Advertisement

ಸ್ಪೆಷಲ್‌ ಹ್ಯಾಪ್ಪಿ ಬರ್ತ್‌ಡೇ ಕೊಹ್ಲಿ!

09:07 AM Nov 06, 2017 | Team Udayavani |

ರಾಜ್‌ಕೋಟ್‌: ನ್ಯೂಜಿ ಲ್ಯಾಂಡ್‌ ವಿರುದ್ಧದ ರಾಜ್‌ಕೋಟ್‌ ಟಿ20 ಪಂದ್ಯದ ಸೋಲಿನ ಹೊರ ತಾಗಿಯೂ ಟೀಮ್‌ ಇಂಡಿಯಾಕ್ಕೆ ಸಂಭ್ರಮಿಸಲು ಮಹತ್ತರವಾದ ಕಾರಣ ವೊಂದು ಸಿಕ್ಕಿದೆ. ಅದೆಂದರೆ, ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಅವರ ಜನ್ಮದಿನ!

Advertisement

ವಿರಾಟ್‌ ಕೊಹ್ಲಿ ರವಿವಾರ 29ರ ಹರೆಯಕ್ಕೆ ಕಾಲಿರಿಸಿದರು. ಈ ಸಂದರ್ಭದಲ್ಲಿ ಸಹ ಆಟಗಾರರ ಜತೆ ಕೇಕ್‌ ಕತ್ತರಿಸಿ ಬರ್ತ್‌ಡೇ ಪಾರ್ಟಿ ನಡೆಸಿದರು. ಮುಖಕ್ಕೆಲ್ಲ ಕೇಕ್‌ ಮೆತ್ತಿಸಿ ಕೊಂಡ ಕೊಹ್ಲಿ ಅವರನ್ನು ಕಾಣುವುದೇ ಒಂದು ಖುಷಿಯ ಸಂಗತಿಯಾಗಿತ್ತು!

ಶನಿವಾರ ರಾತ್ರಿ ನಡೆದ ಕೊಹ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ಟೀಮ್‌ ಇಂಡಿಯಾ ಸದಸ್ಯರ ಜತೆ ಕೋಚ್‌ ರವಿಶಾಸ್ತ್ರಿ ಕೂಡ ಸೇರಿದ್ದರು. ಕೊಹ್ಲಿ ಕೇಕ್‌ ಕತ್ತರಿಸಿದ ಬಳಿಕ ಸಹ ಆಟಗಾರರೆಲ್ಲ ಸೇರಿಕೊಂಡು ಕಪ್ತಾನನ ಮುಖಕ್ಕೆ ಕೇಕ್‌ ಮೆತ್ತತೊಡಗಿದರು. 

ಬಿಸಿಸಿಐ “ಹ್ಯಾಪ್ಲಿ ಬರ್ತ್‌ಡೇ ವಿರಾಟ್‌’ ಎಂದು ಟ್ವೀಟ್‌ ಮಾಡಿ ಕೊಹ್ಲಿಗೆ ಶುಭ ಹಾರೈಸಿದೆ. ಅಭಿಮಾನಿ ಗಳಿಂದ ಶುಭ ಸಂದೇಶದ ಮಹಾ ಪೂರವೇ ಹರಿದು ಬಂದಿದೆ. ಇವರೆಲ್ಲರಿಗೂ ವಿರಾಟ್‌ ಕೊಹ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.

“ನಿಮ್ಮೆಲ್ಲರ ಪ್ರೀತಿ, ಶುಭ ಹಾರೈಕೆಗಳಿಗೆ ಥ್ಯಾಂಕ್ಸ್‌. ಗಾಡ್‌ ಬ್ಲೆಸ್‌ ಯೂ ಆಲ್‌…’ ಎಂದು ಕೊಹ್ಲಿ ಟ್ವೀಟ್‌ ಮಾಡಿದ್ದಾರೆ.
ವಿರಾಟ್‌ ಕೊಹ್ಲಿ ಅವರ ಈ ವರ್ಷದ ಹುಟ್ಟಿದ ಹಬ್ಬದ ಸಂಭ್ರಮಕ್ಕೆ ಸಾಕಷ್ಟು ಕಾರಣಗಳಿದ್ದವು. ಓರ್ವ ನಾಯಕ ಹಾಗೂ ಬ್ಯಾಟ್ಸ್‌ಮನ್‌ ಆಗಿ 2017ರ ಋತು ಎಂಬುದು ಕೊಹ್ಲಿ ಪಾಲಿಗೆ ಸ್ಮರಣೀಯ. ಸತತ 9 ಏಕದಿನ ಗೆಲುವು, ಸತತವಾಗಿ ಅತ್ಯಧಿಕ ಗೆಲುವು ಸಾಧಿಸಿದ ನಾಯಕನಾಗಿ ಧೋನಿ ದಾಖಲೆಯನ್ನು ಸರಿದೂಗಿಸಿದ್ದು, ಶ್ರೀಲಂಕಾದಲ್ಲಿ 9-0 ಕ್ಲೀನ್‌ಸಿÌàಪ್‌ ಸಾಧನೆ, ಅತೀ ಕಡಿಮೆ ಏಕದಿನ ಇನ್ನಿಂಗ್ಸ್‌ಗಳಲ್ಲಿ 9 ಸಾವಿರ ರನ್‌, ಏಕದಿನ ಶತಕಗಳ ಯಾದಿಯಲ್ಲಿ ದ್ವಿತೀಯ ಸ್ಥಾನಕ್ಕೆ ಲಗ್ಗೆ… ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಕಾರಣಕ್ಕಾಗಿ ಕೊಹ್ಲಿ ಅವರ 29ನೇ ಬರ್ತ್‌ಡೇ ನಿಜಕ್ಕೂ ಸ್ಪೆಷಲ್‌!

