Advertisement
ಅವರೆಕಾಳಿನ ಉಸ್ಲಿಬೇಕಾಗುವ ಸಾಮಗ್ರಿ :ಅವರೆಕಾಳು- 2 ಕಪ್, ತೆಂಗಿನ ತುರಿ- ಅರ್ಧ ಕಪ್, ಕಾಳುಮೆಣಸಿನ ಪುಡಿ- ಅರ್ಧ ಚಮಚ, ಜೀರಿಗೆ ಪುಡಿ-1 ಚಮಚ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು- ಕಾಲು ಕಪ್, ಹಸಿಮೆಣಸಿನಕಾಯಿ- 5- 6, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ- 4 ಚಮಚ, ಸಾಸಿವೆ-1 ಚಮಚ, ಉದ್ದಿನಬೇಳೆ- 3 ಚಮಚ, ಅರಿಸಿನ- ಅರ್ಧ ಚಮಚ, ಇಂಗು- ಕಾಲು ಚಮಚ. ಮಾಡುವ ವಿಧಾನ: ಅವರೆಕಾಳುಗಳನ್ನು ಎಣ್ಣೆಯಲ್ಲಿ ಬಾಡಿಸಿ, ಸ್ವಲ್ಪ ನೀರು ಹಾಕಿ ಬೇಯಿಸಿ. ಸಾಸಿವೆ, ಉದ್ದು, ಅರಿಸಿನ, ಇಂಗು ಸೇರಿಸಿ ಒಗ್ಗರಣೆ ತಯಾರಿಸಿ.ಇದಕ್ಕೆ ಹಸಿಮೆಣಸಿನಕಾಯಿ, ಕರಿಬೇವು ಹಾಕಿ ಬಾಡಿಸಿ, ಬೇಯಿಸಿದ ಅವರೆಕಾಳು, ಜೀರಿಗೆ ಪುಡಿ, ಕಾಳುಮೆಣಸಿನ ಪುಡಿ, ಉಪ್ಪು ಸೇರಿಸಿ ಕಲಕಿ. ಅನಂತರ ಅದಕ್ಕೆ ತೆಂಗಿನ ತುರಿ ಹಾಗೂ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ಬೇಕಾಗುವ ಸಾಮಗ್ರಿ: ಅವರೆಕಾಳು- 1 ಕಪ್, ತೆಂಗಿನ ತುರಿ- 1 ಕಪ್, ಸಾಸಿವೆ- 1 ಚಮಚ, ಮೆಂತ್ಯ- ಅರ್ಧ ಚಮಚ, ಹಸಿಮೆಣಸಿನಕಾಯಿ- 5- 6, ಕೊತ್ತಂಬರಿ ಸೊಪ್ಪು- 3 ಚಮಚ, ಕರಿಬೇವಿನ ಸೊಪ್ಪು, ಉಪ್ಪು- ರುಚಿಗೆ ತಕ್ಕಷ್ಟು, ಬೆಲ್ಲ- 2 ಚಮಚ. ಒಗ್ಗರಣೆಗೆ- ಎಣ್ಣೆ- 3 ಚಮಚ, ಸಾಸಿವೆ- 1 ಚಮಚ,
ಇಂಗು-ಕಾಲು ಚಮಚ, ಅರಿಸಿನ-ಅರ್ಧ ಚಮಚ ಮಾಡುವ ವಿಧಾನ: ಅವರೆಕಾಳುಗಳನ್ನು ಸ್ವಲ್ಪ ಎಣ್ಣೆ ಯಲ್ಲಿ ಹುರಿಯಿರಿ. ಸಾಸಿವೆ, ಮೆಂತ್ಯೆ ಸೇರಿಸಿ ಹುರಿದು ಪುಡಿ ಮಾಡಿ. ಇದಕ್ಕೆ ಅವರೆಕಾಳು, ತೆಂಗಿನ ತುರಿ, ಹಸಿಮೆಣಸಿನಕಾಯಿ, ಕರಿಬೇವು, ಉಪ್ಪು, ಬೆಲ್ಲ, ಕೊತ್ತಂಬರಿ ಸೊಪ್ಪು ಸೇರಿಸಿ ನುಣ್ಣಗೆ ಅರೆಯಿರಿ. ಬಾಣಲೆಯಲ್ಲಿ ಎಣ್ಣೆ ಕಾಯಿಸ ಲಿಟ್ಟು ಸಾಸಿವೆ- ಇಂಗು- ಅರಿಸಿನ ಸೇರಿಸಿ ಒಗ್ಗರಣೆ ಮಾಡಿ ಚಟ್ನಿಗೆ ಸೇರಿಸಿ. ಅವರೆಕಾಳಿನ ವಡೆ
ಬೇಕಾಗುವ ಸಾಮಗ್ರಿ ಅವರೆಕಾಳು- 2 ಕಪ್, ಕಡಲೆ ಹಿಟ್ಟು- 1 ಕಪ್, ಅಕ್ಕಿ ಹಿಟ್ಟು- ಅರ್ಧ ಕಪ್, ತೆಂಗಿನ ತುರಿ- 1 ಕಪ್, ಕತ್ತರಿಸಿದ ಈರುಳ್ಳಿ- ಅರ್ಧ ಕಪ್, ಹಸಿಮೆಣಸಿನಕಾಯಿ- 2-3, ಜೀರಿಗೆ- 1 ಚಮಚ, ಪುದೀನಾ ಸೊಪ್ಪು, ಕೊತ್ತಂಬರಿ ಸೊಪ್ಪು, ಉಪ್ಪು- ರುಚಿಗೆ ತಕ್ಕಷ್ಟು, ಅಡುಗೆ ಸೋಡಾ- ಕಾಲು ಚಮಚ, ಕರಿಯಲು ಎಣ್ಣೆ. ಮಾಡುವ ವಿಧಾನ ಅವರೆಕಾಳು, ತೆಂಗಿನತುರಿ, ಈರುಳ್ಳಿ, ಹಸಿಮೆಣಸಿನಕಾಯಿ, ಜೀರಿಗೆ, ಪುದೀನಾ ಸೊಪ್ಪು, ಕೊತ್ತಂಬರಿ ಸೊಪ್ಪನ್ನು ನುಣ್ಣಗೆ ಅರೆದು, ಕಡಲೆ ಹಿಟ್ಟು ಹಾಗೂ ಅಕ್ಕಿಹಿಟ್ಟಿನೊಂದಿಗೆ ಸೇರಿಸಿ. ಮಿಶ್ರಣಕ್ಕೆ ಉಪ್ಪು ಹಾಗೂ ಸೋಡಾ ಬೆರೆಸಿ ಸ್ವಲ್ಪವೇ ನೀರು ಹಾಕಿ ಗಟ್ಟಿಯಾಗಿ ಕಲಸಿ. ಕಲಸಿದ ಹಿಟ್ಟಿನಿಂದ ಚಿಕ್ಕ ವಡೆಯಾಕಾರದಲ್ಲಿ ತಟ್ಟಿ ಅದನ್ನು ಕಾಯಿಸಿದ ಎಣ್ಣೆಯಲ್ಲಿ ಕರಿದರೆ ವಡೆ ಸಿದ್ಧ.
