Advertisement

ಸಂತ್ ಫ್ರಾನ್ಸಿಸ್ ಜೇವಿಯರ್ ಫೆಸ್ತನ ವಿಶೇಷ ಪ್ರಾರ್ಥನಾ ಸಭೆ: ಸಿಎಂ ಸಾವಂತ್ ಭಾಗಿ

05:52 PM Dec 03, 2021 | Team Udayavani |

ಪಣಜಿ: ನಾವು ಪವಿತ್ರ ಸ್ಥಳ ಮಾತ್ರವಲ್ಲದೆಯೇ ನಮ್ಮ ಕೇಂದ್ರ ಸರ್ಕಾರದಿಂದ, ಭಾರತದ ಪುರಾತತ್ವ ಸಮೀಕ್ಷೆ ಗುರುತಿಸಲ್ಪಟ್ಟ ವಿಶ್ವಪ್ರಸಿದ್ಧ ಪರಂಪರೆಯ ಪ್ರದೇಶದಲ್ಲಿ ನಾವು ಕೂಡಿದ್ದೇವೆ. ಗೋವಾದಲ್ಲಿ ಪರಂಪರೆಯ ಪವಿತ್ರತೆಯನ್ನು ಉಳಿಸಿಕೊಳ್ಳಬೇಕು. ಪರಪರೆಯ ಸಂರಕ್ಷಣೆಗೆ ಕಾನೂನು ಬಾಹಿರ ಮತ್ತು ಹಾನಿಕಾರಕವಾದ ಯಾವುದೇ ಕ್ರಮಗಳು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಅಧಿಕಾರದಲ್ಲಿರುವ ಎಲ್ಲರಲ್ಲೂ ಮನವಿ ಮಾಡುತ್ತೇನೆ ಎಂದು ಗೋವಾ ದಿಯು ದಮನ್ ಆರ್ಚಬಿಷಪ್ ಪಿಲಿಪ್ ನೇರಿ ಫೆರಾವೊ ನುಡಿದರು.

Advertisement

ಡಿಸೆಂಬರ್ 3 ರಂದು ಶುಕ್ರವಾರ ಬೆಳಿಗ್ಗೆ ಓಲ್ಡ್ ಗೋವಾ ಚರ್ಚ್ ಪರಿಸರದಲ್ಲಿ ಆಯೋಜಿಸಿದ್ದ ಸಂತ್ ಫ್ರಾನ್ಸಿಸ್ ಜೇವಿಯರ್ ಫೆಸ್ತನ ವಿಶೇಷ ಪ್ರಾರ್ಥನಾ ಸಭೆಯಲ್ಲಿ ಅವರು ಮಾತನಾಡಿದರು.

ಓಲ್ಡಗೋವಾ ಚರ್ಚನಲ್ಲಿ ಪ್ರತಿವರ್ಷದಂತೆ ಡಿಸೆಂಬರ್ 3 ರಂದು ಶುಕ್ರವಾರ ಸಂತ್ ಫ್ರಾನ್ಸಿಸ್ ಜೇವಿಯರ್ ಫೆಸ್ತ ಆಚರಿಸಲಾಯಿತು. ದೇಶದ ವಿವಿಧ ಚರ್ಚಗಳ ಫಾದ್ರಿಗಳು ಉಪಸ್ಥಿತಿಯಲ್ಲಿ ವಿವಿಧ ಭಾಷೆಗಳಲ್ಲಿ ಪ್ರಾರ್ಥನಾ ಸಭೆ ನಡೆಸಲಾಯಿತು. ಶುಕ್ರವಾರ ಬೆಳಿಗ್ಗೆ ಓಲ್ಡ್ ಗೋವಾ ಚರ್ಚ್ ಪರಿಸರದಲ್ಲಿ ನಡೆದ ಪ್ರಾರ್ಥನಾ ಸಭೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ನೊವೆನಾ ವಿಶೇಷ ಪ್ರಾರ್ಥನಾ ಸಭೆಯು ನೊವೆಂಬರ್ 24 ರಿಂದ ಆರಂಭಗೊಂಡಿದೆ. ಒಂಭತ್ತು ದಿನಗಳ ಕಾಲ ನಡೆಯುವ ಈ ಪ್ರಾರ್ಥನಾ ಸಭೆ ಶುಕ್ರವಾರ ಮುಯಕ್ತಾಯಗೊಂಡಿದೆ. ಫೆಸ್ತ ಆಚರಣೆಯ ಹಿನ್ನೆಲೆಯಲ್ಲಿ ಚರ್ಚ್ ಪರಿಸರದಲ್ಲಿ ಬೃಹತ್ ಜಾತ್ರೆ ನೆರೆದಿದ್ದು ಪ್ರತಿ ದಿನ ಗೋವಾ ರಾಜ್ಯದ ಮೂಲೆ ಮೂಲೆಯಿಂದ ವಿವಿಧ ರಾಜ್ಯಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

Advertisement

ಫೆಸ್ತ ಆಚರಣೆಯ ಹಿನ್ನೆಲೆ
1637 ರಲ್ಲಿ ಓಲ್ಡ್ ಗೋವಾ ಬಾಸಿಲಿಕಾ ಬೋಮ್  ಚರ್ಚ್ ನಲ್ಲಿ ಸಂತ ಫ್ರಾನ್ಸಿಸ್ ಜೇವಿಯರ್ ರವರ ಮೃತದೇಹವನ್ನು ಬೆಳ್ಳಿಯ ಶವಪೆಟ್ಟಿಗೆಯಲ್ಲಿ ಇರಿಸಲಾಗಿತ್ತು. ಸಂತ್ ಫ್ರಾನ್ಸಿಸ್ ಕ್ಯಾಥೊಲಿಕ್ ಮಿಶಿನರಿಯಾಗಿದ್ದು ಅವರು ಪ್ರಪಂಚದಾದ್ಯಂತ ಜನರಿಗೆ ಏಸುಕ್ರಿಸ್ತರ ಬಗ್ಗೆ ಬೋಧಿಸಿದ್ದರು. ಅವರು ಮರಣದ ನಂತರ 400 ವರ್ಷ ಕಳೆದರೂ ಕೂಡ ಅವರ ಮೃತದೇಹ ಇನ್ನೂ ಹಾಗೆಯೇ ಇಳಿದಿದೆ. ಅವರ ಮೃತದೇಹವನ್ನು ಪ್ರತಿ 10 ವರ್ಷಗಳಿಗೊಮ್ಮೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಪ್ರತಿ ವರ್ಷ ನೊವೆಂಬರ್ 24 ರಿಂದ ಡಿಸೆಂಬರ್ 3 ರವರೆಗೆ ನೊವೆನಾ ಎಂಬ ಒಂಭತ್ತು ದಿನಗಳ ಪ್ರಾರ್ಥನಾ ಸಭೆಯನ್ನು ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಅವರ ನಿಧನದ ಗೌರವಾರ್ಥ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next