Advertisement

Special Drive: ತ್ರಿಬಲ್ ರೈಡ್, ಮಕ್ಕಳಿಂದ ದ್ವಿಚಕ್ರ ವಾಹನ ಚಾಲನೆ ತಡೆಗೆ ಸ್ಪೇಷಲ್ ಡ್ರೈವ್

11:52 AM Oct 28, 2023 | Team Udayavani |

ಕಲಬುರಗಿ: ನಗರದಲ್ಲಿ ಹೆಚ್ಚುತ್ತಿರುವ ದ್ವಿಚಕ್ರ ವಾಹನ ತ್ರಿಬಲ್ ರೈಡಿಂಗ್, ಅತಿ ಶಬ್ದದಿಂದ ವಾಹನ ಓಡಿಸುವಿಕೆ ಹಾಗೂ ವನ್ ವೇ ದಲ್ಲಿ ಚಾಲನೆ ತಡೆಯಲು ಸ್ಪೆಷಲ್ ಡ್ರೈವ್ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಮಹಾನಗರ ಪೊಲೀಸ್ ಆಯುಕ್ತ ಆರ್ ಚೇತನ ತಿಳಿಸಿದರು.

Advertisement

ದ್ವಿಚಕ್ರ ವಾಹನಗಳ ಸಂಚಾರ ನಿಯಮಗಳ ಉಲ್ಲಂಘನೆಯಿಂದ ಸಾರ್ವಜನಿಕವಾಗಿ ತೊಂದರೆಯಾಗುತ್ತಿದೆಯಲ್ಲದೇ ಅಪಘಾತಗಳಿಗೂ ಕಾರಣವಾಗುತ್ತಿದೆ. ಹೀಗಾಗಿ ತಡೆಯಲು ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪಾಲಕರು ಇನ್ನೂ 18 ವರ್ಷವಾಗದ ಹಾಗೂ ಡ್ರೈವಿಂಗ್ ಲೈಸೆನ್ಸ್ ಇಲ್ಲದ ಮಕ್ಕಳ ಕೈಗೆ ದ್ವಿಚಕ್ರ ವಾಹನ ಕೊಡಬಾರದು. ಇಷ್ಟೂ ಮೀರಿ ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ಉಲ್ಲಂಘನೆ ಮಾಡಿದ್ದಲ್ಲಿ ಕ್ರಮ ಕೈಗೊಳ್ಳುವುದು ನಿಶ್ಚಿತ. ‌ಸೈಲೆನ್ಸ್ ರ್ ತೆಗೆದು ಶಬ್ದ ಮಾಡುವುದನ್ನು ತಡೆಗಟ್ಟಲು ಮೆಕ್ಯಾನಿಕ್ ದವರಿಗೆ ತಿಳಿ ಹೇಳಲಾಗಿದೆಯಲ್ಲದೇ ಕೆಲ ಮೆಕ್ಯಾನಿಕ ವಿರುದ್ದ ಕ್ರಮ ಸಹ ಕೈಗೊಳ್ಳಲಾಗಿದೆ ಎಂದು ವಿವರಣೆ ನೀಡಿದರು.

ಇದನ್ನೂ ಓದಿ: BIGG BOSS: ಜೈಲಿನಿಂದ ಬಿಡುಗಡೆ ಬಳಿಕ ಮತ್ತೆ ಬಿಗ್‌ ಬಾಸ್‌ ಮನೆಗೆ ವರ್ತೂರು ಸಂತೋಷ್ ಎಂಟ್ರಿ?

Advertisement

Udayavani is now on Telegram. Click here to join our channel and stay updated with the latest news.

Next