Advertisement

ಅಕ್ಷಯ ತೃತೀಯ ಹಬ್ಬಕ್ಕೆ ವಿಶೇಷ ಆಕರ್ಷಕ ಕೊಡುಗೆಗಳು

03:26 PM May 04, 2019 | Vishnu Das |

ಮುಂಬಯಿ: ಹಿಂದುಗಳ ಪವಿತ್ರ ದಿನಗಳಲ್ಲಿ ಅಕ್ಷಯ ತೃತೀಯವೂ ಒಂದಾಗಿದೆ. ಈ ದಿವಸ ಸಾಮಾನ್ಯವಾಗಿ ಎÇÉಾ ಶುಭ ಕೆಲಸವನ್ನು ಮಾಡಿದರೆ, ಅಕ್ಷಯವಾಗಿ ಪರಿಣಮಿಸುವುದು. ಈ ದಿವಸ ಜೀವನದ ಹೊಸ ಹೊಸ ಕೆಲಸ-ಕಾರ್ಯಗಳನ್ನು ಪ್ರಾರಂಭಿಸುವುದು ಶುಭಕರ. ವಿಶೇಷವೆಂದರೆ ಅಕ್ಷಯ ತೃತೀಯ ದಿವಸ ಚಿನ್ನ, ಬೆಳ್ಳಿ, ವಜ್ರ, ರತ್ನಾಭರಣ ಖರೀದಿಸಿದರೆ ಸಮೃದ್ದಿ ದೊರೆಯುತ್ತದೆಂದೂ ನಂಬಿಕೆ ಇದೆ. ಆದ್ದರಿಂದಲೇ ಅಕ್ಷಯ ತೃತೀಯ ಕುರಿತು ಇರುವ ಪವಿತ್ರ ಭಾವನೆ, ಉಳಿತಾಯದ ಮತ್ತು ಸಂಪತ್ತಿನ ಸದುಪಯೋಗ ಹಾಗೂ ಪೂರ್ಣ ಫಲ ದೊರೆಯಬೇಕೆಂಬ ಸದ್ಭಾವನೆಯಿಂದಲೇ ಚಿನ್ನ-ವಜ್ರಾಭರಣಗಳ ಉತ್ಪಾದನೆ ಮತ್ತು ವೈವಿಧ್ಯಮಯ ಶೈಲಿಗೆ ಹೆಸರಾಗಿರುವ ನಗರದ ಪ್ರಸಿದ್ಧ “ಟಿಡಿಎಫ್‌- ದಿ ಡೈಮಂಡ್‌ ಫ್ಯಾಕ್ಟರಿ’ ಹಬ್ಬಹರಿದಿನಗಳ ಶುಭ ಸಂದರ್ಭದಲ್ಲಿ ಮಹಿಳೆಯರಿಗಾಗಿ ಹೊಸತನದ ಆಭರಣಗಳನ್ನು ಸಂಸ್ಥೆಯ ಬಾಂದ್ರಾ, ಅಂಧೇರಿ, ವಾಶಿ ಹಾಗೂ ಮಂಗಳೂರಿನ ಪಳ್ನೀರ್‌ ರೋಡ್‌ನ‌ಲ್ಲಿ ಸಂಸ್ಥೆಯ ಮಳಿಗೆಗಳಲ್ಲಿ ಪ್ರದರ್ಶನ ಮತ್ತು ಮಾರಾಟದ ಮೂಲಕ ಎಲ್ಲರ ಮನೆಮಾತಾಗಿದೆ.

