ಬೆಂಗಳೂರು: ವೀಸಾ ಮತ್ತು ಪಾಸ್ ಪೋರ್ಟ್ ಅವಧಿ ಮುಗಿದರೂ ನಗರದಲ್ಲಿ ನೆಲೆಸಿರುವ ವಿದೇಶಿಗರ ತಪಾಸಣೆಯನ್ನು ಕೇಂದ್ರ ಅಪರಾಧ ಪತ್ತೆ ದಳದ ಅಧಿಕಾರಿಗಳು ಇಂದು ಮುಂಜಾನೆ ನಡೆಸಿತು. ಈ ವೇಳೆ ಅಕ್ರಮವಾಗಿ ನೆಲೆಸಿದ್ದ 20 ಆಫ್ರಿಕನ್ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದೆ.
ಇಂದು ಮಂಜಾನೆ 120 ಸಿಸಿಬಿ ಅಧಿಕಾರಿಗಳ ತಂಡ ಹೆನ್ನೂರು, ಕೊತನೂರು, ಬಾಗ್ಲೂರು ಕಡೆಗಳಲ್ಲಿ ನೆಲೆಸಿರುವ 85 ವಿದೇಶಿಗರ ನಿವಾಸಕ್ಕೆ ದಾಳಿ ನಡೆಸಿ ವೀಸಾ ಪಾಸ್ ಪೋರ್ಟ್ ಪರಿಶೀಲನೆ ನಡೆಸಿತು. ಈ ವೇಳೆ 20 ಆಫ್ರಿಕನ್ ಪ್ರಜೆಗಳ ವೀಸಾ ಅವಧಿ ಮುಗಿದಿರುವುದು ಬೆಳಕಿಗೆ ಬಂದಿದೆ. ಅವರನ್ನು ಬಂಧಿಸಲಾಗಿದೆ.
ಅದಲ್ಲದೆ ಅವರುಗಳ ಬಳಿ ಭಾರತೀಯ ರೂಪಾಯಿ, ಅಮೇರಿಕನ್ ಡಾಲರ್, ಯುಕೆ ಪೌಂಡ್ ಗಳ ನಕಲಿ ನೋಟುಗಳು, ಲ್ಯಾಪ್ ಟಾಪ್, ಕೆಲವು ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಇವರುಗಳು ಸೈಬರ್ ಕ್ರೈಮ್ ನಲ್ಲಿ ತೊಡಗಿದ್ದರು ಎನ್ನಲಾಗಿದೆ.