Advertisement
ಆಸ್ತಿ ಮಾಲಕತ್ವ ಹಕ್ಕು ವರ್ಗಾವಣೆಯನ್ನು ಸಂಪೂರ್ಣವಾಗಿ ಆನ್‌ಲೈನ್ ಮಾಡುವ ಉದ್ದೇಶದಿಂದ ರಾಜ್ಯದ ರಾಮ ನಗರ, ಕನಕಪುರ ನಗರಸಭೆಗಳಲ್ಲಿ ಪ್ರಾಯೋಗಿ ಕವಾಗಿ ಇದನ್ನು ಅನುಷ್ಠಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಮಂಗಳೂರು ಮಹಾ ನಗರ ಪಾಲಿಕೆ ಸಹಿತ ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ ವಿಸ್ತರಿಸಲು ಸರಕಾರ ಉದ್ದೇಶಿಸಿದೆ. ಸದ್ಯದ ಮಾಹಿತಿ ಪ್ರಕಾರ, ಕೆಲವು ಪಾಲಿಕೆ ಗಳಲ್ಲಿ ಇ-ಆಸ್ತಿ ತಂತ್ರಾಂಶದ ಬಳಕೆಯು ತುಂಬ ನಿಧಾನಗತಿಯಲ್ಲಿ ಇರುವುದರಿಂದ ಸರಕಾರದ ಈ ತಂತ್ರಾಂಶ ಜೋಡಣೆಗೆ ಹಿನ್ನಡೆಯಾಗುತ್ತಿದೆ ಎನ್ನಲಾಗುತ್ತಿದೆ.
ಗ್ರಾಮಾಂತರ ಭಾಗದಲ್ಲಿ ಆರ್‌ಟಿಸಿ ಇದ್ದ ಹಾಗೆ, ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಈ ಹಿಂದೆ ಖಾತಾ ನೀಡಲಾಗುತ್ತಿತ್ತು. ಬಳಿಕ ಕರ್ನಾಟಕ ಮುನಿಸಿಪಲ್ ಡಾಟಾ ಸೊಸೈಟಿ, ರಾಷ್ಟ್ರೀಯ ಸೂಚ್ಯಂಕ ಕೇಂದ್ರದ ಸಹಯೋಗದೊಂದಿಗೆ ಆಸ್ತಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಇ-ಖಾತಾ ಅನುಷ್ಠಾನಿಸಲಾಗಿದೆ. ತಂತ್ರಾಂಶದ ಮೂಲಕ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಅಧಿಕೃತ, ಅನಧಿಕೃತವಲ್ಲದ, ಅಕ್ರಮ ಆಸ್ತಿಗಳ ಮಾಹಿತಿಯನ್ನು ದಾಖಲಿಸಲು/ತಿದ್ದುಪಡಿ ಮಾಡಲು ಆಸ್ತಿಗಳ ಮಾಲಕತ್ವ ಹಕ್ಕು ವರ್ಗಾವಣೆ ಮಾಡಲು, ಆಸ್ತಿ ತೆರಿಗೆಯ ನಕಲನ್ನು ಡಿಜಿಟಲ್ ಸಹಿಯೊಂದಿಗೆ ತಂತ್ರಾಂಶದಿಂದ ಪಡೆಯಲು ಅವ ಕಾಶ ನೀಡಲಾಗಿದೆ. ಇದರಂತೆ ಮಂಗಳೂರಿ ನಲ್ಲಿ ಸುಮಾರು 350 ಆಸ್ತಿಗಳಿಗೆ ಇ-ಖಾತಾ ನೀಡಲಾಗಿದೆ. ಪ್ರಾಪರ್ಟಿ ಐಡಿ ಇಲ್ಲದೆ ಪರದಾಟ!
“ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರತಿ ಭೂಮಿಯನ್ನು ಪಾಲಿಕೆಯು ಸರ್ವೆ ಮಾಡಿ ನಿಗದಿತ ಐಡಿಯನ್ನು ನೀಡಲಾಗುತ್ತದೆ. 2002ರಲ್ಲಿ ಕೇಂದ್ರ ಸರಕಾರದ ನಿರ್ಮಲ ನಗರ ಯೋಜನೆಯಲ್ಲಿ ಐಡಿ ನೀಡುವ ಪ್ರಕ್ರಿಯೆ ಆರಂಭವಾಯಿತಾದರೂ ಇದು ಶೇ. 50ರಷ್ಟು ಪ್ರದೇಶಕ್ಕೆ ಮಾತ್ರ ಆಗಿದೆ. ಉಳಿದ ಶೇ. 50ರಷ್ಟು ಭೂಮಿಗೆ ಪ್ರಾಪರ್ಟಿ ಐಡಿ ಆಗಿಲ್ಲ. ಸದ್ಯ ಇ-ಖಾತಾ ಮಾಡುವ ವೇಳೆಯಲ್ಲಿ ಪ್ರಾಪರ್ಟಿ ಐಡಿ ಕೂಡ ನಮೂದು ಮಾಡಬೇಕಾದ ಹಿನ್ನೆಲೆಯಲ್ಲಿ ಬಹುತೇಕ ಮಂದಿಗೆ ಈ ಐಡಿ ಇಲ್ಲದೆ ಸಮಸ್ಯೆ ಆಗಿದೆ.
Related Articles
Advertisement
ಈ ಮಧ್ಯೆ, ಇ-ಖಾತಾ ಆದ ಬಳಿಕ ಅದನ್ನು ಪರಿಶೀಲಿಸಿದಾಗ ಅಕ್ಷರ ತಪ್ಪು, ಅಥವಾ ಸಂಖ್ಯೆ ತಪ್ಪು ಕಣ್ತಪ್ಪಿನಿಂದ ನಮೂದಾಗಿದ್ದರೆ ಮತ್ತೆ ಅದನ್ನು ಪಾಲಿಕೆಯಲ್ಲಿ ಸರಿ ಮಾಡುವಂತಿಲ್ಲ. ಅದನ್ನು ಬೆಂಗಳೂರಿನ ಪೌರಾಡಳಿತ ಇಲಾಖೆಗೆ ಕಳುಹಿಸಿ ಸರಿಪಡಿಸಬೇಕು. ಪಾಲಿಕೆಯ ಕಂದಾಯ ಇಲಾಖೆಯಲ್ಲಿ ಸಿಬಂದಿ ಕೊರತೆಯಿಂದಾಗಿ ಕೊಂಚ ಅಕ್ಷರ ತಪ್ಪಾದರೂ ಈ ಸಮಸ್ಯೆ ಎದುರಾಗಲಿದೆ ಎನ್ನುತ್ತಾರೆ ಸಾರ್ವಜನಿಕರೊಬ್ಬರು.
ಇ-ಖಾತಾ ನೋಂದಣಿಗೆ ವೇಗಮಂಗಳೂರಿನಲ್ಲಿ ಇ-ಖಾತಾ ನೋಂದಣಿ ಈಗಾಗಲೇ ನಡೆ ಯು ತ್ತಿದೆ. ಜಾಗದ ಪೂರ್ಣ ದಾಖಲಾತಿ ನೀಡಿ ಇ- ಖಾತಾ ಮಾಡಬಹುದಾಗಿದೆ. ಮುಂದೆ ಆಸ್ತಿ ಮಾಲಕತ್ವ ಹಕ್ಕು ವರ್ಗಾವಣೆಯನ್ನು ಸಂಪೂರ್ಣವಾಗಿ ಆನ್‌ಲೈನ್ ಮಾಡಲು ಸರಕಾರ ಉದ್ದೇಶಿ ಸಿದೆ. ಈ ಬಗ್ಗೆ ಪಾಲಿಕೆ ಸಭೆಯಲ್ಲಿ ಸೂಕ್ತ ತೀರ್ಮಾನವಾಗಲಿದೆ. ಇ-ಖಾತಾ ಮಾಡಿಸುವಲ್ಲಿ ಜನರಿಗೆ ಸಮಸ್ಯೆ ಆಗದಂತೆ ಪಾಲಿಕೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.
– ಸಂತೋಷ್ ಕುಮಾರ್, ಉಪ ಆಯುಕ್ತರು, ಮನಪಾ