಂದ ಅವರು ಅದೇ ಆಲೋಚನೆಯನ್ನು ಕಾರ್ಯ ರೂಪಕ್ಕೆ ತರಲೆಂದು ಕೇರಳದ ಕೊಟ್ಟಾಯಂ ಜಿಲ್ಲೆಯ ಆಯಂಕುಡಿಯಲ್ಲಿ 5 ಎಕ್ರೆ ಬರಡು ಭೂಮಿಯನ್ನು ಖರೀದಿಸಿದರು. ಕೇವಲ ನಾಲ್ಕು ತೆಂಗಿನ ಮರ ಮಾತ್ರವೇ ಇದ್ದ ಆ ಭೂಮಿಯಲ್ಲಿ ಫಲವತ್ತತೆ ಇಲ್ಲವೇ ಇಲ್ಲ, ಯಾವ ಸಸಿಯನ್ನೂ ಬೆಳೆಯಲು ಸಾಧ್ಯವೇ ಇಲ್ಲ ಎಂದು ಸ್ಥಳೀಯರು ಹೇಳಿದ್ದರು. ಆದರೂ ಯೋಚಿಸದ ಅವರು ತಮಗೆ ಲಭ್ಯವಾದ ತರಹೇವಾರು ಗಿಡಗಳನ್ನು ನೆಟ್ಟು ಪೋಷಿಸಿದರು. ಅನಂತರ ಮತ್ತೆ ದುಬಾೖಗೆ ತೆರಳಿ ಕೆಲಸ ಆರಂಭಿಸಿದರು. ಆಗಾಗ ಭಾರತಕ್ಕೆ ಬರುತ್ತಿದ್ದ ಅವರು ತಮ್ಮ ಜಾಗದ ಸುತ್ತಮುತ್ತಲಿನ ಜಾಗವನ್ನೂ ಖರೀದಿಸುತ್ತ ಜಾಗದ ವಿಸ್ತೀರ್ಣ ಹೆಚ್ಚಿಸಲಾರಂಭಿಸಿದರು. ಹಾಗೆಯೇ ಅಲ್ಲಿ ವಿವಿಧ ರೀತಿಯ ಸಸಿಗಳನ್ನು ತಂದು ನೆಡಲಾರಂಭಿಸಿದರು.ಆದರೆ ಜಾಗದ ವಿಸ್ತೀರ್ಣ ಜಾಸ್ತಿಯಾಗಿ ಗಿಡಗಳ ಸಂಖ್ಯೆ ಹೆಚ್ಚಾದಂತೆ ಅವರಿಗೆ ಸಮಸ್ಯೆಯೊಂದು ಕಾಡಲಾರಂಭಿಸಿತು. ಪ್ರತೀ ಬಾರಿ ಅವರು ಕೇರಳಕ್ಕೆ ಬಂದಾಗ ಸಾಕಷ್ಟು ಗಿಡಗಳು ಒಣಗಿ ಸತ್ತು ಹೋಗಿರುವುದು ಕಾಣುತ್ತಿತ್ತು. ಹಾಗಾಗಿ ತಮ್ಮ ಈ ಜಾಗವನ್ನು ನೋಡಿಕೊಳ್ಳಲೆಂದೇ ಅವರು ಜನರನ್ನು ನೇಮಿಸಿದರು.
