Advertisement

ಗ್ರಾಮ ವಿಕಾಸಕ್ಕೆ ವಿಶೇಷ ಆದ್ಯತೆ: ಜೀವನ್‌ ಪ್ರಕಾಶ್‌

12:01 PM Jan 15, 2018 | |

ಹಳೆಯಂಗಡಿ: ಗ್ರಾಮೀಣ ಭಾಗದ ಮೂಲಸೌಕರ್ಯಕ್ಕೆ ಪ್ರಥಮ ಆದ್ಯತೆ ನೀಡುವುದರಿಂದ ಗ್ರಾಮ ವಿಕಾಸ ಹೊಂದಿ ಪಟ್ಟಣ ಪ್ರದೇಶದಂತಹ ವಾತಾವರಣ ನಿರ್ಮಾಣವಾಗುತ್ತದೆ ಎಂದು ಮಂಗಳೂರು ತಾ.ಪಂ. ಸದಸ್ಯ ಜೀವನ್‌ ಪ್ರಕಾಶ್‌ ಕಾಮೆರೊಟ್ಟು ಹೇಳಿದರು. ಹಳೆಯಂಗಡಿ ಗ್ರಾಮ ಪಂಚಾಯತ್‌ನ ಕೊಳುವೈಲು ಕೋರ್ದಬ್ಬು ದೈವಸ್ಥಾನದ ಬಳಿಯಲ್ಲಿ ಪರಿಶಿಷ್ಟ ಜಾತಿ ಪಂಗಡದ ಮೀಸಲಾತಿಯ ಅನುದಾನದಲ್ಲಿ 1.77 ಲಕ್ಷ ರೂ. ವೆಚ್ಚದ ಇಂಟರ್‌ಲಾಕ್‌ ಕಾಮಗಾರಿಯನ್ನು ಉದ್ಘಾಟಿಸಿದರು.

Advertisement

ಗ್ರಾಮದ ಹಿರಿಯರಾದ ಕೃಷ್ಣಪ್ಪ ಕೊಳುವೈಲು ಅವರು ಕಾಮಗಾರಿಯನ್ನು ಅನಾವರಣಗೊಳಿಸಿದರು. ಕಾಮಗಾರಿಗೆ ಸ್ಥಳದಾನ ನೀಡಿದ ಗಣೇಶ್‌ ಎ. ಕೋಟ್ಯಾನ್‌ ಅವರನ್ನು ಜಿ.ಪಂ. ಸದಸ್ಯ ವಿನೋದ್‌ ಕುಮಾರ್‌ ಬೊಳ್ಳೂರು ಗೌರವಿಸಿದರು. ಹಳೆಯಂಗಡಿ ಪಿಸಿಎ ಬ್ಯಾಂಕ್‌ನ ಅಧ್ಯಕ್ಷ ಎಸ್‌.ಎಸ್‌.ಸತೀಶ್‌ ಭಟ್‌ ಕೊಳುವೈಲು, ಹಳೆಯಂಗಡಿ ಗ್ರಾ.ಪಂ. ಸದಸ್ಯರಾದ ಬೇಬಿ ಸುಲೋಚನಾ, ಜಯಂತಿ, ಸುಗಂಧಿ, ವಿನೋದ್‌ ಕುಮಾರ್‌, ಮಾಜಿ ತಾ.ಪಂ. ಸದಸ್ಯೆ ಸಾವಿತ್ರಿ, ದೇವದಾಸ್‌, ಭೋಜ ದೇವಾಡಿಗ, ಮಹಾಬಲ ಹಳೆಯಂಗಡಿ, ಕಮಲಾ, ಗೋವಿಂದ, ಪದ್ಮನಾಭ, ಪುಷ್ಪರಾಜ್‌ ದೇವಾಡಿಗ, ದಯಾಕ್ಷಿ, ಪ್ರಮೀಳಾ, ಗಂಗಾಧರ್‌ ಕೋಟ್ಯಾನ್‌ ಉಪಸ್ಥಿತರಿದ್ದರು. ಹಳೆಯಂಗಡಿ ಬಿಜೆಪಿ ಗ್ರಾಮ ಸಮಿತಿಯ ಅಧ್ಯಕ್ಷ ನರೇಂದ್ರ ಪ್ರಭು ಸ್ವಾಗತಿಸಿದರು. ಪ್ರ.ಕಾ. ಚಿತ್ರಾ ಸುಕೇಶ್‌ ವಂದಿಸಿದರು. ಮನೋಜ್‌ ಕುಮಾರ್‌ ಇಂದಿರಾನಗರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next