Advertisement

ವಿಶೇಷ ಎಂಬಂತೆ ಮೇ 1ರಿಂದ ಮೇ 8ರವರೆಗೆ ಚಿನ್ನ-ವಜ್ರಾಭರಣಗಳ ಖರೀದಿಯಲ್ಲಿ ಆಕರ್ಷಕ ಉಡುಗೊರೆಯನ್ನು ಸಂಸ್ಥೆಯು ನೀಡುತ್ತಿದೆ. 99,000 ರೂ.ಗಳಿಗಿಂತ ಅಧಿಕ ವಜ್ರಾಭರಣಗಳ ಖರೀದಿಗೆ 1 ಗ್ರಾಂ ಚಿನ್ನದ ನಾಣ್ಯ ಮತ್ತು 1,49,000 ರೂ. ಗಳಿಗಿಂತ ಅಧಿಕ ಚಿನ್ನಾಭರಣಗಳ ಖರೀದಿಗೆ 1 ಗ್ರಾಂ ಚಿನ್ನದ ನಾಟ್ಯವನ್ನು ಉಚಿತವಾಗಿ ನೀಡಲಾಗುತ್ತಿದೆ. ರೋಜಾನಾ ಕಲೆಕ್ಷನ್‌ ವಿಭಾಗದಲ್ಲಿ 9 ಸಾವಿರ ರೂ. ಗಳಿಂದ ಗ್ರಾಹಕರಿಗೆ ಚಿನ್ನಾಭರಣಗಳು ಪ್ರಾರಂಭಗೊಳ್ಳಲಿದೆ. ವಿಶೇಷವಾಗಿ ಚಿನ್ನಾಭರಣ ಮತ್ತು ವಜ್ರಾಭರಣಗಳಲ್ಲಿ ಶೇ. 100ರಷ್ಟು ಮೇಕಿಂಗ್‌ ಚಾರ್ಜ್‌ ಉಚಿತವಾಗಿರಲಿದೆ.

ಈಗಾಗಲೇ ಹಬ್ಬ ಹರಿದಿನ, ಸಭೆ-ಸಮಾರಂಭಗಳು, ಮದುವೆ ಇನ್ನಿತರ ಕೌಟುಂಬಿಕ ಸಮಾರಂಭಗಳು ಪ್ರಾರಂಭಗೊಂಡಿದ್ದು, ಪ್ರತಿಯೋರ್ವ ಮಹಿಳೆಯರು ತಮಗೊಪ್ಪುವ ಅತೀ ಸುಂದರವಾದ ಚಿನ್ನಾಭರಣಗಳನ್ನು ಕೊಂಡುಕೊಳ್ಳುವಲ್ಲಿ ಸುವರ್ಣಾವಕಾಶ ಸಹಕಾರಿಯಾಗಲಿದೆ. ಚಿನ್ನ-ವಜ್ರಾಭರಣಗಳ ಉತ್ಪಾದನೆ ಮತ್ತು ವೈವಿಧ್ಯಮಯ ಶೈಲಿಗೆ ಹೆಸರಾಗಿರುವ ನಗರದ ಪ್ರಸಿದ್ಧ “ಟಿಡಿಎಫ್‌- ದಿ ಡೈಮಂಡ್‌ ಫ್ಯಾಕ್ಟರಿ’ಯ ಚಿಲ್ಲರೆ ಮಳಿಗೆ ಟರ್ನರ್‌ರೋಡ್‌ ಬಾಂದ್ರಾ (9820558484), ಲೋಖಂಡ್‌ವಾಲ ಅಂಧೇರಿ (824050086), ಸತ್ರಾಪ್ಲಾಜಾ ವಾಶಿ (9920764212), ಪಳ್ನೀರ್‌ ಮಂಗಳೂರು (9972548543) ಇಲ್ಲಿಗೆ ಭೇಟಿ ನೀಡಬಹುದು.
ದೈನಂದಿನ ತೊಡುಗೆಯ ಆಭರಣಗಳ ಜತೆಗೆ ಮದುಮಗಳಿಗೆ ಒಪ್ಪುವ ಡಿಸೈನ್‌ ಚಿನ್ನ-ವಜ್ರಾಭರಣಗಳು ಇಲ್ಲಿ ಲಭ್ಯವಿದ್ದು, ಗ್ರಾಹಕರ ನಂಬಿಕೆಗೆ ಪಾತ್ರವಾಗಿರುವ ಟಿಡಿಎಫ್‌ ಮಳಿಗೆಗೆಳಲ್ಲಿ ಉತ್ತಮ ಗುಣಮಟ್ಟ ಹೊಂದಿರುವ ಸೌತ್‌ ಇಂಡಿಯನ್‌ ಅದರಲ್ಲೂ ಮುಖ್ಯವಾಗಿ ಕರಾವಳಿ ಮಂಗಳೂರು ಶೈಲಿಯ ಆಭರಣಗಳು ಗ್ರಾಹಕರನ್ನು ಆಕರ್ಷಿಸುತ್ತಿದೆ. ಟಿಡಿಎಫ್‌ನ ಬ್ರೈಡ್‌ ಪ್ರೈಡ್‌ ಕಲೆಕ್ಷನ್‌ ವಿಶೇಷವಾಗಿ ಮದುಮಗಳಿಗಾಗಿಯೇ ತಯಾರಿಸಲಾದ ಆಭರಣವಾಗಿದೆ.