Related Articles
Advertisement
ತಮ್ಮದೇ ಆದ ವೈವಿಧ್ಯತೆಯ ಕಾಡು ನಿರ್ಮಾಣ ಮಾಡಲು ಹೊರಟಿದ್ದ ನೆಲ್ಲಿಕ್ಕುಜಿ ಆ ಪ್ರದೇಶದಲ್ಲಿ ತಾವು ನೆಲೆಸಲೆಂದು ಸಣ್ಣದೊಂದು ಫಾರ್ಮ್ಹೌಸ್ ನಿರ್ಮಿಸಿಕೊಂಡಿದ್ದರು. ಆದರೆ ನೆಲ್ಲಿಕ್ಕುಜಿಯ ಈ ಕಾಡಿನ ಬಗ್ಗೆ ತಿಳಿದುಕೊಂಡಿದ್ದ ಅವರ ಸ್ನೇಹಿ ತರು ಹಾಗೂ ಸಂಬಂಧಿಗಳು ಆಗಾಗ ಆ ಫಾರ್ಮ್ ಹೌಸ್‌ಗೆ ಬಂದು ಪ್ರಕೃತಿಯ ಮಧ್ಯೆ ಒಂದಿಷ್ಟು ದಿನಗಳ ಕಾಲ ಇದ್ದು ಹೋಗುತ್ತಿದ್ದರಂತೆ. ಅಲ್ಲಿನ ಪ್ರಕೃತಿ ಸೌಂದರ್ಯ ಹೆಚ್ಚು ತ್ತಿದ್ದಂತೆಯೇ ಫಾರ್ಮ್ ಹೌಸ್‌ಗೆ ಬರುತ್ತಿದ್ದವರ ಸಂಖ್ಯೆಯೂ ಹೆಚ್ಚಿದೆ.
ಅದೇ ಸಮಯದಲ್ಲಿ ಕೇರಳದಲ್ಲಿ ಭಾರೀ ಪ್ರವಾಹ ಉಂಟಾಗಿ, ನೆಲ್ಲಿಕ್ಕುಜಿ ಅವರ ಕಾಡಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯುಂಟಾಯಿತು. ಮತ್ತೆ ಕಾಡನ್ನು ಮರು ನಿರ್ಮಾಣ ಮಾಡುವುದಕ್ಕೆ ಅವರಿಗೆ ಬರೋಬ್ಬರಿ 25 ಕೋಟಿ ರೂ. ಸಾಲ ಮಾಡಬೇಕಾಗಿ ಬಂದಿತು. ಅದಲ್ಲದೆ ಕಾಡಿನ ನಿರ್ವಹಣೆಗೆ ಪ್ರತೀ ತಿಂಗಳು 7 ಲಕ್ಷ ರೂ. ವೆಚ್ಚವಾಗುತ್ತಿತ್ತು. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಅವರು ತಮ್ಮ ಫಾರ್ಮ್ ಹೌಸ್ ಅನ್ನು ಹೋಂ ಸ್ಟೇ ಆಗಿ ಬದಲಾಯಿಸಿದರು. ಆ ಸಂಪೂರ್ಣ ಸ್ಥಳವನ್ನು “ಮ್ಯಾಂಗೋ ಮಿಡೋ ಅಗ್ರಿಕಲ್ಚರ್ ಥೀಮ್ ಪಾರ್ಕ್’ ಎಂದು ಕರೆದರು. ಅದನ್ನು ಸಾರ್ವ ಜನಿಕರಿಗೂ ಮುಕ್ತವಾಗಿಸಿ, ಅದರಿಂದ ಬಂದ ಹಣವನ್ನು ಮತ್ತೆ ಕಾಡಿನ ಅಭಿವೃದ್ಧಿಗೇ ಬಳಸಲಾರಂಭಿಸಿದರು.
