Advertisement
ಗವಿಸಿದ್ದೇಶ್ವರ ಜಾತ್ರೆಯಲ್ಲಿ ಸ್ವಾಮೀಜಿಗಳು ಪೌರ ಕಾರ್ಮಿಕರ ಬಗ್ಗೆ ಪ್ರೀತಿ ತೋರುತ್ತಿದ್ದಾರೆ. ಪೌರ ಸೇವಾ ಕಾರ್ಮಿಕರ ಸೇವೆಯಿಂದಾಗಿಜಾತ್ರಾ ಆವರಣದಲ್ಲಿ ಧೂಳು ಇಲ್ಲದೇಆರೋಗ್ಯಕರ ವಾತಾವರಣ ನಿರ್ಮಾಣವಾಗಿದೆ. ಇವರ ಸೇವೆಯನ್ನು ಮನಗೊಂಡು ಅಪ್ಪಾಜಿ ಕ್ಯಾಂಟೀನ್ ಮಾಲೀಕರಾದ ಸತೀಶ ಸರನಾಡಗೌಡರ್ ಸುಮಾರು 90 ಪೌರ ಕಾರ್ಮಿಕರಿಗೆ ಹೆಸರು ಬೇಳೆ ಪಾಯಸ ಹಾಗೂ ಬೆಣ್ಣೆದೋಸೆ, ಕಾಫಿ ಒದಗಿಸಿದರು. ಅಲ್ಲದೇ ಮಹಿಳಾ ಕಾರ್ಮಿಕರಿಗೆ ಸೀರೆ ಮತ್ತು ಕುಪ್ಪಸ, ಪುರುಷ ಕಾರ್ಮಿಕರಿಗೆ ಅಂಗಿಯನ್ನು ಉಡುಗೊರೆಯಾಗಿ ನೀಡಿದರು. ಪ್ರತಿವರ್ಷದಂತೆ ಈ ವರ್ಷವು ಅಪ್ಪಾಜಿ ಕ್ಯಾಂಟೀನ್‌ಮಾಲೀಕ ಸತೀಶ ಸೇವೆಗೈದಿರುವುದು ಶ್ಲಾಘನೀಯ.
Related Articles
Advertisement
ದಾಸೋಹಕ್ಕೆ ಹರಿದು ಬಂದ ಧಾನ್ಯ: ಗವಿಮಠದ ಮಹಾದಾಸೋಹಕ್ಕೆ ರವಿವಾರ ಕಿನ್ನಾಳ್ ಗ್ರಾಮದ ಭಕ್ತರು 40 ಚೀಲ ನೆಲ್ಲು, 4 ಪ್ಯಾಕೆಟ್ ಬೆಲ್ಲ, 60 ಕುಂಬಳಕಾಯಿ ಅರ್ಪಿಸಿದರು. ಕವಲೂರ ಗ್ರಾಮದ ಸದ್ಭಕ್ತರು 30 ಕ್ವಿಂಟಲ್ ಗೋಧಿ ಹುಗ್ಗಿ ಹಾಗೂ 5 ಕ್ವಿಂಟಲ್ ಸಜ್ಜಕವನ್ನು ತಯಾರಿಸಿ ಪ್ರಸಾದ ಸೇವೆಗೈದರು. ಮಾರುತಿ ಸೇವಾ ಸಮಿತಿ ಹುಡ್ಕೊà ಕಾಲನಿ ಕೊಪ್ಪಳ ಹಾಗೂ ಸತ್ಸಂಗ ಯುವಕ ಸಂಘ ಕಾರಟಗಿ ಹಾಗೂ ಇನ್ನಿತರ ಸಂಘಟನೆಗಳು, ಸ್ವಯಂ ಸೇವಕರು ಪ್ರಸಾದ ವಿತರಿಸುವ ಸೇವೆಗೈದರು.