Advertisement
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಜನ್ಮದಿನವನ್ನು ಭಾರತದ ವಿಕಾಸ ದಿನವನ್ನಾಗಿ ಆಚರಣೆ ಮಾಡುವ ಜತೆಗೆ ಮೈಸೂರನ್ನು ಇ-ತ್ಯಾಜ್ಯ ಮುಕ್ತ ನಗರವನ್ನಾಗಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಮೈಸೂರು ಮಹಾ ನಗರಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಸ್ವಯಂಸೇವಾ ಸಂಸ್ಥೆಗಳಾದ ಆಸರೆ, ಲೆಟ್ಸ್ ಡು ಇಟ್, ಜಿಎಸ್‌ಎಸ್ ಯೋಗ ಸಂಸ್ಥೆ, ಸಿಐಐ ನೆರವಿನೊಂದಿಗೆ ಈ ಅಭಿಯಾನವು ತಿಂಗಳಿಗೆ ಒಂದು ದಿನ ನಿರಂತರವಾಗಿ ನಡೆಯಲಿದೆ ಎಂದರು.
Related Articles
Advertisement
ಇ-ತ್ಯಾಜ್ಯ ಸಂಗ್ರಹಣೆಗೆ ಮನೆ ಮನೆ ಭೇಟಿ: ಈ ವಿಶೇಷ ಅಭಿಯಾನದ ಅಂಗವಾಗಿ ಸೆ.17ರಂದು ಮೈಸೂರಿನ ಮನೆಗಳಿಂದ ಹಸಿ-ಒಣ ಕಸ ಸಂಗ್ರಹಿಸದೆ ಬರೀ ಇ-ತ್ಯಾಜ್ಯ ಮಾತ್ರ ಸಂಗ್ರಹಿಸಲಾಗುವುದು. ಈ ಅಭಿಯಾನದಲ್ಲಿ 235 ತಳ್ಳುವ ಗಾಡಿಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಒಂದೊಂದು ಗಾಡಿಗೆ ಇಬ್ಬರು ಪೌರ ಕಾರ್ಮಿಕರಂತೆ 470 ಮಂದಿ, 165 ಆಟೋ ಟಿಪ್ಪರ್‌ಗೆ ಇಬ್ಬರು ಪೌರ ಕಾರ್ಮಿಕರಿಬ್ಬರಂತೆ 330 ಮಂದಿಯನ್ನು ಬಳಸಿಕೊಂಡು ಎಲ್ಲಾ ಮನೆಗಳಿಂದಲೂ ಇ-ತ್ಯಾಜ್ಯ ಸಂಗ್ರಹಿಸಲಾಗುತ್ತದೆ. ಈ ಸಂಬಂಧ ವಲಯ ಕಚೇರಿಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು,ಅನುಪಯುಕ್ತ ಇ-ತ್ಯಾಜ್ಯಗಳನ್ನು ತಂದು ಕೊಡಬಹುದಾಗಿದೆ ಎಂದು ಮಹಾ ನಗರಪಾಲಿಕೆ ಆಯುಕ್ತ ಗುರುದತ್ತ ಹೆಗ್ಡೆ ತಿಳಿಸಿದರು.
ಅಂದು ಬಳಸಿದ ಎಲೆಕ್ಟ್ರಾನಿಕ್ ವಸ್ತುಗಳಾದ ಟ್ಯೂಬ್‌ಲೈಟ್, ಚಾರ್ಜರ್, ಮೊಬೈಲ್ ಫೋನ್, ಗಣಕಯಂತ್ರ, ಪ್ರಿಂಟರ್ ಅಲ್ಲದೆ ದುಷ್ಪರಿಣಾಮ ಬೀರುವಂತಹ ವಸ್ತುಗಳನ್ನು ಪಡೆಯಲಾಗುತ್ತದೆ. ಸಾರ್ವಜನಿಕರು ನಗರವನ್ನು ಹೆಚ್ಚು ಸುಂದರವಾಗಿಡಲು ತ್ಯಾಜ್ಯವಸ್ತುಗಳನ್ನು ಪರಿಣಾಮಕಾರಿಯಾಗಿ ಸಂಸ್ಕರಣೆ ಮಾಡುವ ಹಾಗೂ ಪರಿಸರವನ್ನು ಕಾಪಾಡಿ ಸಂರಕ್ಷಿಸಲು ಪಾಲಿಕೆಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.
17ರಂದು ಡಿ.ಎಲ್ ವಿತರಣೆ ಅಭಿಯಾನ: ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನವಾದ ಸೆ.17ರಂದು ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಡಿ.ಎಲ್. ವಿತರಣೆ ಅಭಿಯಾನ ಆಯೋಜಿಸಲಾಗಿದೆ. ಮಧ್ಯಾಹ್ನ 12ಕ್ಕೆ ನಡೆಯಲಿರುವ ಸಮಾರಂಭವನ್ನು ಉಪಮುಖ್ಯಮಂತ್ರಿಗಳೂ ಆದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಉದ್ಘಾಟಿಸಿ ಅರ್ಹರೆಲ್ಲರಿಗೂ ಎಲ್‌ಎಲ್‌ಆರ್, ಡಿಎಲ್ ನೀಡುವ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ರಾಮದಾಸ್ ತಿಳಿಸಿದರು.