Advertisement
ಮಂಗಳೂರು ಆರ್‌ಟಿಒ ಕಚೇರಿಯಲ್ಲಿ ಗುರು ವಾರ ನಡೆದ ಸಾರಿಗೆ ಅದಾಲತ್‌ನ ಅಧ್ಯಕ್ಷತೆ ವಹಿಸಿದ್ದ ಅವರು, ಅಹವಾಲು ಸ್ವೀಕರಿಸಿ ಪ್ರತಿಕ್ರಿಯೆ ನೀಡಿದರು. ಕಾಯ್ದೆಯಂತೆ ವಾಹನಗಳ ನಂಬರ್ ಪ್ಲೇಟ್‌ಗಳಲ್ಲಿ ನಾಮಫಲಕ ಹಾಕುವಂತಿಲ್ಲ. ನಾಮ ಫಲಕ ತೆಗೆಸಲು ವಿಶೇಷ ಅಭಿಯಾನ ನಡೆಸುವಂತೆ ಆರ್‌ಟಿಒ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಬಹುತೇಕ ದ್ವಿಚಕ್ರವಾಹನಗಳು ಇನ್ಶೂರೆನ್ಸ್ ಇಲ್ಲದೆ ಓಡಾಟ ನಡೆಸುತ್ತಿವೆ. ಈ ಬಗ್ಗೆ ಸೂಕ್ತ ತಪಾಸಣೆ ಹಾಗೂ ಕ್ರಮ ಅಗತ್ಯ ಎಂದು ಸಭೆಯಲ್ಲಿ ಜಿ.ಕೆ. ಭಟ್ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವರಾಜ್ ಪಾಟೀಲ್, ವಾಹನ ಗಳಿಗೆ ಇನ್ಶೂರೆನ್ಸ್ ಕಡ್ಡಾಯ ಇಲ್ಲವಾದಲ್ಲಿ ಅಂತಹ ವಾಹನಗಳನ್ನು ವಶಕ್ಕೆ ಪಡೆಯುವ ಅಧಿಕಾರ ಆರ್‌ಟಿಒ ಅಧಿಕಾರಿಗಳಿಗೆ ಇದೆ ಎಂದರು. ಖಾಸಗಿ ಕಾರುಗಳು ಪಾಂಡಿಚೇರಿ ರಿಜಿಸ್ಟ್ರೇಶನ್ ಮೂಲಕ ನಕಲಿ ವಿಳಾಸ ನೀಡಿ ರಾಜ್ಯ ಸರಕಾರಕ್ಕೆ ತೆರಿಗೆ ವಂಚಿಸುತ್ತಿವೆ ಎಂದು ಆಕ್ಷೇಪ ಮನವಿ ಸಲ್ಲಿಸಿದ ಜಿ.ಕೆ. ಭಟ್, ಬಸ್‌ಗಳಲ್ಲಿ ಕನ್ನಡ ಬಳಕೆ ಕಡ್ಡಾಯವಾಗಿದ್ದರೂ ಪಾಲಿಸಲಾಗುತ್ತಿಲ್ಲ ಎಂದು ದೂರಿದರು. ಬಸ್‌ಗಳಲ್ಲಿ ಪ್ರಯಾಣದ ಸ್ಥಳಗಳ ಕುರಿತು ಕನ್ನಡದಲ್ಲಿಯೇ ಕಡ್ಡಾಯವಾಗಿ ಬೋರ್ಡ್ ಹಾಕಲು ಸೂಚಿಸಲಾಗಿದ್ದು, ಖಾಸಗಿ ಬಸ್‌ಗಳ ಮಾಲಕರು ಕೂಡ ಇದಕ್ಕೆ ಸಹ ಕರಿಸ ಬೇಕು ಎಂದು ಹೇಳಿದರು. ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಮಕ್ಕಳ ಸುಗಮ ಪ್ರಯಾಣದ ದೃಷ್ಟಿಯಿಂದ ಬಸ್‌ಗಳ ಫುಟ್‌ಬೋರ್ಡ್‌ಗಳನ್ನು 52 ಸೆಂ.ಮೀ. ಎತ್ತರಕ್ಕೆ ಸೀಮಿತಗೊಳಿಸುವಂತೆ ಕೆಲವು ತಿಂಗಳ ಹಿಂದಿನ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಆದೇಶ ನೀಡಿದ್ದರೂ ಪಾಲನೆ ಯಾಗಿಲ್ಲ ಎಂಬ ದೂರಿಗೆ, ಎಸಿಪಿ (ಸಂಚಾರ) ಮಂಜುನಾಥ್ ಪ್ರತಿಕ್ರಿಯಿಸಿ, ಪ್ರತಿನಿತ್ಯ ಈ ಬಗ್ಗೆ ಬಸ್‌ಗಳ ತಪಾಸಣೆ ನಡೆಸಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದರು.
Related Articles
Advertisement
ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರೊಬ್ಬರು ಮಾತನಾಡಿ, ಗ್ರಾಮಾಂತರ ಪ್ರದೇಶದ ರಿಕ್ಷಾಗಳು ನಗರ ಪ್ರದೇಶಗಳಲ್ಲಿ ಬಾಡಿಗೆ ನಡೆಸುತ್ತಿರುವುದರಿಂದ ತೊಂದರೆಯಾಗುತ್ತಿವೆ. ಮಾತ್ರವಲ್ಲದೆ, ಒಬ್ಬ ವ್ಯಕ್ತಿ ಎರಡೆರಡು ರಿಕ್ಷಾ ಪರ್ಮಿಟ್ ಪಡೆದಿರುವ ಕುರಿತು ದೂರು ಸಲ್ಲಿ ಸಿದ್ದರೂ ಕ್ರಮ ಆಗಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.