ಊರು ಸುತ್ತುವುದೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಯುವಕರಿಗೆ ಬೈಕ್‌ನಲ್ಲಿ ಸುತ್ತುವುದು ಇಷ್ಟವಾದರೆ ಯುವತಿಯರಿಗೆ ಬಸ್‌ನಲ್ಲಿ ಪ್ರಯಾಣಿಸುವಾಗ ಕಿಟಕಿ ಬದಿ ಸೀಟ್ ಬಲು ಇಷ್ಟ.
ಬಸ್‌ನಲ್ಲಿ ಕಿಟಕಿ ಬದಿಯಲ್ಲಿ ಬೇರೆ ಬೇರೆ ಕಾರಣಕ್ಕಾಗಿ ಕೂರುವವರಿದ್ದಾರೆ. ಕೆಲವರು ಒಳ್ಳೆಯ ಗಾಳಿ ಬೀಸುತ್ತದೆ ಎಂದು ಕೂತರೆ, ಇನ್ನೂ ಕೆಲವರು ಪ್ರಕೃತಿ ಸೌಂದರ್ಯ ಸವಿಯಲು ಕೂರುತ್ತಾರೆ.
ವಾಹನ ಮುಂದಕ್ಕೆ ಚಲಿಸಲು ಆರಂಭಿಸಿದಂತೆ ನಿಂತಲ್ಲೇ ನಿಂತಿರುವ ಮರಗಳು ಬೆಟ್ಟ ಗುಡ್ಡಗಳು ನಮ್ಮೊಂದಿಗೆಯೇ ಓಡುತ್ತಿವೆ ಎಂಬ ಅನುಭವ ಬಹುತೇಕ ಎಲ್ಲರಿಗೂ ಆಗಿರುತ್ತದೆ. ಬೀಸುವ ತಣ್ಣನೆಯ ಗಾಳಿಯಲ್ಲಿ ಅತ್ತಿತ್ತ ಬಳುಕುವ ವೃಕ್ಷೋಚರಕಗಳ ನೋಡಬೇಕೆಂದರೂ ರಾತ್ರಿ ಹೊತ್ತಿನಲ್ಲಿ ಸಾಧ್ಯವಾಗುವುದಿಲ್ಲ. ಕೆಲವೊಂದು ದಟ್ಟ ಕಾಡುಗಳಿಂದ ಕೂಡಿದ ಪ್ರದೇಶಗಳಲ್ಲಿ ಬೀದಿದೀಪವಿಲ್ಲದಿದ್ದಾಗ ನಿದ್ರೆ ಆವರಿಸುವುದು ಸಹಜ.
ಅಪ್ಪಿ ತಪ್ಪಿ ನಿದ್ದೆಗೆ ಜಾರಿದೆವು ಎಂದಾದರೆ ನಾವು ಇಳಿಯುವ ನಿಲ್ದಾಣ ಬಂದಾಗಲೇ ಗೊತ್ತಾಗಬೇಕು ಹೊರತು ಇನ್ನು ಎಲ್ಲೊ ಮಧ್ಯದಲ್ಲಿ ಏಳುತ್ತೇವೆ ಎಂದರೇ ಸಾಧ್ಯವಿಲ್ಲ. ಒಂದೊಂದು ಬಾರಿ ಬಸಿನ ಕಂಡೆಕ್ಟರ್ ಆದವರು ಬಂದು “ನಿಲ್ದಾಣ ತಲುಪಿದೆ ನೀವೂ ಇಳಿದುಕೊಳ್ಳಬಹುದು’ ಎಂದು ಎಚ್ಚರಿಸಬೇಕಾಗುತ್ತದೆ.
ಎಚ್ಚರವಾದಾಗ ಗಾಬರಿಗೊಂಡು ಎದ್ದು ಆತುರಾತುರವಾಗಿ ಇಳಿದು ಹೋದವರಿಗೆ ಇನ್ನಾವುದೋ ಮುಂದಿನ ಪ್ರಯಣದಲ್ಲಿ ಅದೇ ಕಂಡಕ್ಟರ್ ಸಿಕ್ಕರೆ ಬಿಟ್ಟು ಬಿಡದಷ್ಟು ನಾಚಿಕೆಯಾಗಿ ನಗಲು ಪ್ರಾರಂಭಿಸುತ್ತೇವೆ. ಆದರೆ ಪಾಪ ಆತನಿಗೆ ನಾವು ಯಾರು ಏನು ಎಂದು ಗೊತ್ತಿರುವುದಿಲ್ಲ. ದಿನಕ್ಕೆ ಸಾವಿರಾರು ಪ್ರಯಾಣಿಕರನ್ನು ನೋಡುತ್ತಾ ಇರುತ್ತಾರೆ. ಎಷ್ಟೋ ಬಾರಿ ತನ್ನವರು ಎಂದು ಜನರನ್ನು ಕಾಣುತ್ತ ಪ್ರೀತಿಯಿಂದ ಬೆರೆಯುತ್ತಾನೆ.
ಮಾನವೀಯತೆ ದೃಷ್ಟಿಯಿಂದ ಆತನು ಎಬ್ಬಿಸಿದರೆ ಕೋಪದಿಂದ ಕೆಲವು ಬಾರಿ ಕೆಲವರು ಮಾತ್ರ ಆತನನ್ನೇ ಅನುಮಾನಿಸಿ ಕೆಟ್ಟವ ಎಂದು ಬಿಡುತ್ತೇವೆ. ಆ ಕ್ಷಣ ಆ ಜೀವವಾದರೂ ಹೇಗೆ ನೋವು ತಡೆದುಕೊಳ್ಳಲು ಸಾಧ್ಯವೆಂದು ನಾವು ಯೋಚಿಸಬೇಕು. ನಮ್ಮದೇ ತಪ್ಪು ಎಂದು ನಾವು ಯಾರು ಅರಿಯುವುದೇ ಇಲ್ಲ ಯಾಕೆಂದರೇ ಪ್ರಯಾಣಿಸುವಾಗ ನಮಗೆ ನಮ್ಮ ಮೇಲೆಯೇ ಪ್ರಜ್ಞೆ ಇಲ್ಲದಂತೆ ಮಲಗಿ ಇನ್ಯಾರನ್ನಾದರೂ ಬೈದುಕೊಂಡು ಹೋದರೆ ಮಾನವೀಯತೆಗೆ ಬೆಲೆ ಎಲ್ಲಿದೆ?
ನಾನು ಇಳಿಬೇಕಾದ ಸ್ಥಳದಲ್ಲಿ ನಾನೇ ಇಳಿಯಬೇಕೆಂಬುವುದನ್ನು ಅರಿತು ಬಸ್ ಹತ್ತಬೇಕೇ ಹೊರತು ಇನ್ನೊಬ್ಬ ಇದ್ದಾನೆ ಎಂದು ಸಾಗಬಾರದು.
-ಅನನ್ಯಾ ಎಚ್. ಸುಬ್ರಹ್ಮಣ್ಯ
ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು