Advertisement

ಉತ್ತರ ಪ್ರದೇಶ ಸರಕಾರದಿಂದ ವಿಶೇಷ ಭದ್ರತಾ ಪಡೆ ರಚನೆ

12:41 AM Sep 15, 2020 | mahesh |

ಲಕ್ನೋ: ಯಾವುದೇ ಆರೋಪಿಯ ಕುಕೃತ್ಯದ ಬಗ್ಗೆ ಖಚಿತ ಮಾಹಿತಿಯಿದ್ದಲ್ಲಿ ಆತನನ್ನು ಯಾವುದೇ ವಾರಂಟ್‌ ಇಲ್ಲದೆ, ಮ್ಯಾಜಿಸ್ಟ್ರೇಟ್‌ರವರ ಆದೇಶವಿಲ್ಲದೆ ವಶಕ್ಕೆ ಪಡೆಯುವ, ಬಂಧಿಸುವ ಅಥವಾ ಆತನ ಮನೆಯನ್ನು ತಪಾಸಣೆಗೊಳಪಡಿಸುವ ಅಧಿಕಾರವುಳ್ಳ ಪಡೆಯೊಂ ದನ್ನು ಉತ್ತರ ಪ್ರದೇಶ ಸರಕಾರ ರಚಿಸಿದೆ.

Advertisement

ಭಾನುವಾರ ತಡರಾತ್ರಿ, ಉತ್ತರ ಪ್ರದೇಶ ಸರ್ಕಾರದ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅವನೀಶ್‌ ಅವಸ್ತಿ ಅವರು ಸರಣಿ ಟ್ವೀಟ್‌ಗಳನ್ನು ಮಾಡಿ ಈ ವಿಚಾರ ಪ್ರಕಟಿಸಿದ್ದಾರೆ.

ಈ ಪಡೆಯ ರಚನೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಕನಸಿನ ಪಡೆ ಎಂದು ಅವರು ಬಣ್ಣಿಸಿದ್ದಾರೆ. ಉತ್ತರ ಪ್ರದೇಶ ವಿಶೇಷ ಭದ್ರತಾ ಪಡೆ (ಯುಪಿಎಸ್‌ಎಸ್‌ಎಫ್) ಎಂದು ಕರೆಯಲ್ಪಡುವ ಈ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಂತೆ (ಸಿಐಎಸ್‌ಎಫ್) ಕಾರ್ಯ ನಿರ್ವಹಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next