Advertisement

ಬಾಳೆದಿಂಡಿನ ಸವಿರುಚಿ

12:30 AM Feb 01, 2019 | Team Udayavani |

ಬಾಳೆಗೊನೆ ಕಡಿದಾಗ ಸಿಗುವ ಬಾಳೆದಿಂಡನ್ನು ಹಾಗೆಯೇ ಎಸೆಯದಿರಿ. ಇದು ಆರೋಗ್ಯಕ್ಕೆ ಬಹಳಷ್ಟು ಒಳ್ಳೆಯದು. ಮೂತ್ರಕೋಶದ ಕಲ್ಲು ಹೋಗಲಾಡಿಸುವಲ್ಲಿ ಇದರ ಪಾತ್ರ ಮಹತ್ತರವಾಗಿದೆ. ದೇಹಕ್ಕೆ ತಂಪನ್ನು ನೀಡುವ ಬಾಳೆದಿಂಡಿನ ಕೆಲವು ಅಡುಗೆಗಳು ನಿಮಗಾಗಿ…

Advertisement

ಬಾಳೆದಿಂಡು ದೋಸೆ
ಬೇಕಾಗುವ ಸಾಮಗ್ರಿ:
ಬೆಳ್ತಿಗೆ ಅಕ್ಕಿ - ಎರಡು ಕಪ್‌, ಹೆಚ್ಚಿದ ಬಾಳೆ ದಿಂಡು- ಮೂರು ಕಪ್‌, ತೆಂಗಿನ ತುರಿ- ಅರ್ಧ ಕಪ್‌, ಕರಿಬೇವು- ನಾಲ್ಕು ಗರಿ, ರುಚಿಗೆ ತಕ್ಕಷ್ಟು ಉಪ್ಪು .

ತಯಾರಿಸುವ ವಿಧಾನ: ಬಾಳೆದಿಂಡಿನ ಹೊರಗಿನ ಸಿಪ್ಪೆಯನ್ನು ತೆಗೆದು ಒಳಗಿನ ತಿರುಳನ್ನು ವೃತ್ತಾಕಾರವಾಗಿ ಹೆಚ್ಚಿ , ನಾರನ್ನು ಕೈ ಬೆರಳಿನಲ್ಲಿ ಸುತ್ತಿ ತೆಗೆದು, ಸಣ್ಣಗೆ ಹೆಚ್ಚಿಟ್ಟು ಮಜ್ಜಿಗೆಯಲ್ಲಿ ಹತ್ತು ನಿಮಿಷ ಹಾಕಿಡಿ. ನೆನೆಸಿದ ಅಕ್ಕಿಯ ಜೊತೆ ತೆಂಗಿನ ತುರಿ ಹಾಕಿ ಸ್ವಲ್ಪ$ರುಬ್ಬಿದ ನಂತರ ಬಾಳೆದಿಂಡಿನ ಹೋಳುಗಳನ್ನು ಮಜ್ಜಿಗೆಯಿಂದ ಹಿಂಡಿ ತೆಗೆದು ಇದಕ್ಕೆ ಹಾಕಿ ಕರಿಬೇವು, ಉಪ್ಪು$ಹಾಕಿ ನಯವಾಗಿ ರುಬ್ಬಿಕೊಳ್ಳಿ. ನೀರು ಸೇರಿಸಿ ಹಿಟ್ಟನ್ನು ಹದಗೊಳಿಸಿ ಕಾದ ತವಾದಲ್ಲಿ ತೆಳ್ಳಗೆ ಹರಡಿ ಮೇಲಿನಿಂದ ತುಪ್ಪಹಾಕಿ ಗರಿ ಗರಿಯಾಗುವವರೆಗೆ ಕಾಯಿಸಿ ತೆಗೆಯಿರಿ. ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಿರಿ.

ಬಾಳೆದಿಂಡು ಗುಳಿ ಅಪ್ಪ(ಸುಟ್ಟವು)
ಬೇಕಾಗುವ ಸಾಮಗ್ರಿ: ಬೆಳ್ತಿಗೆ ಅಕ್ಕಿ- ಎರಡು ಕಪ್‌, ಹೆಚ್ಚಿದ ಬಾಳೆದಿಂಡು- ಎರಡು ಕಪ್‌, ಮೊಸರು- ಅರ್ಧ ಕಪ್‌, ತೆಂಗಿನಕಾಯಿ ತುರಿ- ಅರ್ಧ ಕಪ್‌, ಉದ್ದಿನ ಬೇಳೆ- ಒಂದು ಚಮಚ, ಕರಿಬೇವು- ಮೂರು ಗರಿ, ಹಸಿಮೆಣಸಿನಕಾಯಿ- ಮೂರು, ಈರುಳ್ಳಿ- ಒಂದು, ಶುಂಠಿ- ಸಣ್ಣ ತುಂಡು, ರುಚಿಗೆ ಉಪ್ಪು.

ತಯಾರಿಸುವ ವಿಧಾನ: ಅಕ್ಕಿಯ ಜೊತೆಗೆ ಉದ್ದಿನಬೇಳೆಯನ್ನು ಹಾಕಿ ಎರಡು ಗಂಟೆ ನೆನೆಸಿಡಿ. ಇದಕ್ಕೆ ಹೆಚ್ಚಿದ ಬಾಳೆದಿಂಡಿನ ಹೋಳು, ಕರಿಬೇವು, ಹಸಿಮೆಣಸಿನಕಾಯಿ, ಶುಂಠಿ, ಉಪ್ಪು ಹಾಕಿ ತರಿ ತರಿಯಾಗಿ ರುಬ್ಬಿ ಮುಚ್ಚಿ ಟ್ಟುಕೊಳ್ಳಿ. ಮಾರನೆಯ ದಿನ (ಸಾಧಾರಣ ಎಂಟು ಗಂಟೆಯ ನಂತರ) ರುಬ್ಬಿದ ತೆಂಗಿನತುರಿ, ಮೊಸರು, ಸಣ್ಣಗೆ ಹೆಚ್ಚಿದ ಈರುಳ್ಳಿಗಳನ್ನು ಹಾಕಿ ಚೆನ್ನಾಗಿ ಹಿಟ್ಟನ್ನು (ಇಡ್ಲಿ ಹಿಟ್ಟಿನ ತರ)ಹದಗೊಳಿಸಿರಿ. ಗುಳಿ ಇರುವ ತವಾದಲ್ಲಿ ತುಪ್ಪಹಾಕಿ ಕಾದೊಡನೆ ಹಿಟ್ಟನ್ನು ಹರಡಿ ಎರಡೂ ಬದಿ ಕಾಯಿಸಿ ತೆಗೆಯಿರಿ. ಜೀರಿಗೆ ಚಟ್ನಿಯೊಂದಿಗೆ ತಿನ್ನಲು ರುಚಿಯಾಗಿರುತ್ತದೆ.

Advertisement

ಬಾಳೆದಿಂಡಿನ ಚಟ್ನಿ
ಬೇಕಾಗುವ ಸಾಮಗ್ರಿ: ಹೆಚ್ಚಿದ ಬಾಳೆದಿಂಡು- ಎರಡು ಕಪ್‌, ತೆಂಗಿನತುರಿ- ಒಂದು ಕಪ್‌, ಮೊಸರು- ಒಂದು ಕಪ್‌, ಹಸಿಮೆಣಸಿನಕಾಯಿ- ಎರಡು, ಒಣ ಮೆಣಸಿನಕಾಯಿ- ಒಂದು, ಶುಂಠಿ- ಸಣ್ಣ ತುಂಡು, ರುಚಿಗೆ ಉಪ್ಪು$.

ತಯಾರಿಸುವ ವಿಧಾನ: ತೆಂಗಿನ ತುರಿಯೊಂದಿಗೆ ಹೆಚ್ಚಿದ ಬಾಳೆದಿಂಡು, ಹಸಿಮೆಣಸಿನಕಾಯಿ, ಒಣಮೆಣಸಿನಕಾಯಿ, ಶುಂಠಿ, ಉಪ್ಪು$ ಸೇರಿಸಿ ನಯವಾಗಿ ರುಬ್ಬಿ, ಮೊಸರು ಸೇರಿಸಿ ಹದಗೊಳಿಸಿಕೊಳ್ಳಿ. ಸಾಸಿವೆ ಒಗ್ಗರಣೆಯೊಂದಿಗೆ ಕರಿಬೇವು ಸೇರಿಸಿ ಅಲಂಕರಿಸಿ ಸವಿಯಿರಿ. ದೇಹದ ಉಷ್ಣತೆ ಕಡಿಮೆ ಮಾಡಲು ಸಹಕಾರಿ.

