ನವದೆಹಲಿ: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡು ಅಮೃತ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದ ಜೈಲುಗಳಲ್ಲಿರುವ ಕೈದಿಗಳ ಬಿಡುಗಡೆಗೆ ಚಿಂತನೆ ನಡೆಸುತ್ತಿದೆ.
ಒಟ್ಟು ಮೂರು ಹಂತಗಳಲ್ಲಿ ಅಂದರೆ ಆ.15, 2023ರ ಜ.26 ಮತ್ತು 2023ರ ಆ.15ರಂದು ಕೈದಿಗಳ ಬಿಡುಗಡೆಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಈ ನಿಟ್ಟಿನಲ್ಲಿ ಜೂ.10ರಂದೇ ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತದ ಪ್ರದೇಶಗಳಿಗೆ ಸೂಚನೆಯನ್ನೂ ನೀಡಿದೆ.
ಇದನ್ನೂ ಓದಿ:ತಮಿಳು ನಾಡು ಸಿಎಂ ಒಕ್ಕೂಟದ ವ್ಯವಸ್ಥೆ ವಿರುದ್ಧ ನಿಂತಿದ್ದಾರೆ : ಸಚಿವ ಕಾರಜೋಳ
50 ವರ್ಷಕ್ಕಿಂತ ಮೇಲ್ಪಟ್ಟವರು, ಶೇ.70 ಅಥವಾ ಅದಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿದವರು, ಮಹಿಳೆಯರು, ತೃತೀಯ ಲಿಂಗಿಗಳನ್ನು ಪರಿಗಣಿಸಲಾಗುತ್ತದೆ.
ಗುರುತರ ಆರೋಪಗಳಲ್ಲಿ ಭಾಗಿಯಾಗಿರುವವರಿಗೆ ಇಂಥ ಸೌಲಭ್ಯ ನೀಡದಿರಲೂ ನಿರ್ಧರಿಸಿದೆ ಕೇಂದ್ರ ಸರ್ಕಾರ.