ಈಗ ನೆಲ್ಲಿಕ್ಕುಜಿ ಅವರ ಕಾಡಿನಲ್ಲಿ ಸುಂದರ ಹೋಂ ಸ್ಟೇ ಜತೆಗೆ ಗೋ ಕಾರ್ಟಿಂಗ್, ಕೇಬಲ್ ಕಾರ್, ಸ್ವಿಮ್ಮಿಂಗ್ ಪೂಲ್, ಬೋಟಿಂಗ್, ಬೋಟ್ ಸಫಾರಿ, ರೋಪ್‌ವೇ, ಆರ್ಚೆರಿ, ರೆಸ್ಟೋರೆಂಟ್, ರೆಸಾರ್ಟ್ ಸೇರಿ ಹಲವು ಸೌಲಭ್ಯವಿದೆ. ಅಷ್ಟೆಲ್ಲ ಇದ್ದರೂ ಈ ಪ್ರದೇಶ ಪ್ಲಾಸ್ಟಿಕ್ ಮುಕ್ತ ಮತ್ತು ಯಾವುದೇ ಕಾರಣಕ್ಕೂ ಇಂಧನ ಚಾಲಿತ ವಾಹನಕ್ಕೆ ಇಲ್ಲಿ ಎಂಟ್ರಿ ಇಲ್ಲ. ಬರುವ ಪ್ರವಾಸಿಗರಿಗೆ ಕಾಡು ಸುತ್ತಲು ಇ-ವಾಹನ, ಎತ್ತಿನಗಾಡಿಯ ವ್ಯವಸ್ಥೆಯಿದೆ. ಅವೆರೆಡೂ ಬೇಡ ಎನ್ನುವವರು ನಡೆದುಕೊಂಡೇ ಕಾಡು ಸುತ್ತಬಹುದು. ದೇಶ ವಿದೇಶದ ಕೃಷಿ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧಕರು ಕೂಡ ಇಲ್ಲಿಗೆ ಬಂದು ಸಸ್ಯ ಪ್ರಭೇದಗಳ ಬಗ್ಗೆ ಮಾಹಿತಿ ಪಡೆದು ಹೋಗುತ್ತಾರೆ.
ನೆಲ್ಲಿಕ್ಕುಜಿ ಅವರ ಈ ಕಾಡು ಅದೆಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆದುಕೊಂಡಿದೆಯೆಂದರೆ ಗುಜರಾತ್‌ನ ಪ್ರವಾಸೋದ್ಯಮ ಮತ್ತು ಮೀನುಗಾರಿಕೆ ಸಚಿವಾಲಯದ ಸಚಿವರು ಕೆಲವು ತಿಂಗಳ ಹಿಂದೆ ಈ ಕಾಡಿಗೆ ಭೇಟಿ ಕೊಟ್ಟಿ ದ್ದಾರೆ. ಈ ಕಾಡಿನಿಂದಾಗಿ ಸ್ಫೂರ್ತಿ ಪಡೆದುಕೊಂಡಿರುವ ಅವರು ತಮ್ಮ ರಾಜ್ಯದಲ್ಲೂ ಇಂಥದ್ದೊಂದು ಜೀವ ವೈವಿ ಧ್ಯದ ಕಾಡನ್ನು ನಿರ್ಮಿಸಿಕೊಡಲು ನೆಲ್ಲಿಕ್ಕುಜಿಗೆ ಕೇಳಿ ಕೊಂಡಿದ್ದಾರೆ. ಅದಕ್ಕೆ ಅವರು ಒಪ್ಪಿದ್ದಾರೆ ಕೂಡ. ಇದ್ದ ಹಣವನ್ನು ವ್ಯರ್ಥ ಮಾಡದೆ, ನಿಸರ್ಗ ದೇವತೆಗೆ ಅರ್ಪಿಸಿ ದ್ದರಿಂದಾಗಿ ಅದೆಷ್ಟೋ ಜನರಿಗೆ ಸಸ್ಯ ಜಗತ್ತಿನ ಅಸಂಖ್ಯಾತ ಪ್ರಭೇದಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ಸಿಗುತ್ತಿದೆ ಎಂದು ನಗುತ್ತಾ ಹೇಳುತ್ತಾರೆ ನೆಲ್ಲಿಕ್ಕುಜಿ. ಹಣ ಸಿಕ್ಕರೆ ಅದನ್ನು ದುಪ್ಪಟ್ಟು ಮಾಡುವುದು ಹೇಗೆ? ಎಂದು ಯೋಚಿ ಸುವ ಇಂದಿನ ಸಮಾಜದ ಎದುರು ಕಾಡಿಗಾಗಿ ಯೇ ದುಡಿಯುತ್ತಿರುವ ನೆಲ್ಲಿಕ್ಕುಜಿ ಆದರ್ಶವೇ ಸರಿ.
ಕೃಪೆ : ಬೆಟರ್ ಇಂಡಿಯಾ
– ಮಂದಾರ ಸಾಗರ