ಬಾಳೆದಿಂಡು ಜ್ಯೂಸ್‌
ಬೇಕಾಗುವ ಸಾಮಗ್ರಿ:
ಹೆಚ್ಚಿದ ಬಾಳೆದಿಂಡು- ಒಂದು ಕಪ್‌, ಅರ್ಧ ಕಪ್‌- ನೀರು, ಏಲಕ್ಕಿ- ಎರಡು, ಬೆಲ್ಲ- ಸಣ್ಣತುಂಡು, ಕರಿಮೆಣಸಿನ ಪುಡಿ- ಒಂದು ಚಮಚ, ಚಿಟಿಕೆ ಉಪ್ಪು.

ತಯಾರಿಸುವ ವಿಧಾನ: ಹೆಚ್ಚಿದ ಬಾಳೆದಿಂಡನ್ನು ಸ್ವಲ್ಪ$ ರುಬ್ಬಿಕೊಳ್ಳಿ. ಇದಕ್ಕೆ ಏಲಕ್ಕಿ, ಬೆಲ್ಲ, ಉಪ್ಪು$ಸೇರಿಸಿ ಸ್ವಲ್ಪ$ನೀರು ಸೇರಿಸಿ ನಯವಾಗಿ ರುಬ್ಬಿ ಸೋಸಿಕೊಂಡು ಕರಿಮೆಣಸಿನ ಪುಡಿ ಸೇರಿಸಿ ನೀರು ಸೇರಿಸಿ ಒಂದು ಕಪ್‌ ಮಾಡಿ ಹದಗೊಳಿಸಿಕೊಳ್ಳಿ. ತಂಪಾದ ಆರೋಗ್ಯಕರ 
ಪಾನೀಯ ರೆಡಿ.

ಬಾಳೆದಿಂಡು ಕುಕ್ಕರ್‌ ಕೇಕ್‌
ಬೇಕಾಗುವ ಸಾಮಗ್ರಿ: ಬೆಳ್ತಿಗೆ ಅಕ್ಕಿ- ಒಂದು ಕಪ್‌, ಹೆಚ್ಚಿದ ಬಾಳದಿಂಡು- ಎರಡೂವರೆ ಕಪ್‌, ಬೆಲ್ಲ- ಒಂದೂವರೆ ಕಪ್‌, ಏಲಕ್ಕಿ- ಎರಡು, ತುಪ್ಪ-ಮೂರು ಚಮಚ, ರುಚಿಗೆ ಉಪ್ಪು.

ತಯಾರಿಸುವ ವಿಧಾನ: ನೆನೆಸಿದ ಅಕ್ಕಿಯ ಜೊತೆ ಹೆಚ್ಚಿದ ಬಾಳೆದಿಂಡು, ಬೆಲ್ಲ, ಏಲಕ್ಕಿ, ಉಪ್ಪು$ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಒಲೆಯ ಮೇಲಿಟ್ಟು ಸಣ್ಣ ಉರಿಯಲ್ಲಿ ದಪ್ಪಗಾಗುವವರೆಗೆ ಕಾಯಿಸಿ. ಆರಿದ ನಂತರ ತುಪ್ಪಹಚ್ಚಿದ ಪಾತ್ರೆಗೆ ಹಾಕಿ ಕುಕ್ಕರ್‌ನಲ್ಲಿಟ್ಟು ನಲುವತ್ತೆ„ದು ನಿಮಿಷ ಬೇಯಿಸಿ. ಆರಿದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ.

(ವಿ. ಸೂ: ಕುಕ್ಕರಿನ ಒಳಗೆ ಅರ್ಧ ಇಂಚು ದಪ್ಪಗೆ ಉಪ್ಪನ್ನು ಹರಡಿ. ಒಲೆಯ ಮೇಲಿಟ್ಟು ಹತ್ತು ನಿಮಿಷ ಬಿಸಿಯಾದ ನಂತರ ಅದರ ಮೇಲೆ ಕೇಕ್‌ ಮಿಶ್ರಣವನ್ನಿಟ್ಟು ಗ್ಯಾಸ್ಕೆಟ್‌ ರಹಿತ ಮುಚ್ಚಳ ಮುಚ್ಚಿ ಹದ ಉರಿಯಲ್ಲಿ ಬೇಯಿಸಿ.)

ವಿಜಯಲಕ್ಷ್ಮಿ ಕೆ. ಎನ್‌.

Advertisement

Udayavani is now on Telegram. Click here to join our channel and stay updated with the latest news.

Next