Advertisement

ಬಡವರ ಪರ ಕಾಳಜಿ, ಕೆಲಸಕ್ಕೆ ವಿಶೇಷ ದಿನ

02:06 PM Nov 19, 2017 | |

ಮಂಗಳೂರು : ಬಡವರ ಪರಶೇಷ ಕಾಳಜಿ, ಕೆಲಸಕ್ಕೆ ನ. 19 ರಂದು ವಿಶೇಷ ದಿನವೊಂದನ್ನು ಆಚರಿಸಲು ಕೆಥೋಲಿಕ್‌ ಕ್ರೈಸ್ತ ಸಭೆ ನಿರ್ಧರಿಸಿದ್ದು, “ಜಾಗತಿಕ ಬಡವರ ದಿನಾಚರಣೆ’ ಯಾಗಿ ಜಾರಿಗೆ ಬರಲಿದೆ.

Advertisement

ಕೆಥೋಲಿಕರ ಜಗದ್ಗುರು ಪೋಪ್‌ ಫ್ರಾನ್ಸಿಸ್‌ ಅವರು 2016 ನವೆಂಬರ್‌ 13ರಂದು ಅಂತಾರಾಷ್ಟ್ರೀಯ ದಯೆಯ ವರ್ಷಾಚರಣೆಯ ಸಮಾರೋಪದ ವೇಳೆ ಚರ್ಚ್‌ ಕ್ಯಾಲೆಂಡರಿನ 33 ನೇ ರವಿವಾರ (ನ. 19) ಬಡವರ ದಿನ ವನ್ನಾಗಿ ಆಚರಿಸುವಂತೆ ಕರೆ ನೀಡಿದ್ದರು. ಆ ಬಳಿಕ 2017 ಜೂನ್‌ 13ರಂದು ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ ನೆನಪಿಸಿದ್ದರು.

ವ್ಯಾಟಿಕನ್‌ ನಲ್ಲಿ ನ. 19ರಂದು ಪೋಪ್‌ ಅವರು ಈ ದಿನಾಚರಣೆಯ ಅಂಗವಾಗಿ ಅನೇಕ ಕಾರ್ಯಕ್ರಮ
ಗಳನ್ನು ಹಮ್ಮಿಕೊಂಡಿದ್ದಾರೆ. ಸಶಕ್ತರು ಬಡವರ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವರಿಗೆ ನೆರವಾಗ ಬೇಕು. ನ. 19 ರಂದು ಚರ್ಚ್‌ಗಳಲ್ಲಿ ನಡೆಯುವ ಬಲಿ ಪೂಜೆಗಳಲ್ಲಿ ಬಡವರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸ ಬೇಕೆಂದು ಅವರು ಕ್ರೈಸ್ತ ಸಭೆಗೆ ಕರೆ ನೀಡಿದ್ದಾರೆ.

ಬಡವರು ಮತ್ತು ಬಡತನ ಸೇವೆ ಮತ್ತು ಕಾರುಣ್ಯದ ಕಾರ್ಯಗಳನ್ನು ನೆರವೇರಿಸಲು ಇರುವ ಒಂದು ಮಾರ್ಗವಾಗಿದೆ. ಬಡವರಲ್ಲಿ ದೇವರನ್ನು ಕಾಣ ಬೇಕು. ಅವರನ್ನು ಪ್ರೀತಿಸುವುದರಲ್ಲಿ ದೇವರ ಪ್ರೀತಿಯ ಅನುಭವವನ್ನು ಪಡೆಯ ಬೇಕು ಎಂದು ಪೋಪ್‌ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಮಂಗಳೂರು ಧರ್ಮಪ್ರಾಂತದಲ್ಲಿ ಆಚರಣೆ ಮಂಗಳೂರು ಧರ್ಮ ಪ್ರಾಂತವು ಬಡವರ ದಿನಾಚರಣೆ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ ಎಂದು ಧರ್ಮ ಪ್ರಾಂತದ ಪ್ರಧಾನ ಗುರು ಮೊ| ಡೆನ್ನಿಸ್‌ ಮೊರಾಸ್‌ ಪ್ರಭು ಅವರು ತಿಳಿಸಿದ್ದಾರೆ.

Advertisement

ಎಲ್ಲಾ ಚರ್ಚ್‌ಗಳ ವ್ಯಾಪ್ತಿಯಲ್ಲಿರುವ ಸಶಕ್ತರು ಅಗತ್ಯ ಇರುವ ಬಡ ಜನರಿಗೆ ಮನೆ ರಿಪೇರಿಗೆ ಅಥವಾ ಸ್ವಂತ ಜಾಗ ವಿದ್ದು, ಮನೆ ಇಲ್ಲದವರಿಗೆ ಮನೆ ಕಟ್ಟಿಸಿ ಕೊಡಲು ನೆರವಾಗುವ ಬಗ್ಗೆ ಯೋಜನೆ ರೂಪಿಸುವಂತೆ ಬಿಪಪ್‌ ರೆ| ಡಾ|ಅಲೋಶಿಯಸ್‌ ಪಾರ್ವ್‌ ಡಿ’ಸೋಜಾ ಅವರು ಎಲ್ಲಾ ಚರ್ಚ್‌ಗಳ ಧರ್ಮ ಗುರುಗಳಿಗೆ ಸೂಚಿಸಿದ್ದಾರೆ. ಯಾವುದೇ ಆಡಂಬರವಿಲ್ಲದೆ ಈ ಕಾಯಕವನ್ನು ನಡೆಸುವಂತೆ ನಿರ್ದೇಶನ ನೀಡಿದ್ದಾರೆ. 

ಹಿಲರಿ ಕ್ರಾಸ್ತಾ 

ಮಾತುಗಳು ಕೃತಿ ರೂಪಕ್ಕಿಳಿಯ ಬೇಕು ಬಡವರ ಬಗೆಗಿನ ಕಾಳಜಿ ಕೇವಲ ಮಾತುಗಳಿಗೆ ಸೀಮಿತ ವಾಗದೆ ಅದು ಕೃತಿಯ ಮೂಲಕ ಮೂಡಿ ಬರ ಬೇಕು ಹಾಗೂ ಅರ್ಹ ಫಲಾನುಭವಿಗಳಿಗೆ ತಲುಪ ಬೇಕು.
– ಪೋಪ್‌ ಫ್ರಾನ್ಸಿಸ್‌

Advertisement

Udayavani is now on Telegram. Click here to join our channel and stay updated with the latest news.

Next