Related Articles
ಬೇಕಾಗುವ ಸಾಮಗ್ರಿ: ಬೇಯಿಸಿದ ಅವರೆಕಾಳು- 1 ಕಪ್, ಅಕ್ಕಿ ಹಿಟ್ಟು- 1 ಕಪ್, ಜೋಳದ ಹಿಟ್ಟು- ಕಾಲು ಕಪ್, ಕಡಲೆ ಹಿಟ್ಟು- ಕಾಲು ಕಪ್, ಗೋಧಿ ಹಿಟ್ಟು- ಕಾಲು ಕಪ್, ತೆಂಗಿನ ತುರಿ- ಅರ್ಧ ಕಪ್, ಹಸಿಮೆಣಸಿನಕಾಯಿ- 4-5, ಕೊತ್ತಂಬರಿ ಸೊಪ್ಪು- ಅರ್ಧ ಕಪ್, ಜೀರಿಗೆ- 3 ಚಮಚ, ಇಂಗು- ಕಾಲು ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ . ಮಾಡುವ ವಿಧಾನ: ಬೇಯಿಸಿದ ಅವರೆಕಾಳು, ಹಸಿಮೆಣಸಿನಕಾಯಿ ಸೇರಿಸಿ ಅರೆಯಿರಿ. ಅರೆದ ಮಿಶ್ರಣಕ್ಕೆ ಎಲ್ಲ ಹಿಟ್ಟುಗಳು, ತೆಂಗಿನ ತುರಿ, ಉಪ್ಪು, ಜೀರಿಗೆ, ಇಂಗು, ಕೊತ್ತಂಬರಿ ಸೊಪ್ಪನ್ನು ಸೇರಿಸಿ ಗಟ್ಟಿಯಾಗಿ ಕಲಸಿ. ಆ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ, ಎಣ್ಣೆ ಸವರಿದ ಬಾಣಲೆ, ಇಲ್ಲವೇ ತವಾದ ಮೇಲೆ ತೆಳ್ಳಗೆ ತಟ್ಟಿ, ಎರಡೂ ಬದಿಗಳನ್ನು ಬೇಯಿಸಿದರೆ, ಅವರೆಕಾಳಿನ ತಾಲೀಪಟ್ಟು ರೆಡಿ.
Advertisement
ಅವರೆಕಾಳಿನ ಉಂಡೆ ಬೇಕಾಗುವ ಸಾಮಗ್ರಿ: ಅವರೆಕಾಳು- 2 ಕಪ್, ಹುರಿಗಡಲೆ ಪುಡಿ- 1 ಕಪ್, ಒಣಕೊಬ್ಬರಿ ತುರಿ- 1 ಕಪ್, ತುರಿದ ಬೆಲ್ಲ- 2 ಕಪ್, ಎಳ್ಳು ಪುಡಿ- 3 ಚಮಚ, ಗಸಗಸೆ ಪುಡಿ- 2 ಚಮಚ, ಏಲಕ್ಕಿ ಪುಡಿ- ಅರ್ಧ ಚಮಚ, ತುಪ್ಪ- 1 ಕಪ್ ಮಾಡುವ ವಿಧಾನ :ಅವರೆಕಾಳುಗಳನ್ನು ಅರ್ಧ ಗಂಟೆ ನೀರಿನಲ್ಲಿ ನೆನೆಸಿ ಬಸಿದು, ನೆರಳಿನಲ್ಲಿ ಒಣಗಿಸಿ, ತರಿತರಿಯಾಗಿ ಪುಡಿ ಮಾಡಿ, ಸಣ್ಣ ಉರಿಯಲ್ಲಿ ಪರಿಮಳ ಬರುವವರೆಗೆ ಹುರಿಯಿರಿ. ಹುರಿಗಡಲೆ ಪುಡಿ, ಒಣಕೊಬ್ಬರಿ ತುರಿಯನ್ನು ಸ್ವಲ್ಪ ಬಿಸಿ ಮಾಡಿ. ಬಾಣಲೆಯಲ್ಲಿ ತುಪ್ಪ ಕಾಯಿಸಿ, ಬೆಲ್ಲ ಸೇರಿಸಿ ಕರಗಿಸಿ. ಅನಂತರ, ಹುರಿದ ಅವರೆಕಾಳಿನ ತರಿ, ಹುರಿಗಡಲೆ ಹಿಟ್ಟು, ಒಣಕೊಬ್ಬರಿ ತುರಿ, ಎಳ್ಳು- ಗಸಗಸೆ ಪುಡಿ ಹಾಗೂ ಏಲಕ್ಕಿ ಪುಡಿ ಸೇರಿಸಿ ಕಲಕಿ ಒಲೆಯಿಂದ ಕೆಳಗಿರಿಸಿ. ಅನಂತರ ಬೇಕಾದ ಗಾತ್ರದಲ್ಲಿ ಉಂಡೆ ಕಟ್ಟಿದರೆ ಅವರೆಕಾಳಿನ ಉಂಡೆ ತಯಾರು. ಜಯಶ್ರೀ ಕಾಲ್ಕುಂದ್ರಿ