Advertisement
ಪಡುಪಣಂಬೂರು ಗ್ರಾಮ ಪಂಚಾಯತ್‌ನ ವ್ಯಾಪ್ತಿಯ ಬೆಳ್ಳಾಯರು ಕೆರೆಕಾಡಿನ ಪೂಪಾಡಿಕಟ್ಟೆ ರಸ್ತೆಗೆ ನ.18ರಂದು ವಿವಿಧ ಯೋಜನೆಗಳಿಂದ 85 ಲಕ್ಷ ರೂ. ವೆಚ್ಚದಲ್ಲಿ ನಡೆಯಲಿರುವ ಕಾಂಕ್ರೀಟಿಕರಣಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಸರಕಾರದ ಎಲ್ಲ ಅಭಿವೃದ್ಧಿ ಯೋಜನೆಗಳು ನಿಯಮಿತ ಕಾಲ ಮಿತಿಯಲ್ಲಿ ನಡೆಯಬೇಕು, ಕಳೆದ ನಾಲ್ಕು ವರ್ಷದಿಂದ ಅತಿ ಹೆಚ್ಚು ಅನುದಾನಗಳು ಕ್ಷೇತ್ರದಲ್ಲಿ ವಿನಿಯೋಗಿಸಲಾಗಿದೆ. ಹಿಂದಿನ ಯಾವುದೇ ಸರಕಾರವೂ ಇಷ್ಟೊಂದು ಗರಿಷ್ಠ ಅನುದಾನವನ್ನು ನೀಡಿಲ್ಲ, ಜನನಿಬಿಡ ರಸ್ತೆಗಳು ಡಾಮರೀಕರಣಕ್ಕಿಂತ ಹೆಚ್ಚಾಗಿ ಕಾಂಕ್ರೀಟಿಕರಣಗೊಂಡರೆ ಮಾತ್ರ ಅದರ ಭವಿಷ್ಯ ಹೆಚ್ಚು ಎಂದರು. ಗ್ರಾ.ಪಂ. ಮಾಜಿ ಸದಸ್ಯೆ ಯಶೋದಾ ಪೂಜಾರಿ ತೆಂಗಿನಕಾಯಿ ಒಡೆಯುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್. ವಸಂತ ಬೆರ್ನಾಡ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಮೂಲ್ಕಿ ನ.ಪಂ. ಸದಸ್ಯರಾದ ಬಿ.ಎಂ. ಆಸಿಫ್, ಪುತ್ತು ಬಾವ, ಅಶೋಕ್ ಪೂಜಾರ್, ಬಶೀರ್ ಕುಳಾಯಿ, ಹಳೆಯಂಗಡಿ ಗ್ರಾ.ಪಂ. ಸದಸ್ಯರಾದ ಅಬ್ದುಲ್ ಖಾದರ್, ಅಬ್ದುಲ್ ಅಝೀಜ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಕೋಶಾಧಿಕಾರಿ ನಂದಾ ಪಾಯಸ್, ಮೂಲ್ಕಿ ಬ್ಲಾಕ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಸುನೀತಾ ರೋಡ್ರಿಗಸ್, ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ ಮೂಲ್ಕಿ, ಪಡುಪಣಂಬೂರು ಗ್ರಾ.ಪಂ. ಸದಸ್ಯ ಉಮೇಶ್ ಪೂಜಾರಿ, ಮಾಜಿ ಸದಸ್ಯ ನಾಗೇಶ್ ಬಂಜನ್, ಮೆಸ್ಕಾಂ ಸಲಹೆಗಾರರಾದ ಧರ್ಮಾನಂದ ಶೆಟ್ಟಿಗಾರ್ ತೋಕೂರು, ಲತಾ ಕಲ್ಲಾಪು, ವಾಹಿದ್ ತೋಕೂರು, ಮಾಜಿ ತಾ.ಪಂ. ಸದಸ್ಯ ರಾಜು ಕುಂದರ್, ಪ್ರಮುಖರಾದ ದಿನೇಶ್ ಸುವರ್ಣ, ಲೋಕೇಶ್ ಕೋಟ್ಯಾನ್, ಗ್ರಾಮಸ್ಥರಾದ ದಿವಾಕರ ಶೆಟ್ಟಿಗಾರ್, ರವೀಂದ್ರನ್, ಅಶೋಕ್ ದೇವಾಡಿಗ, ಕೆ.ಆರ್.ಐ.ಡಿ.ಎಲ್.ನ ಎಂಜಿನಿಯರ್ ಪ್ರಜ್ವಲ್ ಮತ್ತಿತರರು ಉಪಸ್ಥಿತರಿದ್ದರು. ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸವಿತಾ ಶರತ್ ಬೆಳ್ಳಾಯರು ಸ್ವಾಗತಿಸಿದರು, ಬೆಳ್ಳಾಯರು ಬೂತ್ ಅಧ್ಯಕ್ಷ ಸತೀಶ್ ಮಡಿವಾಳ ವಂದಿಸಿದರು.
Related Articles
ಮುಖ್ಯಮಂತ್ರಿಗಳ ಗ್ರಾಮಾಭಿವೃದ್ಧಿಯ ವಿಶೇಷ ಯೋಜನೆಯಿಂದ 50 ಲಕ್ಷ ರೂ., ಪರಿಶಿಷ್ಟ ಪಂಗಡದ ವಿವೇಚನಾ ನಿ ಧಿಯ ಮೀಸಲು ಅನುದಾನದಿಂದ 25 ಲಕ್ಷ ರೂ., ಬೃಹತ್ ನೀರಾವರಿ ಸರಬರಾಜು ಯೋಜನೆಯ ಅಭಿವೃದ್ಧಿಯಿಂದ 10 ಲಕ್ಷ ರೂ.ಗಳ ಒಟ್ಟು 85 ಲಕ್ಷ ರೂ.ಗಳ ವೆಚ್ಚದಲ್ಲಿ ಎರಡು ತಿಂಗಳ ಕಾಲಾವ ಧಿಯಲ್ಲಿ ರಸ್ತೆಯು ಸಂಪೂರ್ಣ ಕಾಂಕ್ರೀಟಿಕರಣಗೊಳ್ಳಲಿದೆ.
– ಕೆ.ಅಭಯಚಂದ್ರ ಜೈನ್,
ಶಾಸಕರು,
Advertisement