Advertisement

KAMBALA: ನಂದಳಿಕೆ ಭಟ್ರ ಪಾಂಡು: ಇವನು ಪಾಪ ಪಾಂಡು ಅಲ್ಲ.. 203 ಪದಕಗಳ ಸರದಾರ

04:03 PM Nov 25, 2023 | Team Udayavani |

ಬೆಂಗಳೂರು: ಪಾಂಡು.. ಈ ಹೆಸರು ಕೇಳಿದೊಡನೆ ಕಂಬಳ ಪ್ರಿಯರ ಕಂಗಳು ತೆರೆಯುತ್ತವೆ. ಮನಸು ಅರಳುತ್ತದೆ. ನಂದಳಿಕೆ ಶ್ರೀಕಾಂತ ಭಟ್ಟರ ಹಟ್ಟಿಯ ಈ ಪಾಂಡು ಮಾಡಿದ ಸಾಧನೆ ಅಂತಹದ್ದು.

Advertisement

ಬೆಂಗಳೂರು ಕಂಬಳದಲ್ಲಿ ಪಾಂಡು ಕೋಣ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಹಾಗಂತ ಆತ ರಾಜ ಮಹಾರಾಜ ಕಂಬಳದಲ್ಲಿ ಪಾಂಡು ಭಾಗವಹಿಸುತ್ತಿಲ್ಲ. ಆದ್ರೆ ಅವನೇ ಇಲ್ಲಿ ಎಲ್ಲರ ನೆಚ್ಚಿನ ಕೋಣ.

ಈ ಪಾಂಡು ಪಾಪ ಅಲ್ಲ

ಹೆಚ್ಚಿನವರಿಗೆ ಪಾಪ ಪಾಂಡು ಪಾತ್ರ ಗೊತ್ತು. ಹೀಗಾಗಿ ಪಾಂಡು ಹೆಸರಿನ ವ್ಯಕ್ತಿಗಳಿಗೆ ಪಾಪ ಪಾಂಡು ಎಂದು ಕರೆಯುವುದು ಸಾಮಾನ್ಯ. ಆದರೆ ನಂದಳಿಕೆ ಭಟ್ರ ಪಾಂಡುವಿನ ವಿಷಯದಲ್ಲಿ ಇದು ತಪ್ಪಾಗುತ್ತದೆ. ಈ ಪಾಂಡು ಪಾಪ ಅಲ್ಲ. ತುಸು ಮುಂಗೋಪಿಯಾದ ಪಾಂಡು ಸಾಮಾನ್ಯವಾಗಿ ಯಾರನ್ನೂ ಹತ್ತಿರ ಬಿ️ಡುವುದಿಲ್ಲ. ಯಜಮಾನ ಶ್ರೀಕಾಂತ ಭಟ್ರು ಮತ್ತು ಆರೈಕೆ ಮಾಡುವ ಕೆಲ️ವೇ ಕೆಲ️ವು ಪರಿಚಾರಕರ ಜೊತೆ ಮಾತ್ರ ಪಾಂಡು ಅತ್ಯಂತ ಪಾಪದ ಪಾಂಡು.

Advertisement

203 ಪದಕ

ಜೋಡುಕರೆ ಕಂಬಳ ಇತಿಹಾಸದಲ್ಲಿಯೇ ಅತಿ ಹೆಚ್ಚು ಪದಕ ಗೆದ್ದ ದಾಖಲೆ ಇರುವುದು ಪಾಂಡುವಿನ ಹೆಸರಿನಲ್ಲಿ ಎನ್ನುತ್ತಾರೆ ನಂದಳಿಕೆ ಶ್ರೀಕಾಂತ್ ಭಟ್ರು. ಕಳೆದ ಹಲ️ವು ವರ್ಷಗಳಿಂದ ಕಂಬಳ ಕೂಟದಲ್ಲಿ ಮೆರೆಯುತ್ತಿರುವ ಪಾಂಡು ಇದುವರೆಗೆ ಗೆದ್ದ ಪದಕಗಳ ಸಂಖ್ಯೆ ಬರೋಬ್ಬರಿ 203.

ಓಟದ ಸಮಯದಲ್ಲಿ ಬಲ️ ಮತ್ತು ಎಡ. ಹೀಗೆ ಎರಡೂ ಬದಿಯಲ್ಲಿ ಸಮಾನ ಸಾಮರ್ಥ್ಯದಿಂದ ಓಡುವ ಪಾಂಡು ಅತ್ತೂರು ಕಾಟಿ, ಚಾಂಪಿಯನ್ ಕುಟ್ಟಿ ಮತ್ತು ಕೊಳಚೂರು ಚೆನ್ನನ ಜೊತೆ ಸೇರಿ ಹಲ️ವು ಕಂಬಳ ಕರೆಗಳಲ್ಲಿ ಓಡಿ ಸ್ವರ್ಣ ಪದಕಕ್ಕೆ ಮುತ್ತಿಕ್ಕಿದವನು ಈ ಪಾಂಡು.

ಪಾಂಡು ಆರಂಭದಿಂದಲೇ ನಂದಳಿಕೆಯ ಹಟ್ಟಿಯಲ್ಲಿ ಇದ್ದವನಲ್ಲ. ಅತ್ತೂರು ಮನ್ಮಥ ಜೆ ಶೆಟ್ರ ಬಳಿಯಿದ್ದ ಪಾಂಡು ಬಳಿಕ ಮೂಡುಬಿ️ದಿರೆ ಕರಿಂಜೆ ವಿನು ವಿಶ್ವನಾಥ ಶೆಟ್ಟರ ಬಳಿಯಿತ್ತು. ಇದಾದ ಬಳಿಕ ಇದು ಸೇರಿದ್ದು ನಂದಳಿಕೆ ಹಟ್ಟಿಗೆ.

Advertisement

Udayavani is now on Telegram. Click here to join our channel and stay updated with the latest news.

Next