Advertisement

ಕ್ಷಿಪ್ರ ವಿಲೇವಾರಿಗೆ ವಿಶೇಷ ಕೋರ್ಟ್‌

02:19 AM Feb 26, 2020 | mahesh |

ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲಾಗುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ತ್ವರಿತ ವಿಲೇವಾರಿಗೆ ವಿಶೇಷ ಪೋಕ್ಸೋ ನ್ಯಾಯಾಲಯ ಶೀಘ್ರವೇ ಕಾರ್ಯಾಚರಿಸಲಿವೆ. ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ವಿಚಾರವನ್ನು ಸುಪ್ರೀಂ ಕೋರ್ಟ್‌ ಗಂಭೀರವಾಗಿ ಪರಿ ಗಣಿಸಿದೆ. ಜಿಲ್ಲಾ ಮಟ್ಟದಲ್ಲಿ ವಿಶೇಷ ಪೋಕ್ಸೋ ನ್ಯಾಯಾಲಯವನ್ನು ನಿರ್ಮಿಸುವಂತೆ ಆದೇಶಿಸಿದ್ದು, ಇದರನ್ವಯ ರಾಜ್ಯದ 30 ಜಿಲ್ಲೆಗಳಲ್ಲಿ ವಿಶೇಷ ಕೋರ್ಟ್‌ ಕಾರ್ಯಾ ಚರಿಸಲಿದೆ.

Advertisement

ವಿಶೇಷ ಕೋರ್ಟ್‌ ಯಾಕೆ?
ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಒಟ್ಟಾರೆ ಒಂದೂವರೆ ಲಕ್ಷ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಆದರೆ ಇರುವ ಒಟ್ಟು ಪೋಕ್ಸೋ ನ್ಯಾಯಾಲಯಗಳ ಸಂಖ್ಯೆ ಗಣನೀಯವಾಗಿ ಕಡಿಮೆ. ಈ ನಿಟ್ಟಿನಲ್ಲಿ ಜಿಲ್ಲೆಗೆ ಒಂದರಂತೆ ವಿಶೇಷ ಪೋಕ್ಸೋ ಕೋರ್ಟ್‌ ನಿರ್ಮಿಸುವಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ.

ಸಂತ್ರಸ್ತೆಯರಿಗಾಗಿ ಕೊಠಡಿ
ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ಪೋಕ್ಸೋ ಕೋರ್ಟ್‌ ನಿರ್ಮಿಸಲಾಗಿದೆ. ಇಲ್ಲಿ ಕೋರ್ಟ್‌ ಹಾಲ್‌ ಮತ್ತು ದೌರ್ಜನ್ಯಕ್ಕೆ ಒಳಗಾದ ಮಗು ಯಾವುದೇ ಅಂಜಿಕೆಯಿಲ್ಲದೆ ಸಾಕ್ಷ್ಯ ಹೇಳಲು ಅನುಕೂಲವಾಗುವಂತೆ ಸಂತ್ರಸ್ತೆ ಸಾಕ್ಷ್ಯ ಕೊಠಡಿಯನ್ನೂ ನಿರ್ಮಿಸಲಾಗಿದೆ.

400 ಪ್ರಕರಣಗಳು
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಒಟ್ಟು 400 ಪ್ರಕರಣಗಳು ವಿಚಾರಣೆಯ ವಿವಿಧ ಹಂತದಲ್ಲಿವೆ. ಮುಂದಿನ ದಿನಗಳಲ್ಲಿ ವಿಶೇಷ ಪೋಕ್ಸೋ ನ್ಯಾಯಾಲಯದಲ್ಲಿ ಉಭಯ ಜಿಲ್ಲೆಗಳ ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ.

ನ್ಯಾಯಾಧೀಶರ ನೇಮಕ
ಈ ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ಅಗತ್ಯವಾಗಿರುವ ನ್ಯಾಯಾ
ಧೀಶರ ನೇಮಕ, ಸಿಬಂದಿ ಮತ್ತು ವಿಶೇಷ ಪೋಕ್ಸೋ ಅಭಿಯೋಜಕರ ನೇಮಕಾತಿ ಜವಾಬ್ದಾರಿ ಉಚ್ಚ ನ್ಯಾಯಾಲಯದ ಮೇಲಿದೆ. ಪ್ರಸ್ತುತ ಉಡುಪಿ, ದ.ಕ. ಜಿಲ್ಲೆಗೆ ವಿಶೇಷ ಪೋಕ್ಸೋ ಕೋರ್ಟ್‌ಗೆ ನ್ಯಾಯಾಧೀಶರ ನೇಮಕವಾಗಬೇಕಾಗಿದೆ.

Advertisement

ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳ ತ್ವರಿತ ವಿಲೇವಾರಿಗೆ ವಿಶೇಷ ಪೋಕ್ಸೋ ನ್ಯಾಯಾಲಯ ನಿರ್ಮಿಸಲಾಗಿದೆ.
-ರಾಘವೇಂದ್ರ ವೈ.ಟಿ.,  ಪೋಕ್ಸೋ ಸರಕಾರಿ ವಿಶೇಷ ಅಭಿಯೋಜಕ. ಉಡುಪಿ.

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next