Advertisement

ಬ್ಯಾಟಿಂಗ್‌ನಲ್ಲಿ ಎಡವಿದೆವು: ಕೊಹ್ಲಿ
ರಾಜ್‌ಕೋಟ್‌: ನ್ಯೂಜಿಲ್ಯಾಂಡಿನ ಪರಿಣಾಮಕಾರಿ ಪ್ರದರ್ಶನವನ್ನು ಶ್ಲಾ ಸಿದ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ, ಭಾರತ ತಂಡದ ಬ್ಯಾಟಿಂಗ್‌ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ ಎಂದಿದ್ದಾರೆ.

“ನಿಜಕ್ಕೂ ನಮ್ಮ ಬ್ಯಾಟಿಂಗ್‌ ಉತ್ತಮ ಮಟ್ಟದಲ್ಲಿರಲಿಲ್ಲ. ಇನ್ನೂರರಷ್ಟು ರನ್‌ ಬೆನ್ನಟ್ಟುವಾಗ ಪ್ರತಿಯೊಬ್ಬರೂ ಕ್ರೀಸಿಗೆ ಅಂಟಿಕೊಳ್ಳಬೇಕು, ಅಥವಾ ಒಬ್ಬ ಬ್ಯಾಟ್ಸ್‌ಮನ್‌ ಇನ್ನೂರರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಪೇರಿಸಬೇಕು. ನಾನು ನನ್ನ ಪ್ರಯತ್ನವನ್ನೇನೋ ಮಾಡಿದ್ದೇನೆ. ಕೊನೆಯಲ್ಲಿ ಧೋನಿ ಕೂಡ ಹೋರಾಟವೊಂದನ್ನು ಸಂಘಟಿಸಿದರು. ಆದರೆ ಅವರ ಮುಂದೆ ಕಠಿನ ಗುರಿ ಇತ್ತು. ಕೆಲವೊಮ್ಮೆ ಏನಾಗುತ್ತದೆಂದರೆ, ಬ್ಯಾಟ್ಸ್‌ಮನ್‌ ಭಾರೀ ಜೋಶ್‌ನಲ್ಲಿರುತ್ತಾನೆ, ಆದರೆ ಆತನಿಗೆ ಹೆಚ್ಚು ಎಸೆತಗಳನ್ನು ಎದುರಿಸಲು ಸಾಧ್ಯವಾಗುವುದಿಲ್ಲ…’ ಎಂದು ಕೊಹ್ಲಿ ರಾಜ್‌ಕೋಟ್‌ ಸೋಲಿನ ಹೇಳಿದರು.

“ನ್ಯೂಜಿಲ್ಯಾಂಡ್‌ ಬ್ಯಾಟಿಂಗ್‌ ಆರಂಭ ಅಮೋಘ ವಾಗಿತ್ತು. ನಾವು ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಹೌದು, ಒಂದು ಹಂತದಲ್ಲಿ ನ್ಯೂಜಿಲ್ಯಾಂಡ್‌ ಸ್ಕೋರ್‌ 235-240ರ ಗಡಿ ಮುಟ್ಟುತ್ತದೆಂದೇ ಭಾವಿಸಲಾಗಿತ್ತು. ಆದರೆ ಬುಮ್ರಾ ಮತ್ತು ಭುವಿ ಸೇರಿಕೊಂಡು ನಿಯಂತ್ರಣ ಹೇರಿದರು’ ಎಂದು ಶ್ಲಾ ಸಿದರು.

Advertisement

Udayavani is now on Telegram. Click here to join our channel and stay updated with the latest news.

Next