ಜತೆಗೆ ಆಕರ್ಷಕ ಹಾಗೂ ವೈವಿಧ್ಯಮಯ ಮಂಗಲ ಸೂತ್ರ, ಪೆಂಡೆಂಟ್‌, ವಿ ರಿಂಗ್‌, ಬ್ರಾಸ್‌ಲೆಟ್‌, ಕಿವಿಯೋಲೆ, ನೆಕ್‌ಲೆಸ್‌, ಪಟ್ಟಿಗಳು, ಮುಂಡಲೆ, ಬಳೆಗಳು ಹೀಗೆ ವಿವಿಧ ಬಗೆಯ ಆಭರಣಗಳು ಜ್ಯೋತಿಶಾಸ್ತ್ರದ ಪ್ರಕಾರ ತಯಾರಿಸಲಾದ ವಜ್ರದ ಕಲ್ಲುಗಳು ಮೊದಲಾದವುಗಳು ಇಲ್ಲಿ ಲಭ್ಯವಿವೆೆ. ವಿಶೇಷ ಆಕರ್ಷಣೆಯಾಗಿ ಟೆಂಪಲ್‌ ಜುವೆಲ್ಲರಿ ಮತ್ತು ಅನ್‌ಕಟ್‌ ಜಡಾವು ಪೊಲ್ಕಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿದ್ದು, ಟಿಡಿಎಫ್‌ ಸಂಸ್ಥೆಯು ಅತ್ಯಾಕರ್ಷಕ ಟೆಂಪಲ್‌ ಜುವೆಲ್ಲರಿ ಸಂಗ್ರಹದಿಂದ ಪ್ರಸಿದ್ಧಿಯನ್ನು ಪಡೆದಿದೆ. ಈ ವಿಭಾಗದಲ್ಲಿ ಮಹಿಳೆಯರ ಮೈ ನವಿರೇಳಿಸುವ ಜುಮ್ಕಿ, ಸ್ಟೇಟ್‌ಮೆಂಟ್‌ ನೆಕ್ಲೆಸ್‌, ಬಳೆಗಳು, ವಿಶೇಷವಾಗಿ ನಾಕ್ಷಿ ವರ್ಕ್‌ನಿಂದ ಕಂಗೊಳಿಸುತ್ತಿದೆ.

ಅನ್‌ಕಟ್‌ ಜಡಾವು ಪೊಲ್ಕಿ ವಿಭಾಗದಲ್ಲಿ ಚಾಂದ್‌ಬಲೀಸ್‌, ರಾಣಿ ಹಾರಗಳು, ಕಢಾಗಳು, ಕೊಕ್‌ಟೈಲ್ಸ್‌ ರಿಂಗ್‌ಗಳು ಆಕರ್ಷಣೀಯವಾಗಿದೆ. ಇನ್ನೊಂದು ವಿಶೇಷತೆ ಎಂದರೆ ಗ್ರಾಹಕರು ತಮ್ಮ ಹಳೆಯ ಚಿನ್ನಾಭರಣಗಳನ್ನು ನೀಡಿ ಹೊಸ ಚಿನ್ನಾಭರಣಗಳನ್ನು ಖರೀದಿಸುವ ಅನುಕೂಲತೆಯನ್ನು ಮಾಡಿಕೊಡಲಾಗಿದ್ದು, ಹಳೆಯ ಚಿನ್ನಗಳಿಗೆ ಉತ್ತಮ ಮೌಲ್ಯವನ್ನು ನೀಡಲಾಗುವುದು. ತುಳು-ಕನ್ನಡಿಗರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಟಿಡಿಎಫ್‌ ಆಡಳಿತ ನಿರ್ದೇಶಕ ಹಾಗೂ ಸಂಸ್ಥೆಯ ಸಂಸ್ಥಾಪಕ ಮಂಗಳೂರಿನವರೇ ಆದ ಪ್ರಸನ್ನ ಶೆಟ್ಟಿ ಹಾಗೂ ಗುಜರಾತ್‌ ಮೂಲದ ಗೌತಮ್‌ ಜೈನ್‌ ಸಿಂಘಿÌ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next