Advertisement

ಭಾರತಕ್ಕಿದೆ ವಿಶ್ವದಲ್ಲಿ ವಿಶೇಷ ಸ್ಥಾನ

03:46 PM Feb 25, 2018 | |

ಇಂಡಿ: ವಿಶ್ವದಲ್ಲಿಯೇ ಭಾರತ ತನ್ನದೆಯಾದ ವೈಚಾರಿಕ ನಿಲುವು ಹೊಂದಿದೆ. ಭಾರತ ದೇಶದಲ್ಲಿ ವಿಶೇಷ ಆಚಾರ ವಿಚಾರಗಳು, ಜಾತ್ರಾ ಮಹೋತ್ಸವ ನಡೆಯುತ್ತಿವೆ. ಇದರಿಂದ ನಮ್ಮ ದೇಶ ವಿಶ್ವದಲ್ಲಿಯೇ ಉನ್ನತ ಹೆಸರು ಪಡೆದುಕೊಂಡಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು.

Advertisement

ಪಟ್ಟಣದ ಜಾಂಬವ ನಗರದಲ್ಲಿ ದುರ್ಗಾ ಪರಮೇಶ್ವರಿ ಮೂರ್ತಿ ಪ್ರತಿಷ್ಠಾಪನಾ ಉತ್ಸವ, ಹೋಮ ಹವನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದುರ್ಗಾ-ಪರಮೇಶ್ವರಿ ದೇವಿ ಜಾತ್ರಾ ಮಹೋತ್ಸವ ಪ್ರತಿ ವರ್ಷ ಮಾಡಲು ಒಂದು ಇತಿಹಾಸವಿದೆ. ಗಂಡಿನಷ್ಟೇ ಸರಿ ಸಮಾನಳು ಹೆಣ್ಣು ಎಂಬುದು ದೇವಲೋಕದಲ್ಲಿಯೂ ತಿಳಿದಿತ್ತು ಎಂದರು.

ಎಲ್ಲರೂ ಒಂದೆಡೆ ಸೇರಿ ಭಕ್ತಿ ಭವದಿಂದ ಜಾತ್ರಾ ಮಹೋತ್ಸವ ಆಚರಿಸಿ ನೆಮ್ಮದಿಯ ಬಾಳು ಬದುಕಿ ತೋರಿಸುತ್ತೇವೆ. ಇಂತಹ ಆಚರಣೆ ನಮ್ಮ ದೇಶ ಬಿಟ್ಟರೆ ಬೇರೆಲ್ಲಿಯೂ ನೋಡಲು ಸಿಗುವುದಿಲ್ಲ ಎಂದರು. ಕಾರ್ಯಕ್ರಮ ಮುನ್ನ ಪರಮೇಶ್ವರಿಯ ಮೆರವಣಿಗೆ ಸಾರೋಟದ ರಥದಲ್ಲಿ ವಿವಿಧ ಹೂಮಾಲೆಗಳಿಂದ ತಳಿರು ತೋರಣಗಳಿಂದ ರಥವನ್ನು ಸಿಂಗರಿಸಿ ಮೆರವಣಿಗೆ ಮಾಡಲಾಯಿತು.

ಝಳಕಿಯ ಮರಗಮ್ಮದೇವಿ, ಆಳವಿಯ ದುರ್ಗಾದೇವಿ ಪಲ್ಲಕ್ಕಿ, ಬರಗುಡಿಯ ದುರ್ಗಾದೇವಿ ಪಲ್ಲಕ್ಕಿ, ಹಡಲಸಂಗದ ಮರಗಮ್ಮ ಪಲ್ಲಕ್ಕಿ ಉತ್ಸಗಳು ಮತ್ತು ಸುಮಾರು 151 ಸುಮಂಗಲೆಯರು ಹಳದಿ ಸೀರೆ, ಕುಪ್ಪಸ ತೊಟ್ಟು ಕುಂಭ ಹೊತ್ತು ಬಿರು ಬಿಸಿಲಿನಲ್ಲಿ ರಸ್ತೆಯುದ್ದಕ್ಕೂ ಸಾಗಿದರು. ಡೊಳ್ಳು ಕುಣಿತ, ಚಿಟ್ಟಲಗೆ, ಹಲಗೆ, ಚಿಕ್ಕರೂಗಿಯ ಡೊಳ್ಳಿನ ವಾದ್ಯ, ಮಣೂರ, ಅಂಜುಟಗಿ, ಮಂದ್ರೂಪ, ಸಾಲೋಟಗಿ ಗ್ರಾಮಗಳ ಹಲಗೆ ವಾದ್ಯಗಳೊಂದಿಗೆ ಬ್ಯಾಂಜೋ ನವಿಲು ಕುಣಿತ ಗಮನ ಸೆಳೆದವು.

ದುರ್ಗಾ ಪರಮೇಶ್ವರಿಗೆ ಜಯವಾಗಲಿ ಮರಗಮ್ಮ ಮಾತಾಕೀ ಜೈ ಎಂದು ಸಾವಿರಾರು ಭಕ್ತರು ಉತ್ತತ್ತಿ, ಬಾದಾಮಿ, ಖಾರಿಕ, ಹೂಗಳು, ಭಂಡಾರವನ್ನು ದುರ್ಗಾ ಪರಮೇಶ್ವರಿ ಮೇಲೆ ಎರಚುತ್ತಾ ಭಕ್ತಿಯ ಭಾವ ಪರವಶರಾದರು. ನಂತರ ಶಿಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಸಿದ್ದಾರೂಢ ಮಠದ ಸ್ವರೂಪಾನಂದ ಶ್ರೀಗಳ ಅಮೃತ ಹಸ್ತದಿಂದ ನೆರವೇರಿತು. ದತ್ತಾ ಬಡೇನವರ, ಸಿದ್ದು ಕಟ್ಟಿಮನಿ, ಮಹಾದೇವ ಕಟ್ಟಿಮನಿ, ಶಾಂತು ಭಾವಿಕಟ್ಟಿ, ಭೀಮಾಶಂಕರ ವಾಲೀಕಾರ, ಪರಶುರಾಮ ಭಾವಿಕಟ್ಟಿ, ಎಸ್‌.ಕೆ. ಹಂಚನಾಳ,
ರಾಜು ಪಡಗಾನೂರ, ಅರ್ಜುನ ಪಾರ್ಸಿ , ಬಿ.ಎನ್‌. ಮಾರ್ಕಪ್ಪನಹಳ್ಳಿ, ಸಿದ್ದಪ್ಪ ಪೂಜಾರಿ, ಸಚಿನ ಕಟ್ಟಿಮನಿ, ಮಲ್ಲಿಕಾರ್ಜುನ ಕಾಂಬಳೆ ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next