Advertisement
ಈ ಕ್ಯಾಪಿಟರ್ ರೈಲ್ವೇ ನಿಲ್ದಾಣವು ಪ್ರಯಾಣಿಕರಿಗೆ ಏರ್‌ಪೋರ್ಟ್ ಮಾದರಿಯ ಅನುಭವವನ್ನು ಒದಗಿಸಲಿದೆ. ಇಲ್ಲಿ ಐಷಾರಾಮಿ ಹೊಟೇಲ್, ಥೀಮ್ ಆಧರಿತ ಬೆಳಕಿನ ವ್ಯವಸ್ಥೆ, ಎಲ್ಲ ಧರ್ಮಗಳ ಪ್ರಾರ್ಥನಾ ಹಾಲ್, ಎಲ್‌ಇಡಿ ವಾಲ್ ಡಿಸ್‌ಪ್ಲೇ ಹೊಂದಿರುವ ಆರ್ಟ್ ಗ್ಯಾಲರಿ, ಕೇಂದ್ರೀಕೃತ ಎಸಿ ವ್ಯವಸ್ಥೆಯಿರುವ ವೆಯ್ಟಿಂಗ್ ಹಾಲ್, ವಿಶಾಲವಾದ ಟಿಕೆಟಿಂಗ್ ಕೌಂಟರ್, ಮಕ್ಕಳಿಗೆ ಹಾಲುಣಿಸಲು ಕೊಠಡಿ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ನಿರ್ಗಮಿಸುವ ಪ್ರಯಾಣಿಕರಿಗೆ ಪ್ರತ್ಯೇಕ ಹಾದಿ ಮತ್ತು ಸ್ಟೇಶನ್‌ನೊಳಗೆ ಆಗಮಿಸುವವರಿಗೆ ಎರಡು ಸಬ್‌ವೇಗಳನ್ನು ನಿರ್ಮಿಸಲಾಗಿದೆ. ಇನ್ನು, ಇಲ್ಲಿರುವ ಫೈವ್‌ಸ್ಟಾರ್ ಹೊಟೇಲ್ ಅನ್ನು ಖಾಸಗಿ ಕಂಪೆನಿಯು ನಿರ್ವಹಿಸಲಿದೆ.
Related Articles
Advertisement
ಒಟ್ಟು ವಿಸ್ತೀರ್ಣ : 7,400 ಚ.ಮೀಟರ್
ನಿರ್ಮಾಣ ವೆಚ್ಚ : 790 ಕೋಟಿ ರೂ.
ರೈಲು ನಿಲ್ದಾಣ ನವೀಕರಣ ವೆಚ್ಚ : 71.50 ಕೋಟಿ ರೂ.