Advertisement
ಶಿಕ್ಷಣ ವಲಯದಲ್ಲಿ ಪ್ಲಸ್ ಟು ಸಮತ್ವ ತರಬೇತಿಯಲ್ಲಿ ಕನ್ನಡ ಕಲಿಕಾರ್ಥಿಗಳನ್ನು ಸೇರ್ಪಡೆ ಮಾಡಿದ್ದು, ಕನ್ನಡ ಶಿಕ್ಷಣ ಸಾಮಗ್ರಿಗಳ ಲಭ್ಯತೆಗೆ ಮೊಬಲಗು ಮೀಸಲಿರಿಸಿರುವುದು ಜಿಲ್ಲೆಯ ಕನ್ನಡಿಗರ ವಲಯಕ್ಕೆ ನೀಡಿದ ಅಂಗೀಕಾರವಾಗಿದೆ. ಕನ್ನಡದ ಹಿರಿಯ ಚೇತನ, ನಾಡೋಜ ಡಾ.ಕಯ್ನಾರ ಕಿಞ್ಞಣ್ಣ ರೈ ಅವರ ಸ್ಮಾರಕ ಸಾಕಾರಗೊಳಿಸುವ ನಿಟ್ಟಿನಲ್ಲಿ ಮೊಬಲಗನ್ನು ಮೀಸಲಿರಿಸಿರುವುದು ಗಮನಾರ್ಹವಾಗಿದೆ.ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷ ಎ.ಜಿ.ಸಿ. ಬಶೀರ್ ಅಧ್ಯಕ್ಷತೆ ವಹಿಸಿದ್ದರು.
Related Articles
Advertisement
ಸಂಸ್ಕರಣೆ ಘಟಕ ಸ್ಥಾಪನೆಗೆ ಒಂದು ಕೋಟಿ ರೂ.ಗೂ ಅಧಿಕ ಮೊಬಲಗು ಮೀಸಲಿರಿಸಲಾಗಿದೆ. ಕಿಫ್ ಬಿ ಸಂಸ್ಥೆಯ ಜತೆ ಸೇರಿ ಚಟ್ಟಂಚಾಲ್‌ನಲ್ಲಿ ಅಂತಾರಾಷ್ಟ್ರೀàಯ ಗುಣಮಟ್ಟದ ಕಸಾಯಿಖಾನೆಯೊಂದನ್ನು ಸ್ಥಾಪಿಸಲು 10 ಕೋಟಿ ರೂ. ವೆಚ್ಚ ಅಂದಾಜಿಸಿದ್ದು, ಅದಕ್ಕಿರುವ ಯತ್ನ ನಡೆಸಲಾಗುತ್ತಿದೆ. ಬೀದಿ ನಾಯಿಗಳ ಕಾಟ ನಿಯಂತ್ರಣದಲ್ಲಿ ಅನಿಮಲ್ ಬರ್ತ್ ಕಂಟ್ರೋಲ್(ಎ.ಬಿ.ಸಿ.) ಯೋಜನೆ ಯಶಸ್ವಿಯಾಗಿದ್ದು, ಅದನ್ನು ಮುಂದುವರಿಸಲು, ಯೋಜನೆ ವಿಸ್ತಾರ ಅಂಗವಾಗಿ ತ್ರಿಕ್ಕರಿಪುರದಲ್ಲಿ ಎ.ಬಿ.ಸಿ.ಸೆಂಟರ್ ಆರಂಭಿಸಲು ನಿರ್ಧರಿಸಲಾಗಿದೆ. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಾರ್ವಜನಿಕ ಶ್ಮಶಾನಗಳ ನಿರ್ಮಾಣ ಉದ್ದೇಶವಿದ್ದು, ಮೊಬಲಗು ಮೀಸಲಿರಿಸಲಾಗಿದೆ.
ವಿದ್ಯಾರ್ಥಿಗಳಿಗೆ ನೆರವುಜಿಲ್ಲಾ ಮಟ್ಟದಲ್ಲಿ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಒದಗಿಸುವ ನಿಟ್ಟಿನಲ್ಲಿ 75 ಲಕ್ಷ ರೂ. ಮೀಸಲಿರಿಸಲಾಗಿದೆ. ಬಡ್ಸ್ ಶಾಲೆಗಳ ಮೂಲ ಸೌಲಭ್ಯ ಅಭಿವೃದ್ಧಿಗೆ 53 ಲಕ್ಷ ರೂ.ಮೀಸಲಿರಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಅಭಿಯಾನ ಸಹಿತ ವಿವಿಧ ಶೈಕ್ಷಣಿಕ ಯೋಜನೆಗಳಿಗೆ ಮೊಬಲಗು ಮೀಸಲಿರಿಸಲಾಗಿದೆ. ಎಸ್.ಎಸ್.ಎ. ಯೋಜನೆಗೆ 3 ಕೋಟಿ ರೂ.