Advertisement

ಸ್ವಾತಂತ್ರ್ಯೋತ್ಸವ, ಗಣೇಶ ಚತುರ್ಥಿಗೆ ವಿಶೇಷ ರೈಲು

04:05 AM Jul 19, 2017 | Team Udayavani |

ಹುಬ್ಬಳ್ಳಿ: ಮುಂಬರುವ ಆಗಸ್ಟ್‌ನಲ್ಲಿ ಸ್ವಾತಂತ್ರ್ಯೋವ ಮತ್ತು ಗಣೇಶ ಚತುರ್ಥಿ ಇರುವುದರಿಂದ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ನೈರುತ್ಯ ರೈಲ್ವೇ ವಿಭಾಗವು ಯಶವಂತಪುರ-ಬೆಳಗಾವಿ ಮಧ್ಯೆ ವಿಶೇಷ ರೈಲು ವ್ಯವಸ್ಥೆ ಮಾಡಿದೆ. ವಿಶೇಷ ರೈಲು ಆ. 11ರಂದು ರಾತ್ರಿ 8.15ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಗ್ಗೆ 8.10ಕ್ಕೆ ಬೆಳಗಾವಿ ತಲುಪಲಿದೆ. ಅದೇ ರೀತಿ ಆ. 15ರಂದು ಸಂಜೆ 7.15ಕ್ಕೆ ಬೆಳಗಾವಿಯಿಂದ ಹೊರಡುವ ರೈಲು ಮರುದಿನ ಬೆಳಗ್ಗೆ 6.20ಕ್ಕೆ ಯಶವಂತಪುರ ನಿಲ್ದಾಣಕ್ಕೆ ಬಂದು ಸೇರಲಿದೆ.

Advertisement

ಗಣೇಶ ಚತುರ್ಥಿಗೆ ವಿಶೇಷ ರೈಲು: ಗಣೇಶ ಚತುರ್ಥಿಯ ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ಸರಿದೂಗಿಸಲು ವಿಶೇಷ ರೈಲು (06583/06584) ಓಡಿಸಲಿದೆ ನೈರುತ್ಯ ರೈಲ್ವೆ. ಆ. 24ರಂದು ರಾತ್ರಿ 8.15ಕ್ಕೆ ಯಶವಂತಪುರದಿಂದ ಹೊರಡುವ ರೈಲು ಮರುದಿನ ಬೆಳಗ್ಗೆ 8.10ಕ್ಕೆ ಬೆಳಗಾವಿ ತಲುಪುತ್ತದೆ. ಅದೇ ರೀತಿ ಆ. 27ರಂದು ಸಂಜೆ 5.20ಕ್ಕೆ ಬೆಳಗಾವಿಯಿಂದ ಹೊರಡುವ ರೈಲು ಮರುದಿನ ಬೆಳಗ್ಗೆ 5 ಗಂಟೆಗೆ ಯಶವಂತಪುರಕ್ಕೆ ಬಂದು ಸೇರಲಿದೆ.

ರೈಲು ಸಮಯ ಪರಿಷ್ಕರಣೆ: ಹುಬ್ಬಳ್ಳಿ: ಯಶವಂತಪುರ – ಹರಿಹರ ವಾರದಲ್ಲಿ 3 ದಿನ ಸಂಚರಿಸುವ ಎಕ್ಸ್‌ಪ್ರಸ್‌ (16577/16578) ರೈಲಿನ ಸಮಯವನ್ನು ಜು. 19ರಿಂದ ಪರಿಷ್ಕರಿಸಲು ನೈರುತ್ಯ ರೈಲ್ವೇ ನಿರ್ಧರಿಸಿದೆ. ಪರಿಷ್ಕೃತ ವೇಳಾಪಟ್ಟಿಯಂತೆ ಯಶವಂತಪುರ ದಿಂದ ಸಂಜೆ 4.15ಕ್ಕೆ ಹೊರಡುವ ಎಕ್ಸ್‌ಪ್ರೆಸ್‌ ರೈಲು ರಾತ್ರಿ 11.30ಕ್ಕೆ ಹರಿಹರ ತಲುಪಲಿದೆ. ಅದೇ ರೀತಿ ಹರಿಹರದಿಂದ ಬೆಳಗ್ಗೆ 6.15ಕ್ಕೆ ಹೊರಡುವ ರೈಲು ಮಧ್ಯಾಹ್ನ  12.30ಕ್ಕೆ ಯಶವಂತಪುರ ನಿಲ್ದಾಣಕ್ಕೆ ಬಂದು ಸೇರಲಿದೆ.

ವಾರದ ವಿಶೇಷ ರೈಲು ಸೇವೆ: ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಕೃಷ್ಣರಾಜಪುರಂ-ಕೊಯಮತ್ತೂರ್‌ ಮಧ್ಯೆ ಜು. 19ರಿಂದ ಸೆ. 27ರವರೆಗೆ ವಾರದ ವಿಶೇಷ ಸ್ಪೇಷಲ್‌ (06060/06059) ರೈಲು ವ್ಯವಸ್ಥೆ ಮಾಡಲಾಗಿದೆ. ಕೊಯಮತ್ತೂರಿನಿಂದ ಪ್ರತಿ ಮಂಗಳವಾರ ರಾತ್ರಿ 8.40ಕ್ಕೆ ಹೊರಡುವ ರೈಲು ಬುಧವಾರ ಬೆಳಗ್ಗೆ 4 ಗಂಟೆಗೆ ಕೃಷ್ಣರಾಜಪುರ ತಲುಪಲಿದೆ. ಅದೇ ರೀತಿ ಕೃಷ್ಣರಾಜಪುರದಿಂದ ಪ್ರತಿ ಬುಧವಾರ ರಾತ್ರಿ 9.30ಕ್ಕೆ ಹೊರಡುವ ರೈಲು ಗುರುವಾರ ನಸುಕಿನಲ್ಲಿ 5.20ಕ್ಕೆ ಕೊಯಿಮತ್ತೂರಿಗೆ ಆಗಮಿಸಲಿದೆ ಎಂದು ನೈರುತ್ಯ ರೈಲ್ವೇ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next