Advertisement
ಪಟ್ಟಣದ ಅದಿ ದೇವತೆ ಮಸಣಿಕಮ್ಮ ದೇವಾಲಯದಲ್ಲಿ ಸ್ಥಳೀಯರನ್ನು ಒಳಗೊಂಡಂತೆ ಮೈಸೂರು, ಮಂಡ್ಯ, ಹಾಸನ, ತುಮಕೂರು ಸೇರಿದಂತೆ ರಾಜ್ಯದ ನಾನಾ ಭಾಗದಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಇದು ಆಷಾಢ ಮಾಸದ ಕಡೆಯ ಶುಕ್ರವಾರವಾದ ಕಾರಣ ಕಳೆದ ಮೂರು ವಾರಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಬೆಳಗಿನ ಜಾವ 4 ಗಂಟೆಯಿಂದಲೇ ಪೂಜಾ ಕಾರ‌್ಯಕ್ರಮಗಳ ಪ್ರಾರಂಭ ವಾದವು. ರುದ್ರಾಭಿಷೇಕಾ, ಪಂಚಾಮೃತ ಅಭಿಷೇಕ ಸೇರಿದಂತೆ ನಾನಾ ಧಾರ್ಮಿಕ ಪೂಜೆಗಳನ್ನು ಕೈಗೊಳ್ಳಲಾಯಿತು. 5.30ರಿಂದ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾ ಯಯಿತು. ಆ ನಂತರ 9 ಕ್ಕೆ ಮಹಾಮಂಗಳಾರತಿ ನಡೆಯಿತು.
ದೇವರಿಗೆ ವಿಶೇಷ ಆಲಂಕಾರ: ಕೊನೆಯ ಆಷಾಢ ಶುಕ್ರವಾರ ಶ್ರೀಮಸಣಿಕಮ್ಮ ಉತ್ಸವ ಮೂರ್ತಿಯನ್ನು ಹೂವು ಮತ್ತು ಹಾರಗಳಿಂದ ವಿಶೇಷ ಅಲಂಕಾರ ಮಾಡಿ ‘ ದೇವಾಲಯದ ಸುತ್ತ ಪ್ರದಕ್ಷಿಣೆ ಮಾಡಲಾಗಿ ಆಕರ್ಷಣೆಯ ಅಲಂಕಾರ ಭಕ್ತರ ಮನಸೊರೆ ಗೊಂಡಿತು.
ಪ್ರಸಾದ ವಿನಿಯೋಗ: ಶ್ರೀ ಮಸಣಿಕಮ್ಮ ದೇವಾಲಯದಲ್ಲಿ ಮಾಜಿ ಶಾಸಕ ಕೆ.ವೆಂಕಟೇಶ್ ರವರು ಕುಟುಂಬ ಸಮೇತ ಆಗಮಿಸಿ ದೇವರಿಗೆ ವಿಶೇಷ ಪೂಜೆ ನೇರವೇರಿಸುವುದರೊಂದಿಗೆ ದೇವಾಲಯಕ್ಕೆ ಆಗಮಿಸಿದ್ದ ಸಹಸ್ರಾರು ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಸಾವಿಗೆ ಬಾತ್, ಮೊಸರನ್ನ, ಪಲಾವ್, ಪೊಂಗಲ್, ರೈಸ್ ಬಾತ್, ಪುಳಿಯೊಗರೆ, ಕೇಸರಿಬಾತ್, ನೀರಿನ ಬಾಟಲ್ ವಿತರಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ವೆಂಕಟೇಶ್ ಮಾತನಾಡಿ ತಾಲ್ಲೂಕಿನ ಸುಭಿಕ್ಷೆ ಹಾಗೂ ಜನತೆಯ ಒಳಿತಿಗಾಗಿ ನಾಡಿನ ಶಕ್ತಿ ದೇವತೆಯಾದ ಶ್ರೀಮಸಣಿಕಮ್ಮ ದೇವರಿಗೆ ವಿಶೇಷ ಪೂಜೆ ನೆರವೇರಿಸಿ ಜನತೆಯ ಕಲ್ಯಾಣಕ್ಕಾಗಿ ಪ್ರಾರ್ಥನೆ ಮಾಡಿದ್ದೇವೆ ಎಂದರು.
Related Articles
Advertisement