ಮೀಸಲಿರಿಸಲಾಗಿದೆ. ಶಾಲೆಗಳಲ್ಲಿ ಸೌರಶಕ್ತಿ ಕೇಂದ್ರ ಸ್ಥಾಪನೆಗೆ 2 ಕೋಟಿ ರೂ., ಕ್ರೀಡಾ ವಲಯದ ಅಭಿವೃದ್ಧಿಗೆ “ಕುದಿಪ್’ ಯೋಜನೆಗೆ ಮೊಬಲಗು ಮೀಸಲಿರಿಲಾಗಿದೆ. ಪರಿಶಿಷ್ಟ ಜಾತಿ-ಪಂಗಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನಿಡುವ ನಿಟ್ಟಿನಲ್ಲಿ 75 ಲಕ್ಷ ರೂ. ಮೀಸಲಿರಿಸಲಾಗಿದೆ. ಕೊರಗ ಜನಾಂಗಕ್ಕೆ ಸೌಲಭ್ಯ
ಕೊರಗ ಜನಾಂಗಕ್ಕೆ ಪೌಷ್ಠಿಕಾಹಾರ ಪೂರೈಕೆ, ಕಾಲನಿಗಳ ಅಭಿವೃದ್ಧಿ ಇತ್ಯಾದಿಗಳಿಗೆ ಮೊಬಲಗು ಮೀಸಲಿರಿಸಲಾಗಿದೆ. ಈ ಜನಾಂಗದ ಮಕ್ಕಳು ಶಾಲೆಗೆ ತೆರಳಲು ಸಹಾಯ ಮಾಡುವ ಗೋತ್ರವಾಹಿನಿ ಯೋಜನೆ ಮುಂದುವರಿಕೆಗೆ ಮೊಬಲಗು ಮೀಸಲಿರಿಸಲಾಗಿದೆ. ವಸತಿ ನಿರ್ಮಾಣ
ಜಿಲ್ಲೆಯನ್ನು ವಸತಿ ರಹಿತರಿಲ್ಲದ ನಾಡಾಗಿಸುವ ನಿಟ್ಟಿನಲ್ಲಿ ಲೈಫ್, ಪಿ.ಎಂ.ಎ.ವೈ. ವಸತಿ ನಿರ್ಮಾಣ ಯೋಜನೆಗಾಗಿ 8 ಕೋಟಿ ರೂ. ಮೀಸಲಿರಿಸಲಾಗಿದೆ. ಜಿಲ್ಲಾ ಪಂಚಾಯತ್ ರಸ್ತೆಗಳನ್ನು ಮೆಕ್‌ಡಾಂ ಡಾಮರೀಕರಣ ನಡೆಸುವ ಮಾದರಿ ಯೋಜನೆಗಾಗಿ 9.85 ಕೋಟಿ ರೂ., ಗ್ರಾಮೀಣ ರಸ್ತೆಗಳ ಪುನಶ್ಚೇತನಕ್ಕೆ 14 ಕೋಟಿ ರೂ., ಜಿಲ್ಲಾ ಪಂಚಾಯತ್ ರಸ್ತೆ ಅಭಿವೃದ್ಧಿಗೆ 12 ಕೋಟಿ ರೂ. ಮೀಸಲಿರಿಸಲಾಗಿದೆ. ಉತ್ಪಾದನೆ ವಲಯಕ್ಕೆ 50 ಕೋಟಿ.ರೂ.
ಉತ್ಪಾದನೆ ವಲಯದಲ್ಲಿ ಅನೇಕ ಯೋಜನೆಗಳಿದ್ದು, 50 ಕೋಟಿ ರೂ. ವೆಚ್ಚದಲ್ಲಿ ಚಟ್ಟಂಚಾಲ್ ಗ್ಯಾಸ್ ಆಧಾರಿತ ಪವರ್ ಪ್ಲಾಂಟ್ ಸ್ಥಾಪನೆ, ಗೈಲ್‌ಲೈನ್ ಸ್ಥಾಪನೆ ಕುರಿತು ಉಲ್ಲೇಖೀಸಲಾಗಿದೆ. ಹಿಂದಿನ ಮುಂಗಡಪತ್ರದಲ್ಲಿ ತಿಳಿಸಲಾದ ಪೆರಿಯ ಕಿರು ವಿಮಾನ ನಿಲ್ದಾಣದ ಕುರಿತು ಚರ್ಚಿಸಲಾಗಿದೆ. ಮಹಿಳಾ ಸ್ನೇಹಿ ಯೋಜನೆ
ಮಹಿಳೆಯರ ಸಬಲೀಕರಣ ಸಂಬಂಧ ನಗರ ಪ್ರದೇಶಗಳಲ್ಲಿ ಶೌಚಾಲಯ ಸಹಿತ ಫೀಲಾಂಜ್ ವಿಶ್ರಾಂತಿ ಕೊಠಡಿಗಳ ನಿರ್ಮಾಣ ಮಾಡಲಾಗುವುದು. ಮಹಿಳಾ ಸಹಕಾರಿ ಸಂಘಗಳಿಗೆ ಸಹಾಯ ಒದಗಿಸುವ ನಿಟ್ಟಿನಲ್ಲಿ 85 ಲಕ್ಷ ರೂ. ಮೀಸಲಿರಿಸಲಾಗಿದೆ. ವಿದ್ಯಾರ್ಥಿನಿಯರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಮಹಿಳಾ ಸ್ನೇಹಿ ಕೇಂದ್ರಗಳ ಸ್ಥಾಪನೆ ಮುಂದುವರಿಸಲಾಗುವುದು. ಅಲ್ಪಸಂಖ್ಯಾಕ ವಿಭಾಗ ಟ್ರಾನ್ಸ್ ಜೆಂಡರ್ಸ್ ಅವರ ಅಭಿವೃದ್ಧಿಗಾಗಿ ಯೋಜನೆಗಳಿಗೆ ಮೊಬಲಗು ಮೀಸಲಿರಿಸಿದೆ.