Advertisement

ಮಕ್ಕಳ ಬಿಸಿಯೂಟಕ್ಕೆ ಉಪ್ಪಡ್ ಪಚ್ಚಿರ್

10:01 AM Aug 03, 2019 | Hari Prasad |

ಎಡಪದವು: ಕುಪ್ಪೆಪದವು ಕಲ್ಲಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌.ಡಿ.ಎಂ.ಸಿ. ಸದಸ್ಯರಿಂದ ಮಕ್ಕಳ ಬಿಸಿಯೂಟವನ್ನು ಇನ್ನಷ್ಟು ರುಚಿಕರವನ್ನಾಗಿಸಲು ಹಲಸಿನ ಸೊಳೆಗಳನ್ನು ಉಪ್ಪುನೀರಲ್ಲಿ ಹಾಕಿಡಲಾಗಿದೆ.

Advertisement

ಎಸ್‌.ಡಿ.ಎಂ.ಸಿ. ಸದಸ್ಯರು ಶಾಲಾ ಮುಖ್ಯ ಶಿಕ್ಷಕಿ ಮೇರಿ ವಾಝ್ ಹಾಗೂ ಸಹಶಿಕ್ಷಕರ ಸಹಕಾರದಿಂದ ಮಕ್ಕಳ ಜತೆ ಸೇರಿ ಹಲಸಿನ ಕಾಯಿಯ ಉಪ್ಪಡ್ ಪಚ್ಚಿರ್ ಹಾಕುವ ಕಾರ್ಯ ಯಶಸ್ವಿಯಾಗಿ ನಡೆಯಿತು. ಎಸ್‌.ಡಿ.ಎಂ.ಸಿ. ಸದಸ್ಯರು ಊರಿನ ಹಲಸಿನ ಮರದಿಂದ ಹಲಸಿನ ಕಾಯಿಯನ್ನು ಹೊತ್ತು ತಂದು ಮಕ್ಕಳ ಜತೆ ಸೇರಿ ಅದರ ಸೊಳೆ, ಬೀಜ ತೆಗೆದು ಪ್ರತ್ಯೇಕಿಸಿದರು. ಸೊಳೆಯನ್ನು ಉಪ್ಪಿನಲ್ಲಿ ಹಾಕಿದರೆ, ಬೀಜವನ್ನು ಸಂಗ್ರಹಿಸಿಡಲಾಯಿತು.

ಆಷಾಢ ಮಾಸದ ತುಳುನಾಡಿನ ಪ್ರಸಿದ್ಧ ಪಲ್ಯವಾಗಿರುವ ಉಪ್ಪಡ್ ಪಚ್ಚಿರ್ ಮಕ್ಕಳ ಬಿಸಿಯೂಟವನ್ನು ಇನ್ನಷ್ಟು ರುಚಿಕಟ್ಟಾಗಿಸಲಿದೆ. ಇದರ ಬೀಜವನ್ನು ಸಂಬಾರ್‌ನಲ್ಲಿ ಬಳಸುವುದಾಗಿ ಸದಸ್ಯರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಮಕ್ಕಳ ಬಿಸಿಯೂಟಕ್ಕೆ ತೊಗರಿಬೇಳೆಯ ತೋವೆ ಇದ್ದರೆ ಈ ಶಾಲೆಯ ಮಕ್ಕಳಿಗೆ ಹಲಸಿನ ಉಪ್ಪಡ್ ಪಚ್ಚಿರ್‌ ನ ಖಾದ್ಯ ದೊರಕಲಿದೆ. ಊರಿನ ಹಲಸಿನ ಮರಗಳಲ್ಲಿ ಬೆಳೆದು ಮಳೆಗಾಲದಲ್ಲಿ ಕೊಳೆತು ಹೋಗುವ ಹಲಸಿನ ಕಾಯಿಯನ್ನು ಈ ರೀತಿ ಬಳಕೆ ಮಾಡಿದರೆ ಮಕ್ಕಳ ಊಟ ರುಚಿಕಟ್ಟಾಗುವ ಜೊತೆಗೆ ಪೌಷ್ಠಿಕಾಂಶವೂ ದೊರಕುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next